ಪುತ್ತೂರು (www.vknews. in) ; ಸಮಸ್ತ ಉಲಮಾ ಮುಶಾವರ ಪುತ್ತೂರು ತಾಲೂಕು ಘಟಕದ ವತಿಯಿಂದ ತಾರೀಕು 8/9/2024 ಶನಿವಾರ ಇಲ್ಲಿನ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಂಡ್ ಮೀಲಾದ್ ಮಜ್ಲಿಸ್ ಸೇರಿದ್ದ ನೂರಾರು ವಿಶ್ವಾಸಿಗಳಿಗೆ ಆಧ್ಯಾತ್ಮಿಕತೆಯ ನವ ಚೈತನ್ಯವನ್ನ ನೀಡಿ ಪ್ರವಾದಿ ಪ್ರೇಮವನ್ನು ಹೃದಯದಲ್ಲಿ ಮತ್ತಷ್ಟು ಬೇರೂರಿಸುವಲ್ಲಿ ಯಶಸ್ವಿಯಾಯಿತು.
ಉಲಮಾ,ಉಮಾರಾ ಸಾದಾತ್ ಗಳು ಮುತಹಲ್ಲಿಂ ವಿಧ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧನ್ಯಗೊಂಡರು. ಪುತ್ತೂರು ಮುದರ್ರಿಸ್ ಪೂಕೋಯ ತಂಙಳ್ ರವರ ಅಧ್ಯಕ್ಷತೆಯಲ್ಲಿ ವಿಜ್ರಂಬಣೆಯಿಂದ ನಡೆದ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿತು.
ಅಧ್ಯಕ್ಷೀಯ ಭಾಷಣ ಮಾಡಿದ ಪೂಕೊಯ ತಂಙಳ್ ರವರು ಪುತ್ತೂರು ಜಂಯಿಯ್ಯತ್ತುಲ್ ಉಲಮಾ ಘಟಕವು ಧಾರ್ಮಿಕವಾಗಿ ಜನರಿಗೆ ಸಮರ್ಥ ನೇತೃತ್ವ ವಹಿಸುತ್ತಿದೆ.ಇಂದಿನ ಕೆಲ ಯುವಕರು ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಒಳಗಾಗಿ ತಾವು ನಡೆದು ಬಂದ ಪಾರಂಪರ್ಯ ಮೌಲ್ಯಗಳನ್ನು ತಿರಸ್ಕರಿಸಿ ಸಲಪಿ ವಹ್ಹಾಬಿ ಮುಂತಾದ ತೀವ್ರ ವಿಚಾರಧಾರೆಗಳತ್ತ ಆಕರ್ಷಿತರಾಗಿ ಬದುಕು ಬರಡಾಗಿಸುತ್ತಿರುವುದು ಕಂಡು ಬರುತ್ತಿದೆ.ಎಳೆಯ ಪ್ರಾಯದಲ್ಲೇ ಮಕ್ಕಳ ಹೃದಯದಲ್ಲಿ ಪ್ರವಾದಿ ಪ್ರೇಮ ರೂಡಮೂಲ ಗೊಳಿಸಲು ಮೀಲಾದ್ ಆಚರಣೆ ಉಪಯುಕ್ತವಾಗುತ್ತದೆ. ಪ್ರವಾದಿ ಪ್ರೇಮ ಹೃದಯಕ್ಕಿಳಿದರೆ ಮತ್ತೆ ಅಂತಹ ಮಕ್ಕಳು ಮಾದಕ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುವುದಿಲ್ಲ ಎಂದರು. ಮಾಡನೂರು ಸಂಸ್ಥೆಯ ಅಡ್ವಕೇಟ್ ಹನೀಪ್ ಹುದವಿ ಮಾತನಾಡಿ ಮೀಲಾದ್ ವಿರೋಧಿಗಳ ವಿತಂಡ ವಾದಕ್ಕೆ ಉತ್ತರಿಸಲು ಹೋಗಿ ನಮ್ಮ ಅಮೂಲ್ಯ ಸಮಯ ವ್ಯರ್ಥ ಗೊಳಿಸುವುದಕ್ಕಿಂತ ಇಂತಹ ಆಧ್ಯಾತ್ಮಿಕ ಕೀರ್ತನಾ ಕೂಟಗಳನ್ನು ಹೆಚ್ಚು ಹೆಚ್ವು ಆಯೋಜಿಸುವುದೇ ಅವರಿಗೆ ತಕ್ಕ ಉತ್ತರ ಎಂದರು.
ಅರಸಿಮಕ್ಕಿ ಸಂಸ್ಥೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ ಪ್ರತಿಯೊಂದಕ್ಕೂ ಕುರ್ಆನ್ ಹದೀಸ್ ಎನ್ನುವವರು ಪ್ರವಾದಿ ಪ್ರೇಮದ ವ್ಯಾಪ್ತಿಯ ಬಗ್ಗೆ ಅಜ್ಞಾನಿಗಳಾಗಿದ್ದಾರೆ. ಪ್ರವಾದಿಗಳು ಅಸ್ತಂಗತರಾದ ಸುದ್ದಿಕೇಳಿದ ಅವರ ಪ್ರಮುಖ ಅನುಚರರಾಗಿದ್ದ ಅಬ್ದುಲ್ಲಾಹಿ ಬಿನ್ ಝೈದ್ ಎಂಬವರು ಪ್ರವಾದಿಗಳನ್ನು ನೋಡಿದ ಕಣ್ಣಿಂದ ಇನ್ನು ಬೇರೆಯವರನ್ನು ನೋಡದ ಹಾಗೆ ಮಾಡುವಂತೆ ಕಣ್ಣು ಕುರುಡಾಗಿಸಲು ಪ್ರಾರ್ಥನೆ ನಡೆಸಿದ್ದರು.
ಮತ್ತೊಬ್ಬ ಪ್ರಮುಖ ಸಹಾಬಿ ಅಬುತ್ತುಫೈಲ್ ಎಂಬವರು ಪ್ರವಾದಿ ಸ ಅ ರ ವಫಾತ್ ಸುದ್ದಿ ಕೇಳಿದಾಗ ಹೃದಯ ಸ್ತಂಬಿಸಿ ಮರಣ ಹೊಂದಿದರು. ತಾಯಿಯ ಸೇವೆಗೈಯ್ಯುವುದರಲ್ಲಿ ನಿರತರಾಗಿ ಪ್ರವಾದಿಗಳ ಅನುಚರರಾಗಳು ಸಾಧ್ಯವಾಗದ ಊಯಿಸುಲ್ ಖರ್ನಿ ಎಂಬವರು ಪ್ರವಾದಿಗಳ ಹಲ್ಲು ಕಿತ್ತು ಹೋಯಿತೆಂದಾಗ ಅವರಿಗಿಲ್ಲದ ಹಲ್ಲು ನನಗೆ ಬೇಡ ಎಂದಿಟ್ಟು ಕಿತ್ತೆಸೆದರು.ಇಂತಹ ಪ್ರವಾದಿ ಪ್ರೇಮದ ಜ್ವಲಂತ ಉದಾಹರಣೆಗಳ ಬಗ್ಗೆ ಕುರ್ಅನ್ ಹದೀಸನ್ನು ಮಾತ್ರ ಪುರಾವೆಯಾಗಿ ಸ್ವೀಕರಿಸುವವರಿಗೆ ಏನು ಹೇಳಲಿಕ್ಕಿದೆ ಎಂದು ಪ್ರಶ್ನಿಸಿದರು.
ಸಾಲ್ಮರ ಉಮರ್ ದಾರಿಮಿ ಪ್ರಸ್ತಾವನೆ ಗೈದರು.ಪ್ರಧಾನ ಕಾರ್ಯದರ್ಶಿ ಸಂಪ್ಯ ಉಸ್ತಾದ್ ಸ್ವಾಗತಿಸಿದರು. ಸಯ್ಯಿದ್ ಯಹ್ಯಾ ತಂಙಳ್ ಪೋಲ್ಯ,ಮುಹಮ್ಮದ್ ತಂಙಳ್ ಸಾಲ್ಮರ,ಉಮರ್ ಮುಸ್ಲಿಯಾರ್ ನಂಜೆ,ಇಸ್ಮಾಯಿಲ್ ದಾರಿಮಿ ದೇಲಂಪಾಡಿ,ಇರ್ಷಾದ್ ಪೈಝಿ ಮುಖ್ವೆ, ಎಲ್ ಟಿ ರಝಾಕ್ ಹಾಜಿ,ಹಾಜಿ ಅಝಾದ್ ಅಬ್ದುಲ್ ರಹ್ಮಾನ್,ಅಬ್ಬಾಸ್ ಮದನಿ ಪುತ್ತೂರು, ಕೆ ಪಿ ಮುಹಮ್ಮದ್ ಹಾಜಿ,ಹಸೈನಾರ್ ಹಾಜಿ ಸಿಟಿಬಜಾರ ,ಕಲ್ಲಗ ಅಶ್ರಫ್,ಸಿರಾಜುದ್ದೀನ್ ಪೈಝಿ,ಉಮರ್ ಪೈಝಿ,ಇಬ್ರಾಹಿಂ ದಾರಿಮಿ ಮಾಡನ್ನೂರು, ಶಾಫಿ ಇರ್ಫಾನಿ ಕಲ್ಲಗ, ರಶೀದ್ ರಹ್ಮಾನಿ ಪರ್ಲಡ್ಕ, ಅಬೂಬಕರ್ ಮುಲಾರ್,ಹಾಜಿ ಅಬ್ದುಲ್ ಅಝೀಝ್ ಬಪ್ಪಳಿಗೆ,ಕರೀಂ ದಾರಿಮಿ ಕುಂಬ್ರ,ಯಾಕೂಬ್ ದಾರಿಮಿ ಮೊದಲಾದ ಅನೇಕ ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.