ಉದ್ಯಾವರ (www.vknews.in) : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವ್ಯಾಪ್ತಿಯಲ್ಲಿರುವ ಸೌಹಾರ್ದ ಸಮಿತಿಯು ಉದ್ಯಾವರ ಗ್ರಾಮದ ಅಸುಪಾಸಿನಲ್ಲಿ ನಡೆಯುತ್ತಿರುವ ವಿಜೃಂಭಣೆಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಸೌಹಾರ್ದತೆ ಮೆರೆಯಿತು.
ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಅನಿಲ್ ಡಿಸೋಜ ಮಾತನಾಡಿ, ವಿಘ್ನ ನಿವಾರಕ ದೇವರು ಎಲ್ಲರ ಕಷ್ಟಗಳನ್ನು ನಿವಾರಿಸಲಿ, ಶಾಂತಿ ನೆಮ್ಮದಿಯನ್ನು ನೀಡಲಿ. ಶಾಂತಿ ಸೌಹಾರ್ದತೆ ಇರುವ ಉದ್ಯಾವರದಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸೌಹಾರ್ದತೆಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದರು.
ಫ್ರೆಂಡ್ಸ್ ಗಾರ್ಡನ್ ಆರೂರು ತೋಟ ಸಂಪಿಗೆನಗರ ಇವರ ನೇತೃತ್ವದ ಬಾಲ ಗಣೇಶೋತ್ಸವ ಸಮಿತಿ, ಉದ್ಯಾವರ ಯುವಕ ಮಂಡಲ ನೇತೃತ್ವದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಂಗಮ ಸಾಂಸ್ಕೃತಿಕ ವೇದಿಕೆಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ ಸೌಹಾರ್ದತೆ ಮೆರೆದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವo. ಸ್ಟೇಫನ್ ರೋಡ್ರಿಗಸ್, ಸೌಹಾರ್ದ ಸಮಿತಿಯ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ಪ್ರತಾಪ್ ಕುಮಾರ್ ಉದ್ಯಾವರ, ರಿಯಾಜ್ ಪಳ್ಳಿ, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ಜೆರಾಲ್ಡ್ ಪಿರೇರಾ, ವಿಲ್ಫ್ರೆಡ್ ಡಿಸೋಜ, ಪ್ರಿತೇಶ್ ಪಿಂಟೊ, ಮೇಲ್ವಿನ್ ನೋರನ್ನ, ಸ್ಟೀವನ್ ಲುವಿಸ್, ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರಾದ ಜಿತೇಂದ್ರ ಶೆಟ್ಟಿ, ದಿನೇಶ್ ಜತ್ತನ್ನ, ಯೋಗೀಶ್ ಕೋಟ್ಯಾನ್, ಲಕ್ಷ್ಮಣ್ ಸನಿಲ್, ಗಣೇಶ್ ಕುಮಾರ್, ಅಶೋಕ್ ಭಂಡಾರಿ, ವೆಂಕಟ್ ಬಂಗೇರ, ರಮಾನಂದ ಸೇರಿಗಾರ್, ಸನಿಮ್, ಆಲ್ವಿನ್ ಅಂದ್ರಾದೆ, ಪ್ರಸಾದ್ ಪೂಜಾರಿ, ಚೇತನ್ ಕುಮಾರ್, ಸುಹೇಲ್ ಅಬ್ಬಾಸ್, ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.