ನವದೆಹಲಿ (www.vknews.in) ; ದೂರಸಂಪರ್ಕ ಕ್ಷೇತ್ರದ ದೈತ್ಯ ಕಂಪನಿ ರಿಲಯನ್ಸ್ ಜಿಯೋ ಆರಂಭವಾಗಿ ಎಂಟು ವರ್ಷ ಪೂರ್ಣಗೊಳಿಸಿದ್ದು, ಸೆಪ್ಟೆಂಬರ್ 5ರಂದು ಈ ಸಂಭ್ರಮವನ್ನು ಆಚರಿಸುತ್ತಿದೆ. ಟ್ರಾಯ್ (TRAI) ಪ್ರಕಾರ, ಜಿಯೋ ಪ್ರಾರಂಭವಾಗುವ ಮೊದಲು ಪ್ರತಿ ಭಾರತೀಯ ಗ್ರಾಹಕರು ಒಂದು ತಿಂಗಳಲ್ಲಿ ಕೇವಲ 410 ಎಂಬಿ ಡೇಟಾವನ್ನು ಬಳಸುತ್ತಿದ್ದರು. ಆದರೆ ಈಗ ಜಿಯೋ ನೆಟ್ವರ್ಕ್ನಲ್ಲಿನ ಡೇಟಾ ಬಳಕೆಯ ಅಂಕಿ- ಅಂಶವು ದಿನಕ್ಕೆ 30.3 ಜಿಬಿಗೆ, ಅಂದರೆ 73 ಪಟ್ಟು ಹೆಚ್ಚಾಗಿದೆ. ಅಂದರೆ ಜಿಯೋ ಬಳಕೆದಾರರು ದಿನಕ್ಕೆ 1 ಜಿಬಿಗಿಂತ ಹೆಚ್ಚು ಬಳಸುತ್ತಿದ್ದಾರೆ. ಉದ್ಯಮದ ಡೇಟಾ ಬಳಕೆ ಅಂಕಿ- ಅಂಶದಂತೆ ಈಗ ದೂರಸಂಪರ್ಕ ವಲಯದಲ್ಲಿ ಬಳಕೆದಾರರು ಸರಾಸರಿ ಪ್ರತಿ ತಿಂಗಳು ಸುಮಾರು 25 ಜಿಬಿ ಡೇಟಾವನ್ನು ಬಳಸುತ್ತಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು 8 ವರ್ಷಗಳ ಹಿಂದೆ ಜಿಯೋವನ್ನು ಪ್ರಾರಂಭಿಸಿದಾಗ ಕೆಲವೇ ವರ್ಷಗಳಲ್ಲಿ ಇದು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ. 13 ಕೋಟಿ 5ಜಿ ಗ್ರಾಹಕರೊಂದಿಗೆ ಜಿಯೋ ಗ್ರಾಹಕರ ಸಂಖ್ಯೆ 49 ಕೋಟಿ ತಲುಪಿದೆ. ಇಂದು ಜಿಯೋ ನೆಟ್ವರ್ಕ್ ವಿಶ್ವದ ಅತಿದೊಡ್ಡ ಮೊಬೈಲ್ ಟ್ರಾಫಿಕ್ ಡೇಟಾ ನೆಟ್ವರ್ಕ್ ಆಗಿದೆ. ಪ್ರಪಂಚದ ಶೇಕಡಾ 8ರಷ್ಟು ಮೊಬೈಲ್ ಡೇಟಾ ಟ್ರಾಫಿಕ್ ಜಿಯೋ ನೆಟ್ವರ್ಕ್ನಲ್ಲಿ ಇರುತ್ತದೆ. ಜಿಯೋ ಬಳಕೆದಾರರು 148.5 ಬಿಲಿಯನ್ ಜಿಬಿ ಡೇಟಾವನ್ನು ಬಳಸುತ್ತಾರೆ. ಇದು ದೇಶದ ಒಟ್ಟು ಡೇಟಾ ಬಳಕೆಯ ಶೇಕಡಾ 60ರಷ್ಟು ಆಗಿದೆ. ಜಿಯೋ ಕಾರಣದಿಂದಾಗಿ ಡೇಟಾ ಬಳಕೆಯ ವಿಷಯದಲ್ಲಿ ಭಾರತವು 155ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಏರಿದೆ.
4ಜಿ ತಂತ್ರಜ್ಞಾನ ಮತ್ತು ವೇಗದಲ್ಲಿ ರಿಲಯನ್ಸ್ ಜಿಯೋ ದಾಖಲೆಯು ಅತ್ಯುತ್ತಮವಾಗಿದೆ. ಈಗ 5ಜಿ ಜೊತೆಗೆ ಕಂಪನಿಯು ದೊಡ್ಡ ಯೋಜನೆಗಳೊಂದಿಗೆ ಬರುತ್ತಿದೆ. ಕಂಪನಿಯು ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI), ಸಂಪರ್ಕಿತ ಡ್ರೋನ್ಗಳು, ಸಂಪರ್ಕಿತ ಆಂಬ್ಯುಲೆನ್ಸ್ಗಳು-ಆಸ್ಪತ್ರೆಗಳು, ಸಂಪರ್ಕಿತ ಜಮೀನು- ಸ್ಥಳಗಳು, ಸಂಪರ್ಕಿತ ಶಾಲಾ-ಕಾಲೇಜುಗಳು, ಇ-ಕಾಮರ್ಸ್, ನಂಬಲಾಗದ ವೇಗದಲ್ಲಿ ಮನರಂಜನೆ, ರೋಬೋಟಿಕ್ಸ್, ಕ್ಲೌಡ್ ಪಿಸಿ, ಗಹನವಾದ ತಂತ್ರಜ್ಞಾನದಂಥದ್ದು ಒಳಗೊಂಡಿದೆ.
ಜಿಯೋ ಪ್ರವೇಶದಿಂದಾಗಿ ದೇಶಕ್ಕೂ ಹಲವು ಆಯಾಮಗಳಲ್ಲಿ ಲಾಭವಾಗಿದೆ. ಉಚಿತ ಕರೆ ಬಂದ ನಂತರ ಮೊಬೈಲ್ ಬಳಸುವುದರ ವೆಚ್ಚ ಕಡಿಮೆಯಾಗಿದೆ. ವಿಶ್ವದ ಅಗ್ಗದ ಡೇಟಾ ಮಾರುಕಟ್ಟೆಗಳಲ್ಲಿ ಭಾರತವೂ ಒಂದು ಎನಿಸಿಕೊಂಡಿದೆ. ಅಗ್ಗದ ಡೇಟಾದಿಂದಾಗಿ ಡಿಜಿಟಲ್ ಆರ್ಥಿಕತೆಯ ಬೆನ್ನೆಲುಬು ಬಲಗೊಂಡಿದೆ. ಆನ್ಲೈನ್ ವಹಿವಾಟುಗಳಲ್ಲಿ ನಾವು ಅಭಿವೃದ್ಧಿ ಹೊಂದಿದ ಮತ್ತು ಸೂಪರ್ ಪವರ್ ದೇಶಗಳನ್ನು ಸಹ ಹಿಂದಿಕ್ಕಿದ್ದೇವೆ. ಇ-ಕಾಮರ್ಸ್ನಲ್ಲಿ ಹೊಸ ಬದಲಾವಣೆ ಬಂದಿದೆ. ಶಾಪಿಂಗ್, ಟಿಕೆಟ್ ಖರೀದಿ, ಮನರಂಜನೆ ಮತ್ತು ಮನೆಯಿಂದಲೇ ಬ್ಯಾಂಕಿಂಗ್ ಎಲ್ಲವೂ ಸುಲಭವಾಗಿದೆ. ಹೊಸ ವ್ಯವಹಾರಗಳು ಹೊರಹೊಮ್ಮಿವೆ ಮತ್ತು ಯುನಿಕಾರ್ನ್ ಕಂಪನಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಅದೇ ವೇಳೆ ಉದ್ಯೋಗವೂ ಹೆಚ್ಚಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.