ನವದೆಹಲಿ (www.vknews.in) : ರಿಲಯನ್ಸ್ ಜಿಯೋ 8ನೇ ವಾರ್ಷಿಕೋತ್ಸವದಂದು ತನ್ನ ಬಳಕೆದಾರರಿಗೆ ವಾರ್ಷಿಕೋತ್ಸವದ ಆಫರ್ ತಂದಿದೆ. ಆಯ್ದ ರೀಚಾರ್ಜ್ ಪ್ಲಾನ್ ಗಳ ಮೇಲೆ ಈ ವಿಶೇಷ ಕೊಡುಗೆಯನ್ನು ಪಡೆಯಬಹುದು. ರೂ. 899 ಮತ್ತು ರೂ. 999ರ ತ್ರೈಮಾಸಿಕ ಪ್ಲಾನ್ ಗಳು ಮತ್ತು ರೂ. 3599ರ ವಾರ್ಷಿಕ ಪ್ಲಾನ್ ಜೊತೆಗೆ ಬಳಕೆದಾರರು ರೂ. 700 ಮೌಲ್ಯದ ಬೆನಿಫಿಟ್ ಗಳನ್ನು ಪಡೆಯುತ್ತಾರೆ.
ಈ ಆಫರ್ ರೂ. 175ರ ಮೌಲ್ಯದ 10 ಒಟಿಟಿ ಅಪ್ಲಿಕೇಷನ್ಗಳಿಗೆ ಚಂದಾದಾರಿಕೆಯೊಂದಿಗೆ 10 ಜಿಬಿ ಡೇಟಾ ಪ್ಯಾಕ್ ಅನ್ನು ಒಳಗೊಂಡಿರುತ್ತದೆ. ಇದರ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ. ಅಲ್ಲದೇ ಝೊಮ್ಯಾಟೊದ 3 ತಿಂಗಳ ಗೋಲ್ಡ್ ಸದಸ್ಯತ್ವವನ್ನು ಉಚಿತವಾಗಿ ನೀಡಲಾಗುವುದು. ರೂ. 2999 ಕ್ಕಿಂತ ಹೆಚ್ಚಿನ ಖರೀದಿಗಳಲ್ಲಿ ಗ್ರಾಹಕರು ರೂ. 500 ಮೌಲ್ಯದ ಅಜಿಯೋ ವೋಚರ್ಗಳನ್ನು ಸಹ ಪಡೆಯುತ್ತಾರೆ. ಸೆಪ್ಟೆಂಬರ್ 5ರಿಂದ 10ನೇ ತಾರೀಕಿನ ಮಧ್ಯೆ ರೀಚಾರ್ಜ್ ಮಾಡುವ ಚಂದಾದಾರರಿಗೆ ಮಾತ್ರ ಆಫರ್ ಲಭ್ಯವಿದೆ.
ಜಿಯೋ ಆರಂಭವಾಗಿ 8 ವರ್ಷಗಳಾಗಿವೆ. ಈ 8 ವರ್ಷಗಳಲ್ಲಿ ವೈರ್ಲೆಸ್ ಮತ್ತು ವೈರ್ಲೈನ್ ವಿಭಾಗ ಎರಡರಲ್ಲೂ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮಿದೆ. ಇಂದಿಗೆ ಜಿಯೋ 13 ಕೋಟಿ 5ಜಿ ಗ್ರಾಹಕರು ಸೇರಿದಂತೆ 49 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಜಿಯೋ ವಿಶ್ವದ ಅತಿ ದೊಡ್ಡ ಮತ್ತು ವೇಗವಾದ ಸ್ಟ್ಯಾಂಡ್-ಅಲೋನ್ 5ಜಿ ನೆಟ್ವರ್ಕ್ ತಂದಿದ್ದು, ದೇಶದಲ್ಲಿ ಸ್ಥಾಪಿಸಲಾದ ಎಲ್ಲ 5ಜಿ ಬಿಟಿಎಸ್ ಗಳಲ್ಲಿ ಶೇ 85 ಕ್ಕಿಂತ ಹೆಚ್ಚು ಜಿಯೋದಿಂದ ಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.