(www.vknews. in) ಎತ್ತಿನ ಹೊಳೆಗೆ ಕಾಂಗ್ರೆಸ್ ನಿಯೋಗ ಭೇಟಿ:
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸಕಲೇಶಪುರದ ಎತ್ತಿನಹೊಳೆ ಎಂಬಲ್ಲಿ ಸುಮಾರು 23,251ಕೊಟ್ಟಿ ವೆಚ್ಚದಲ್ಲಿ ನೇತ್ರಾವತಿ ನದಿಯಿಂದ ಸಮುದ್ರಕ್ಕೆ ಸೇರುವ ನೀರನ್ನು ತಿರುಗಿಸಿ ಸಕಲೇಶಪುರ,ಅರಸೀಕೆರೆ ಮುಖಾಂತರ ತುಮಕೂರ್,ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ 24 ಟಿಎಂಸಿ ಕುಡಿಯುವ ನೀರಿನ ಮತ್ತು ಕೆರೆ ತುಂಬುವ ಬಹುಪಯೋಗಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ 132 ಕಿಮಿ ದೂರದ ವಾಣಿವಿಲಾಸ ಸಾಗರಕ್ಕೆ ನೀರನ್ನು ಹರಿಸುವ ಕಾಮಗಾರಿಯ ಉದ್ಘಾಟನೆಯನ್ನು ದಿನಾಂಕ 6 ಶುಕ್ರವಾರ ಮದ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆವೇರಿಸಲಿದ್ದು ಬೃಹತ್ ನೀರಾವರಿ ಇಲಾಖೆ ಸಚಿವರಾದ ಉಪ ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮತ್ತು ಇತರ ಸಚಿವರ ಸಹಿತ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ,
ಸಭಾ ಕಾರ್ಯಕ್ರಮ ನಡೆಯಲಿರುವ ಎತ್ತಿನಹೊಳೆಗೆ ಇಂದು ಅರಸೀಕೆರೆ ಶಾಸಕ ಹಾಗು ಗೃಹ ಮಂಡಳಿಯ ಅಧ್ಯಕ್ಷರಾದ ಶಿವಲಿಂಗೇಗೌಡ, ಹಾಸನ ಸಂಸತ್ ಸದಸ್ಯ ಶ್ರೇಯಸ್ ಎಂ ಪಟೇಲ್, ಮಾಜಿ ಸಚಿವ ಗಂಡಸಿ ಶಿವರಾಮ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್, ಮುರಳಿ ಮೋಹನ್, ಬನವಾಸೆ ರಂಗಸ್ವಾಮಿ, ಶ್ರೀಧರ ಗೌಡ, ಮಹೇಶ್ ಮತ್ತು ಇತರ ಮುಖಂಡರುಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.