(www.vknews.in) ; ಪುತ್ತೂರು ತಾಲೂಕಿನಲ್ಲೇ ಮಕ್ಕಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿದ್ದು ಸುಮಾರು 500 ರಷ್ಟು ಮಕ್ಕಳು 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಜನೆ ಮಾಡುತ್ತಾ ಇದ್ದಾರೆ.
ಇಲ್ಲಿ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 18 ಶಿಕ್ಷಕರ ಅವಶ್ಯಕತೆ ಇರುವಾಗಲೇ , ಇರುವ 17 ಶಿಕ್ಷಕರಿಂದ ಒಬ್ಬರನ್ನು ಶಿಕ್ಷಕರ ಸೇವಾ ನಿಯಮವನ್ನು ಉಲ್ಲಂಘಿಸಿ, 10 ವರ್ಷ ತಾಲೂಕಿನ ಒಳಗೆ ಸೇವೆ ಸಲ್ಲಿಸಬೇಕೆನ್ನುವ ವಿಷಯವನ್ನು ಮರೆಮಾಚಿ ಆಂಗ್ಲ ಭಾಷೆಯನ್ನು ಬೋಧಿಸುವ ಶಿಕ್ಷಕರನ್ನು ಅಂತರ್ ಜಿಲ್ಲೆಗೆ ನಿಯೋಜನೆ ಮಾಡಿದ್ದಾರೆ
ಇದರ ಬಗ್ಗೆ ಎಸ್ಡಿಎಂಸಿ ಅಥವಾ ಪೋಷಕರ ಗಮನಕ್ಕೆ ತಾರದೇ, ಹಾಗೂ ನಿಯೋಜನೆ ಆದೇಶದ ಷರಾ ದಲ್ಲಿರುವ ಪ್ರಸ್ತುತ ಇರುವಂತಹ ಶಾಲೆಯಲ್ಲಿರುವ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ಮಾತ್ರ ನಿಯೋಜನೆ ಮಾಡುವುದು ಎನ್ನುವ ವಿಷಯವನ್ನು ಮರೆಮಾಚಿ ಮುಖ್ಯೋಪಾಧ್ಯಾಯರು ನಿಯೋಜನೆಗೆ ಅಂಕಿತವನ್ನು ನೀಡಿದ್ದರು.
ಇದರ ಬಗ್ಗೆ ಪ್ರಸ್ತುತ ಇರುವಂತಹ ಅಧ್ಯಕ್ಷರು ಮೌಖಿಕವಾಗಿ ಯಾವುದೇ ಶಿಕ್ಷಕರನ್ನು ನಿಯೋಜನೆಗೆ ಕಳುಹಿಸಬಾರದು ಎಂದು ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದು ಕೂಡ ಅವರು ಅದನ್ನು ಗಣನೆಗೆ ತೆಗೆದು ಕೊಳ್ಳದೇ ಇದ್ದ ಕಾರಣ ದಿನಾಂಕ 3 ತಾರೀಕು ಮಂಗಳವಾರ ಪೋಷಕರ ಸಭೆಯನ್ನು ಕರೆದು ಅವರ ಗಮನಕ್ಕೆ ತರಲಾಗಿತ್ತು.
ಪೋಷಕರ ಸಭೆಯ ತೀರ್ಮಾನದಂತೆ ,ಒಂದು ವಾರದೊಳಗೆ ನಿಯೋಜನೆ ಗೊಂಡ ಶಿಕ್ಷಕರನ್ನು ಮರು ನಿಯೋಜನೆ ಗೊಳಿಸುವುದು ಅಥವಾ ಅವರ ಬದಲಿ ವ್ಯವಸ್ಥೆ ಮಾಡುವುದು ಇಲ್ಲದೆ ಇದ್ದರೆ 10 ತಾರೀಕು ಮಂಗಳವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರಲು ಸೇರಿದ ಎಲ್ಲಾ ಪೋಷಕರ ಒಕ್ಕೊರಲಿನಿಂದ ಪ್ರತಿಭಟಿಸಲು ತೀರ್ಮಾನಿಸಲಾಗಿತ್ತು.
ಈ ಪ್ರತಿಭಟನೆಗೆ ಪೂರಕವಾಗಿ ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಇಲಾಖೆಗೆ, ಗ್ರಾಮ ಪಂಚಾಯತ್ ಮತ್ತು ಪೊಲೀಸ್ ಠಾಣೆಗೆ ಮನವಿಯನ್ನು ಕೊಟ್ಟು ಪೂರ್ವ ತಯಾರಿಯನ್ನು ನಡೆಸಲಾಗಿತ್ತು.
ಇದನ್ನರಿತ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಅಶೋಕ್ ಕುಮಾರ್ ರೈ ಯವರು ಕರೆಮಾಡಿ ಶಾಲೆಯ ವಸ್ತು ಸ್ಥಿತಿಯನ್ನು ಅರಿತುಕೊಂಡು ,ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ನಿಯೋಜನೆಗೊಂಡಿರುವ ಶಿಕ್ಷಕರ ಬದಲಿಗೆ ಒಂದೆರೆಡು ದಿನದಲ್ಲಿ ವ್ಯವಸ್ಥೆ ಮಾಡುತ್ತೇನೆ, ಎನ್ನುವ ಭರವಸೆಯನ್ನು ಕೊಟ್ಟು, ಪ್ರತಿಭಟನೆಗೆ ಕರೆ ನೀಡಿದ್ದನ್ನು ಹಿಂಪಡೆಯಬೇಕು ಎಂದು ಹೇಳಿದಾಗ, ಅವರ ಮಾತಿಗೆ ಬೆಲೆಕೊಟ್ಟು ಪೋಷಕರ ಪ್ರತಿಭಟನೆಯನ್ನ ಹಿಂಪಡೆಯಾಲಾಗಿದೆ.
ತಮ್ಮ ಕ್ಷೇತ್ರದ ಒಂದು ಶಾಲೆಯ ಬಗ್ಗೆ ಕಾಳಜಿ ಇಟ್ಟು ಅವರಾಗಿಯೇ ಖುದ್ದು ಈ ವಿಷಯದಲ್ಲಿ ಮುಂದೆ ಬಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಮಕ್ಕಳಿಗೆ ಶಿಕ್ಷಣದ ಅನಿವಾರ್ಯತೆಯ ಬಗ್ಗೆ ಸ್ಪಷ್ಟ ನಿಲುವನ್ನು ಕಂಡು ಸಮಸ್ಯೆ ಪರಿಹಾರಕ್ಕೆ ಶ್ರಮಿಸಿರುತ್ತಾರೆ. ಇವರಿಗೆ ಶಾಲಾ ಪೋಷಕರು ಹಾಗೂ ಎಸ್ಡಿಎಂಸಿಯಿಂದ ತುಂಬು ಹೃದಯದ ಧನ್ಯವಾದಗಳು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.