ಮಾಣಿ (www.vknews.in) : ರಬೀಉಲ್ ಅವ್ವಲ್ ತಿಂಗಳ ಮೀಲಾದುನ್ನಬಿ ಆಚರಣೆಯು ಪ್ರವಾದಿ (ಸ.ಅ)ರವರ ಜನನದಲ್ಲಿ ಸಂತೋಷ ವ್ಯಕ್ತಪಡಿಸುವುದಾಗಿದೆ,ಆ ಪ್ರಯುಕ್ತ ರಸ್ತೆಗಳನ್ನು ಅಲಂಕರಿಸುವುದು,ಮಸೀದಿ ಮತ್ತು ಮನೆಗಳಿಗೆ ಬಣ್ಣದ ಬೆಳಕುಗಳು ಹಾಕುವುದು,ಮೌಲಿದ್ ಪಾರಾಯಣ,ಅನ್ನದಾನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ಪ್ರವಾದಿ ಪ್ರೇಮದ ಭಾಗವಾಗಿದ್ದು ಬಹಳಷ್ಟು ಪುಣ್ಯಗಳನ್ನು ಮತ್ತು ಬರ್ಕತ್ ನೀಡುವ ವಿಷಯವಾಗಿದೆ ಇದನ್ನು ಗೌರವದಿಂದ ಕಾಣಬೇಕು ವಿವರ ಅರಿವು ಇಲ್ಲದವರು ಅವೆಲ್ಲವನ್ನೂ ವಿರೋಧಿಸಿ ಅಪಪ್ರಚಾರ ನಡೆಸುತ್ತಾ ಕಾಲ ಕಳೆಯುವುದು ಈಮಾನ್ ಇಲ್ಲದರ ಕೊರತೆಯಾಗಿದೆ ಎಂದು ಬಹು | ಇಬ್ರಾಹಿಂ ಸಅದಿ ಮಾಣಿ ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ನಡೆದ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಮತ್ತು ಇಬ್ರಾಹಿಂ ಮುಸ್ಲಿಯಾರ್ ಹಳೀರ ರವರ ತಾಯಿಯ ಹೆಸರಿನಲ್ಲಿ ನಡೆದ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು. ಮೌಲಿದ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.
ಗಣ್ಯ ಅತಿಥಿಗಳಾಗಿ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಎಸ್ವೈಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ,ಅಶ್ರಫ್ ಸಖಾಫಿ ಸೂರಿಕುಮೇರು, ಇಬ್ರಾಹಿಂ ಹಾಜಿ ಶೇರಾ,ಟೈಲರ್ ಹಸೈನ್ ಸೂರಿಕುಮೇರು, ಇಸ್ಮಾಯಿಲ್ ಹಾಜಿ ಬುಡೋಳಿ, ಹಬೀಬ್ ಶೇರಾ,ಅಬ್ದುಲ್ ಕರೀಂ ಸೂರಿಕುಮೇರು,ಹಮೀದ್ ಮಾಣಿ,ಅನ್ಸಾರ್ ಸತ್ತಿಕಲ್,ತೈಸೀನ್ ಖಾನ್ ಮಾಣಿ,ಅಬ್ಬಾಸ್ ಗಡಿಯಾರ್,ಇಮ್ರಾನ್ ಸೂರಿಕುಮೇರು,ರಶಾದ್ ಮುಈನೀ ಸತ್ತಿಕಲ್, ಹಮೀದ್ ಸತ್ತಿಕಲ್, ಅಬೂಬಕ್ಕರ್ ಸತ್ತಿಕಲ್, ಆಶ್ರಫ್ ಬುಡೋಳಿ, ಅಬ್ದುಲ್ ಹಮೀದ್ ಶೇರಾ, ಝೈನುದ್ದೀನ್ ಸೂರಿಕುಮೇರು, ಕಲಂದರ್ ಬುಡೋಳಿ, ಹಂಝ ಸೂರಿಕುಮೇರು, ವೈದ್ಯಕೀಯ ವಿದ್ಯಾರ್ಥಿ ಮುಹೈಮಿನ್ ಸೂರಿಕುಮೇರು, ಮುನೀರ್ ಮಾಣಿ, ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.