ದಮಾಮ್(www.vknews.in): ಕೊಲ್ಲಂ ಮೂಲದ ದಂಪತಿ ಸೌದಿ ಅರೇಬಿಯಾದ ಅಲ್ ಖೋಬಾರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ತ್ರಿಕರುವಾ ಮೂಲದ ಅನೂಪ್ ಮೋಹನ್ (37) ಮತ್ತು ಅವರ ಪತ್ನಿ ರಮ್ಯಾ ಮೋಲ್ (28) ಖೋಬರ್ ತುಖ್ಬಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐದು ವರ್ಷದ ಮಗಳ ಅಳುತ್ತಿರುವುದನ್ನು ಕೇಳಿದ ಅಕ್ಕಪಕ್ಕದವರು ಬಂದು ನೋಡಿದಾಗ ಪತಿ ನೇಣು ಬಿಗಿದುಕೊಂಡಿದ್ದು, ಪತ್ನಿಯ ಶವ ಹಾಸಿಗೆಯ ಮೇಲೆ ಬಿದ್ದಿದ್ದವು.
ಎರಡು ಮೂರು ದಿನಗಳಿಂದ ತಾಯಿ ಹಾಸಿಗೆಯ ಮೇಲೆ ಮೌನವಾಗಿ ಮಲಗಿದ್ದಾಳೆ ಎಂಬುದು ಮಗುವಿನ ಹೇಳಿಕೆ.
ವರದಿಗಳ ಪ್ರಕಾರ, ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸುವ ಪ್ರಯತ್ನ ನಡೆದಿದ್ದು, ಮಗು ಅಳಲು ಶುರುಮಾಡಿದಾಗ ತಂದೆ ಹೊರಗೆ ಹೋಗಿ ನೇಣು ಬಿಗಿದುಕೊಂಡಿದ್ದಾನೆಂದು ಶಂಕಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.