(www.vknews.in) ; ಭಾರತವು ಸ್ವತಂತ್ರಗೊಂಡಿತು, ಆದರೆ ಅಂತರಂಗದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪೈಪೋಟಿ ತೀವ್ರವಾಗುತ್ತಲೇ ಇದೆ. ಕೆಲವೊಂದು ತಿಡಿಗೇಡಿಗಳು ಎಲ್ಲಾ ನಾಯಕರು ಸೇರಿ ದೇಶ ಇಬ್ಭಾಗವಾಗಲು ಒಪ್ಪಿದ್ದನ್ನು ಮರೆತು ವಿಭಜನೆಯ ಮೂಲ ಕಾರಣ ಮುಸ್ಲಿಮರೆಂದು ಹೇಳಿ ಅವರನ್ನು ಗೇಲಿ ಮಾಡುತ್ತಲೇ ಇದ್ದರು. ಉನ್ನತ ಶ್ರೇಣಿಯಲ್ಲಿರುವ ನೇತೃತ್ವವು ಮುಸ್ಲಿಮರೊಂದಿಗೆ ನಿಲ್ಲಲು ಮುಂದಾಗುವುದಿಲ್ಲ. ಈ ನಿಸ್ಸಹಾಯಕ ಸ್ಥಿತಿಯಲ್ಲಿಯೂ ಏಕಾಂಗಿಯಾಗಿ ಮುಸ್ಲಿಮರು ತಮ್ಮ ಅಸ್ತಿತ್ವಕ್ಕಾಗಿ ಒಂದು ಸಂಘಟನೆ ರೂಪಿಸಬೇಕೆಂದು ಭಾವಿಸಿ ಓರ್ವ ವ್ಯಕ್ತಿ ಹೋರಾಡುತ್ತಿದ್ದರು. ಆದರೆ ಅವರ ದೀರ್ಘದೃಷ್ಟಿಯನ್ನು ಅರ್ಥೈಸದ ಕೆಲವರು ಅವರ ನಿರರ್ಥಕ ಪ್ರಯತ್ನವೆಂದು ಹೀಯಾಳಿಸಿ ಅದರಿಂದ ಹಿಂತಿರುಗಿಸಲು ವಿಫಲ ಯತ್ನವನ್ನು ನಡೆಸುತ್ತಲೇ ಇದ್ದಾರೆ.
ಆದರೆ ಇಸ್ಮಾಯಿಲ್ ಸಾಹಿಬ್ ರವರು “إنّ صلاتي ونسكي ومحياي ومماتي للّٰه ربّ العالمين” (ಖಂಡಿತ, ನನ್ನ ನಮಾಝ್, ಆರಾಧನೆ,(ಕಾರ್ಯಾಚರಣೆ) ಜೀವನ ಹಾಗೂ ಮರಣ ಅಲ್ಲಾಹನಿಗೋಸ್ಕರವಾಗಿದೆ.) ಎಂದು ಹೇಳಿ ತನ್ನ ಪ್ರಯತ್ನವನ್ನು ಮುಂದುವರೆಸಿದರು.
ಹಾಗೇ ದಿನಗಳು ಕಳೆದು ಪಾಕಿಸ್ತಾನದ ಕರಾಚಿಯಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್ ಸದಸ್ಯರು ಭಾರತದಿಂದ ಪಕ್ಷವನ್ನು ನಾಮಾವಶೇಷಗೊಳಿಸುವ ನಿಟ್ಟಿನಲ್ಲಿ ಸಂಗಮಿಸಿದರು. ಎಲ್ಲಾ ನಾಯಕರು ತಮ್ಮ ಹೇಳಿಕೆಯನ್ನು ಮಂಡಿಸಿ ಕೊನೆಗೆ ಇಸ್ಮಾಯಿಲ್ ಸಾಹೇಬ್ ರವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿಯೇಬಿಟ್ಟರು. ಭಾರತದಲ್ಲಿ ಮುಸ್ಲಿಮರು ಈಗಲೂ ವಾಸಿಸುತ್ತಾರೆ, ಭಾರತೀಯ ಮುಸ್ಲಿಮರ ನೆರವಿಗಾಗಿ ಒಂದು ಸಂಘಟನೆಯ ಅಗತ್ಯತೆ ಕಳೆದ ಕಾಲಕ್ಕಿಂತ ಈ ಕಾಲದಲ್ಲಾಗಿದೆ. ಆದರಿಂದ ಸಂಘಟನೆಯ ಕಾರ್ಯಾಚರಣೆ ನಿಲ್ಲಿಸಲು ನಾನು ಯಾವತ್ತೂ ಮುಂದಾಗಲಾರೆ. ಹಾಗೆ ಕೊನೆಗೆ ಖಾಯಿದೇ ಮಿಲ್ಲತ್ ರ ಅಭಿಪ್ರಾಯ ಸರ್ವಾಂಗೀಕೃತವಾಯಿತು. ಆದೇ ರೀತಿ ನಾಯಕರೆಲ್ಲರು ಸಂಘಟನೆಯ ಆಸ್ತಿಯನ್ನು ಹಂಚಿಕಳ್ಳಲು ತೀರ್ಮಾನಿಸಿದರು.
ಅದರಲ್ಲಿ 17 ಲಕ್ಷ ರೂ. ಖಾಯಿದೇ ಮಿಲ್ಲತರ ಭಾರತೀಯ ಸಂಘಟನೆಗೆ ನೀಡುವ ನಿರ್ಧಾರವಾಯಿತು. ಆದರೆ ಯಾವುದೇ ತುರ್ತು ಸಂದರ್ಭದಲ್ಲಾದರೂ ತನ್ನ ಆದರ್ಶವನ್ನು ಕೈಬಿಡದ ಖಾಯಿದೇ ಮಿಲ್ಲತ್ ಅದನ್ನು ನಿರಾಕರಿಸಿ, ಭಾರತೀಯ ಮುಸ್ಲಿಮರ ಸಂರಕ್ಷಣೆಯನ್ನು ಹೊರತು ಈ ಕೇವಲ ಆಸ್ತಿಗಾಗಿ ಇಲ್ಲಿಗೆ ಬಂದವನಲ್ಲ ನಾನು, ಅದಲ್ಲದೇ ಇದನ್ನು ಪಡೆದರೆ ಜನರೆಲ್ಲರು ಸಂಘಟನೆಯನ್ನು ತಪ್ಪಾಗಿ ಅರ್ಥೈಸಬಹುದು. ಮಾತ್ರವಲ್ಲ, ಇವತ್ತು ನೀವು ನಮಗೆ ಅನ್ಯ ದೇಶದ ಪ್ರಜೆಗಳು, ಆದರಿಂದ ನಮ್ಮ ಯಾವುದೇ ವಿಚಾರದಲ್ಲಿ ನೀವು ತಲೆ ಹಾಕದೇ ಇಲ್ಲಿಯ ಅಲ್ಪಸಂಖ್ಯಾತರಾದ ಅಮುಸ್ಲಿಮರಿಗೆ ಸಂಪೂರ್ಣ ಸಂರಕ್ಷಣೆಯನ್ನು ಖಚಿತಪಡಿಸಬೇಕೆಂಬುದೊಂದೇ ನನ್ನ ವಿನಂತಿ. ಇದೇ ಸಂಗಮದಲ್ಲಿ ಇಸ್ಮಾಯಿಲ್ ಸಾಹಿಬ್ ರನ್ನು ಅಖಿಲ ಭಾರತ ಮುಸ್ಲಿಂ ಲೀಗ್ ಇದರ ಭಾರತೀಯ ವಿಭಾಗದ ಸಂಚಾಲಕರಾಗಿ ನೇಮಕ ಮಾಡಲಾಯಿತು.
(ಮುಂದುವರೆಯುವುದು)
✍️ ಸಲಾಹುದ್ದೀನ್ ಕಡಬ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.