(www.vknews.in) ; ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿ ಈಗ ಸಂಯುಕ್ತ ಸಂಸದೀಯ ಮಂಡಳಿಗೆ ಪರಿಶೀಲನೆಗಾಗಿ ಒಪ್ಪಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆ ಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ರಾಜ್ಯ ಮುಸ್ಲಿಂ ಲೀಗ್ ನಿರ್ವಾಹಕ ಸಮಿತಿ ಸದಸ್ಯ ಎಎಸ್ಇ ಕರಿಂ ಕಡಬ ರವರ ನೇತೃತ್ವದಲ್ಲಿ ನಿಯೋಗವು ಜೆಪಿಸಿ ಸದಸ್ಯರಾದ ಸಂಸದ ಶ್ರೀ ವೀರೇಂದ್ರ ಹೆಗಡೆಯವರನ್ನು ಧರ್ಮಸ್ಥಳದಲ್ಲಿ ಭೇಟಿಯಾಗಿ ಸಲ್ಲಿಸಲಾದ ಮನವಿಯಲ್ಲಿ ಈ ಒತ್ತಾಯವನ್ನು ಮಾಡಲಾಗಿದೆ.
ವಕ್ಫ್ ಮುಸ್ಲಿಮರ ಧಾರ್ಮಿಕ ಅನುಷ್ಠಾನದ ಭಾಗವಾಗಿದ್ದು ಈಗ ಮಂಡಿಸಲಾದ ಮಸೂದೆಯು ವಕ್ಫ್ ಎಂಬ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಿರಾಕರಿಸುವಂತದಾಗಿದ್ದು ಇದು ದೇಶದ ಸಂವಿಧಾನವು ಕಲ್ಪಿಸಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ವ್ಯಕ್ತಿರಿಕ್ತವಾಗಿದ್ದು ಸಂವಿಧಾನ ವಿರೋಧಿಯೂ ಆಗಿರುತ್ತದೆ. 1995 ವಕ್ಫ್ ಕಾನೂನನ್ನು ಯುನಿಫೈಡೆ ವಕ್ಫ್ ಮ್ಯಾನೇಜ್ಮೆಂಟ್,ಎಂಪವರ್ಮೆಂಟ್, ಎಫಿಶಿಯನ್ಸಿ ಅಂಡ್ ಡೆವಲಪ್ಮೆಂಟ್ “ಎಂದು ನೂತನವಾಗಿ ನಾಮಕರಣ ಮಾಡಲಾಗಿರುವ ಮಸೂದೆಯು ಮೂಲದಲ್ಲಿ ವಕ್ಫ್ ಎಂಬ ಧಾರ್ಮಿಕ ಸಂಜೆಯನ್ನು ಅಪ್ರಸ್ತುತಗೊಳಿಸಿದೆ ಈ ಮಸೂದೆಯು ಶತಮಾನಗಳ ಇತಿಹಾಸವಿರುವ ಕೋಟ್ಯಂತರ ಬೆಲೆಬಾಳುವ ಆಸ್ತಿಗಳನ್ನೆಲ್ಲವನ್ನು ಮುಸ್ಲಿಮರ ಕೈಯಿಂದ ಕಿತ್ತುಕೊಂಡು ಸರ್ಕಾರಿ ಆಸ್ತಿಯಾಗಿಸುವ ಗೂಢ ಉದ್ದೇಶದಿಂದ ಕೂಡಿದೆ ಎಂದು ನೀಯೋಗ ಅಪಾದಿಸಿತು.
ಹಿಂದೆ ರಾಜ್ಯದಲ್ಲಿದ್ದ ಎಸ್ ಎಂ ಕೃಷ್ಣರವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಮಾನ ರೀತಿಯ ಮದ್ರಸಾ ಮಂಡಳಿ ಮಸೂದೆಯನ್ನು ತಂದಿದ್ದು ಅಂದು ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಸಂಸದ ಗುಲಾಂ ಮಹಮ್ಮದ್ ಬನಾತ್ ವಾಲಾ ರವರ ನೇತೃತ್ವ ನಡೆದ ಪ್ರತಿರೋಧದಿಂದಾಗಿ ಜಾರಿಗೆ ಬರಲಿಲ್ಲ ಎಂದು ನೆನಪಿಸಿದ ಮುಸ್ಲಿಂ ಲೀಗ್ ನಿಯೋಗವು ಪ್ರಸ್ತುತ ಧಾರ್ಮಿಕ ಸ್ವಾತಂತ್ರ್ಯವನ್ನು ಹನಿಸುವ ಈ ಮಸೂದೆಯನ್ನು ದೇಶದ ಧಾರ್ಮಿಕ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿರುವ ಎಲ್ಲರ ಸಹಕಾರದೊಂದಿಗೆ ಮುಸ್ಲಿಂ ಲೀಗ್ ಎದುರಿಸಿ ಸೋಲಿಸುವುದೆಂದರು.
ನಿಯೋಗದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ,ಸಿ. ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಶಬೀರ್ ತಲಪಾಡಿ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಬಂಗೇರುಕಟ್ಟೆ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಕಡಬ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.