ಬಂಟ್ವಾಳ (www.vknews.in) : ಇಲ್ಲಿನ, (ಬಂಟ್ವಾಳ ತಾಲೂಕಿನ) ಮಾಣಿ ಸಮೀಪದ, ಪ್ರತಿಷ್ಠಿತ ‘ವಿಸ್ಡಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ’ಯಲ್ಲಿ, ಶಿಕ್ಷಕರ ದಿನಾಚರಣೆಯನ್ನು, ಬಹಳ ಸಡಗರದೊಂದಿಗೆ ಆಚರಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಕ್ರೀಡಾ, ಸಾಂಸ್ಕೃತಿಕ ಮತ್ತು ಇತರ ಕಾರ್ಯಕ್ರಮಗಳಲ್ಲಿ, ಶಿಕ್ಷಕರ ಜತೆ ಇಲ್ಲಿನ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಸಂಭ್ರಮಿಸಿರುವುದು ಇಲ್ಲಿನ ವಿಶೇಷತೆಯಾಗಿತ್ತು. ಮಾತ್ರವಲ್ಲದೆ, ಅಂದಿನ ದಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿ ಕೋಣೆಗಳನ್ನು ಶೃಂಗರಿಸಿ, ಬಾಗಿಲು ಮುಚ್ಚಿಟ್ಟು, ಅವುಗಳನ್ನು ತಮ್ಮ ತರಗತಿಯ ಶಿಕ್ಷಕ ಶಿಕ್ಷಕಿಯರುಗಳ ಕೈಯಿಂದ ತೆರೆಯಿಸಿ, ಅಲ್ಲಿ ವ್ಯವಸ್ಥಿತಗೊಳಿಸಿದ್ದ, ಕೇಕ್ ಗಳನ್ನೂ ಆವರಿಂದ ಕತ್ತರಿಸಲು ನೀಡುವ ಮೂಲಕ ಬಹಳ ವಿಶಿಷ್ಟವಾಗಿ ಕೊಂಡಾಡಿದರು.
ಒಟ್ಟಿನಲ್ಲಿ ಇವೆಲ್ಲವೂ, ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರು (ಗುರುಗಳ) ನಡುವಿನ ಗೌರವ ಹಾಗೂ ಸ್ನೇಹ ಭಾವಗಳನ್ನು ಪ್ರದರ್ಶಿಸುತ್ತಿತ್ತು. ನಂತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕಿಯರುಗಳಿಗೆ, ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಸಂಚಾಲಕ ಶ್ರೀಯುತ ಅಬ್ದುಲ್ ಖಾದರ್ ಕುಕ್ಕಾಜೆಯವರು, ಶಿಕ್ಷಕ ಬಳಗಕ್ಕೆ ಶುಭ ಹಾರೈಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತಗೊಳಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಮುಖ್ಯ ಶಿಕ್ಷಕರಾದ ಇಬ್ರಾಹೀಮ್ ಒ. ರವರು ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಲ್ಮಾ ಸುಹಾನ ಸ್ವಾಗತಿಸಿದರು ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ರಿಝಾ ಫಾತಿಮ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಹತ್ತನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ವಾಫಿಖ್ ಧನ್ಯವಾದವಿತ್ತರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.