ಪುತ್ತೂರು (www.vknews.in) : ಪುತ್ತೂರು ತಾಲೂಕಿನ ನವಚೇತನ ಸಮಿತಿ ಸಂಪ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಸಂಪ್ಯ ಮಸೀದಿ ಎದುರು ಸಂಪ್ಯ ಯುವಕರ ವತಿಯಿಂದ ಸಿಹಿತಿಂಡಿ ತಂಪು ಪಾನೀಯ ನೀಡಿ ವಿತರಿಸಲಾಯಿತು.
ಸೌಹಾರ್ಧತೆಯ ಊರಾದ ಸಂಪ್ಯ ಪರಿಸರದಲ್ಲಿ ಈ ಒಂದು ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಹಿತು. ಹಿಂದೂ ಮುಸ್ಲಿಂ ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಪ್ಯ ಜುಮಾ ಮಸೀದಿ ಆಡಳಿತ ಕಮಿಟಿ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ ಸೇರಿದಂತೆ ಮಸೀದಿ ಪದಾಧಿಕಾರಿಗಳು ಮೊಅಲ್ಲಾ ನಿವಾಸಿಗಳು ಮಕ್ಕಳು ಪಾಲ್ಗೊಂಡರು. ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಡಾ| ಸುರೇಶ್ ಪುತ್ತುರಾಯ ಸೇರಿದಂತೆ ನವಚೇತನ ಸಮಿತಿ ಪದಾಧಿಕಾರಿಗಳು ಎಲ್ಲರೂ ಧನ್ಯವಾದ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.