ಮಂಗಳೂರು (www.vknews.in) ; ಹಿದಾಯ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ನೂತನ ಚೇರ್ಮನ್ ಆಗಿ ಝಕರಿಯಾ ಬಜ್ಪೆ ಆಯ್ಕೆಯಾದರು. ಇತ್ತೀಚೆಗೆ ನಗರದ ಓಶಿಯನ್ ಪರ್ಲ್ ಹೋಟೇಲಿನಲ್ಲಿ ಟ್ರಸ್ಟ್ ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಟ್ರಸ್ಟ್ ನ ಸ್ಥಾಪಕ ಚೇರ್ಮನ್ ಖಾಸಿಂ ಅಹ್ಮದ್ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ಸದಸ್ಯರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಟ್ರಸ್ಟ್ ನಿರ್ವಹಿಸುತ್ತಿರುವ ಪ್ರಮುಖ 5 ಯೋಜನೆಗಳು ಮತ್ತು ಅದರ ನಿರ್ವಹಣೆಯ ವಿಧಾನಗಳ ಬಗ್ಗೆ ತಿಳಿಸಿದರು.
ಮುಂದಿನ 5 ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಝಕರಿಯಾ ಬಜ್ಪೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ರಿಯಾಝ್ ಬಾವ, ಎಸ್.ಎಂ.ಮುಸ್ತಫಾ ಭಾರತ್, ಹಾಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಉಚ್ಚಿಲ್ ಮಸ್ಕತ್, ಕಾರ್ಯದರ್ಶಿಯಾಗಿ ಝಿಯಾವುದ್ದೀನ್ ಅಹ್ಮದ್, ಕೋಶಾಧಿಕಾರಿಯಾಗಿ ಬಿ.ಎಂ.ಶರೀಫ್ ಬೋಳಾರ, ಸಹ ಕೋಶಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿ ಆಬಿದ್ ಅಸ್ಗರ್ ಆಯ್ಕೆಯಾದರು.
ಆಸಿಫ್ ಸೂಫಿಕಾನ, ಎಫ್.ಎಂ.ಬಶೀರ್ ಫರಂಗಿಪೇಟೆ, ಮಕ್ಬೂಲ್ ಅಹ್ಮದ್ ಹಾಗೂ ಅಫ್ರೋಝ್ ಅಸ್ಸಾದಿ ಅವರನ್ನು ಟ್ರಸ್ಟಿಗಳನ್ನಾಗಿ ನೇಮಿಸಲಾಯಿತು. ಚುನಾವಣಾಧಿಕಾರಿಗಳಾಗಿ ಭಾಗವಹಿಸಿದ್ದ ಸಲೀಂ ಶೇಖ್ ಜುಬೈಲ್ ಹಾಗೂ ಅಬ್ದುಲ್ಲಾ ಮೋನು ಕತ್ತಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಟ್ರಸ್ಟ್ ನ ಉಪಾಧ್ಯಕ್ಷ ಝಿಯಾವುದ್ದೀನ್ ಅಹ್ಮದ್ ಸ್ವಾಗತಿಸಿ, ಆಡಳಿತಾಧಿಕಾರಿ ಆಬಿದ್ ಅಸ್ಗರ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.