(www.vknews.in) ; ವಿಟ್ಲ ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 5ನೇ ಆಂಡ್ ನೇರ್ಚೆ ಹಾಗೂ ಮದನೀಯಂ ಮಜ್ಲಿಸ್ ತಾ.7/9/2024 ರಂದು ಟಿಪ್ಪುನಗರ ದಾರುನ್ನಜಾತ್ ಸಂಸ್ಥೆಯಲ್ಲಿ ಬಹಳ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಧ್ವಜಾರೋಹಣೆ ಶೈಖುನಾ ಮಹಮೂದುಲ್ ಫೈಝೀ ವಾಲೆಮಂಡೋವ್ ಉಸ್ತಾದ್ ಮತ್ತು ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಂ ಅವರು ನಿರ್ವಹಿಸಿದರು.ಬಳಿಕ 2:30 ಕ್ಕೆ ಮಕ್ಬರ ಝಿಯಾರತ್ ಗೆ ಸೈಯದ್ ಶಮೀಮ್ ತಂಙಲ್ ನೇತೃತ್ವ ನೀಡಿದರು.
ನಂತರ 3 ಗಂಟೆಗೆ ಖತ್ಮುಲ್ ಕುರ್ಆನ್ ಮಜ್ಲಿಸ್ ಕಾರ್ಯಕ್ರಮಕ್ಕೆ ಅಸಯ್ಯದ್ ಪೂಕುಞ್ಞಿ ತಂಙಳ್ ನೇತೃತ್ವದಲ್ಲಿ ನೀಡಿದರು. ಅದಾದ ಬಳಿಕ ಸಂಜೆ 4:30 ಕ್ಕೆ ಮರ್ಹೂಂ ಅಬೂಬಕ್ಕರ್ ಉಸ್ತಾದರ ಸ್ಮಾರಕ ಭವನ ಕರ್ನಾಟಕ ಜಮೀಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ವಿಷಯ ಮಂಡನೆ ನಡೆಸಿದರು.ನಂತರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಉಸ್ಮಾನ್ ಸಖಾಫಿ ಅವರು ಪ್ರಾಸ್ತಾವಿಕ ಭಾಷಣ ಮಾತನಾಡಿದರು.
ಮಗ್ರಿಬ್ ನಮಾಝಿನ ಬಳಿಕ ಮದನಿಯಂ ಮಜ್ಲಿಸ್ ಮತ್ತು ಅನುಸ್ಮರಣೆ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರಗಿತು ಈ ಕಾರ್ಯಕ್ರಮಕ್ಕೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವ ನೀಡಿ ಮುಖ್ಯ ಪ್ರಭಾಷಣ ನಡೆಸಿದರು. ಸಮಾರೂಪ ಸಮಾರಂಭದ ಪ್ರಾರ್ಥನೆಗೆ ಅಸಯ್ಯದ್ ಶಹಾಬುದ್ದೀನ್ ತಂಙಲ್ ಮದಕ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ನಾಲ್ಕು ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಪೈಝೀ ಕನ್ಯಾನ ಉಸ್ತಾದ್,ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಮೊಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ,ಮಜ್ಲಿಸ್ ದಾರುನ್ನಜಾತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ, ಅಬೂಬಕ್ಕರ್ ಹಾಜಿ ಹೊಸಂಗಡಿ,SMA ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ,ಎಂ ಎಸ್ ಮೊಹಮ್ಮದ್, ಪಟ್ಟಣ ಪಂಚಾಯತ್ ಸದಸ್ಯರಾದ ಹಸ್ಥೈನಾರ್ ಸುನ್ನಿ ಕೋಓರ್ಡಿನೇಷನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕೊಡಂಗಾಯಿ, ಜುಮ್ಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಅರ್ಶದಿ, ಉಮ್ಮರ್ ವಿಟ್ಲ,ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಶಾಫಿ ಕಡಂಬು,ಎ ಪಿ ಅಬೂಬಕರ್ ಸಖಾಫಿ, ಅಬ್ದುಲ್ಲ ಮುಸ್ಲಿಯಾರ್ ಪರಪ್ಪು, ಖಾಸಿಂ ಸಖಾಫಿ, ಮಜೀದ್ ಮದನಿ,ಅಬ್ದುಲ್ ಹಕೀಂ ಹಾಜಿ, ಶಿಹಾಬುದ್ದೀನ್ ಸಖಾಫಿ,ಹಾಫಿಝ್ ಶರೀಫ್, ಮೊಹಮ್ಮದ್ ಸಅದಿ ಕಡಂಬು ಅಬ್ದುಲ್ ಖಾದರ್ ಫೈಝಿ, ಅಬ್ಬಾಸ್ ಮದನಿ,ಉಸ್ಮಾನ್ ಹಾಜಿ,ಎಂಎಸ್ಎಂ ಸಿರಾಜ್, ,ಅಬ್ದುಲ್ ರಝಾಕ್ ಡಾ.ಹಸೈನಾರ್,ಹಸೈನಾರ್ ಮುಸ್ಲಿಯಾರ್,ಇಬ್ರಾಹಿಂ ಮುಸ್ಲಿಯಾರ್ ಮತ್ತಿತರು ಉಪಸ್ಥಿತರಿದ್ದರು.ದಾರುನ್ನಜಾತ್ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.