ಪುತ್ತೂರು (www.vknews. in) : ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ 2024-25 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ 2023-24 ರ ಸಾಲಿನ ಸಮಿತಿಯ ವಾರ್ಷಿಕ ಮಹಾ ಸಭೆಯು ಪುತ್ತೂರಿನ ಪ್ರೆಸ್ಟೀಜ್ ಪೆವಿಲಿಯನ್ ಇಲ್ಲಿ ನಡೆಯಿತು.ಪ್ರಾಸ್ತಾವಿಕ ಮಾತುಗಳನ್ನಾಡಿದ ಉಸ್ಮಾನ್ ಎ ಕೆ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಾಮಾಜಿಕ ಕಳಕಳಿಯ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಅಲ್ ರಬೀಹ್ ಸಂಸ್ಥೆ ನಮ್ಮ ಸ್ನೇಹದ ಜೊತೆ ಹೆಮ್ಮೆ ತರುವಂತಾಗಿದೆ ಎಂದರು.
ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ನಾಸಿರ್ ಪರ್ಪುಂಜ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಸಿದ್ದೀಕ್ ಗಡಿಪ್ಪಿಲ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷರಾಗಿ ಆಸೀಫ್ ಪಾಪೆತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಶಾಂತಿಗೋಡು,ಕೋಶಾಧಿಕಾರಿಯಾಗಿ ಸಮದ್ ಸವಣೂರು,ಉಪಾಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ,ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಪರ್ಪುಂಜ,ಗೌರವ ಸಲಹೆಗಾರರಾಗಿ ಉಸ್ಮಾನ್ ಎ ಕೆ ಮತ್ತು ಅಜೀರ್ ಕಲ್ಲಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರಜಾಕ್ ಸಾಲ್ಮರ,ಆರಿಸ್ ಸವಣೂರು,ನೌಶಾದ್ ಕಟ್ಟತ್ತಾರ್,ನವಾಝ್ ಕಡಬ,ಇರ್ಷಾದ್ ಕಾವು,ಸಾದಿಕ್ ಅರಿಯಡ್ಕ ನೇಮಕಗೊಂಡರು.ಅಲ್ ರಬೀಹ್ ಸಂಸ್ಥೆಯ ಸದಸ್ಯ ರಝಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.