(www.vknews.in) ; ಪುದು ಗ್ರಾ. ಪಂ ವ್ಯಾಪ್ತಿಯ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಗೆ ಬಾಗಿಕೊಂಡು ಅಪಾಯವನ್ನು ಆಹ್ವಾನಿಸುತ್ತಿದ್ದ ಬ್ರಹತ್ ಆಲದ ಮರದ ರೆಂಬೆಗಳನ್ನು ತೆರವುಗೊಳಿಸಲು ಆಗ್ರಹಿಸಿ ಎಸ್ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಅದರಂತೆ ತಕ್ಷಣ ಸ್ಪಂದಿಸಿದ ಪುದು ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಅಪಾಯಕಾರಿಯಾದ ಮರದ ರೆಂಬೆಗಳನ್ನು ತೆರವುಗೊಳಿಸಿದ್ದಾರೆ.
ಈ ಭಾಗದಲ್ಲಿ ಶಾಲಾ ವಾಹನಗಳು, ವಿದ್ಯಾರ್ಥಿಗಳು, ಇನ್ನಿತರ ವಾಹನಗಳು ನಿತ್ಯ ಸಂಚಾರ ನಡೆಸುತ್ತಿದ್ದು ಈ ಬ್ರಹತ್ ಆಲದ ಮರಗಳ ರೆಂಬೆಗಳಿಂದ ಆಗುವ ಅಪಾಯದ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ಬಳಿ ಎಸ್ಡಿಪಿಐ ನಿಯೋಗ ಲಿಖಿತ ಮನವಿ ನೀಡಿ ಎಚ್ಚರಿಸಿತ್ತು ಅದರತೆ ಕಾರ್ಯಪ್ರವೃತರಾದ ಪುದು ಗ್ರಾಮ ಪಂಚಾಯತ್ ಅರಣ್ಯ, ಮೆಸ್ಕಾಂ ಇಲಾಖೆಯ ಸಹಕಾರದಿಂದ ಮರಗಳ ರೆಂಬೆಗಳನ್ನು ತೆರವುಗೊಳಿಸಲಾಯಿತು.
ಎಸ್ಡಿಪಿಐ ಮನವಿಗೆ ಸ್ಪಂಧಿಸಿದ ಪುದು ಗ್ರಾಮ ಪಂಚಾಯತ್ ಗೆ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಮತ್ತು ಪದಾದಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ ಮಾತ್ರವಲ್ಲ ಎಸ್ಡಿಪಿಐ ಯ ಸಮಯೋಚಿತ ಸಮಯ ಪ್ರಜ್ಞೆ ಯನ್ನು ನಾಗರಿಕರು ಪ್ರಶಂಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.