ಅಬುಧಾಬಿ (www.vknews.in) : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ ಸಿ ಎಫ್ ಅಬುಧಾಬಿ ವರ್ಷಂ ಪ್ರತಿ ಹಮ್ಮಿಕೊಂಡು ಬರುವ ಬೃಹತ್ ಮೀಲಾದ್ ಸಮಾವೇಶವು ದಿನಾಂಕ ಸೆಪ್ಟೆಂಬರ್ 8 ಆದಿತ್ಯವಾರದಂದು ಇಂಡಿಯನ್ ಇಸ್ಲಾಮಿಕ್ ಸೆಂಟರ್ ಅಬೂಧಾಬಿಯಲ್ಲಿ ಮಗ್ರಿಬ್ ನಮಾಜಿನ ಬಳಿಕ, ಮೌಲಿದ್ ಹಾಗೂ ಬುರ್ದಾ ಮಜ್ಲಿಸಿನೊಂದಿಗೆ ಪ್ರಾರಂಭಗೊಂಡಿತು .
ಕೆ ಸಿ ಎಫ್ ತೈಬಾ ಮದರಸ ವಿದ್ಯಾರ್ಥಿ ಮುಹಮ್ಮದ್ ಅರ್ಶ್ ಕಿರಾಅತ್ ಪಠಿಸಿದರು.ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಕೆದುಂಬಾಡಿ ಇಬ್ರಾಹಿಂ ಸಖಾಫಿ ವೇದಿಕೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.ಬಳಿಕ ತ್ವೈಬಾ ಮದರಸ ವಿದ್ಯಾರ್ಥಿಗಳಿಂದ ನ್ಯಾಷನಲ್ ಆಂತಂ ಆಲಾಪನೆಯು ಕಾರ್ಯಕ್ರಮಕ್ಕೆ ರಂಗು ನೀಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದವರಿಗೆ ಕೆಸಿಎಫ್ ಅಬುಧಾಬಿ ಮೀಲಾದ್ ಸಮಿತಿ ವತಿಯಿಂದ ಗೌರವ ಸ್ಮರಣಿಕೆಗಳನ್ನು ನೀಡಲಾಯಿತು.ತದನಂತರ ಇಸ್ಲಾಮಿನ ಗತಕಾಲದ ಚರಿತ್ರೆಗಳ ನೆನಪಿಸಿ ಸಯ್ಯಿದ್ ಅಬ್ದುಲ್ ರಹ್ಮಾನ್ ಆಟ್ಟೀರಿ ತಂಙಳ್ ಮುಖ್ಯ ಪ್ರಭಾಷಣ ನಡೆಸಿದರು.
ಈ ವೇಳೆ ವೇದಿಕೆಯಲ್ಲಿ ,ಕೂಟ್ಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ , ಕೆಸಿಎಫ್ ಐಸಿ ನಾಳೆಡ್ಜ್ ಸೆಕ್ರೆಟರಿ ಹಮೀದ್ ಸಅದಿ , ಕೆಸಿಎಫ್ ಯುಎಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸ ಹಾಜಿ ಬಸರ, ಕೆಸಿಎಫ್ ಯುಎಇ ರಾಷ್ಟ್ರೀಯ ಟ್ರಷರರ್ ಇಬ್ರಾಹಿಂ ಹಾಜಿ ಬ್ರೈಟ್ , ಮೀಲಾದ್ ಸಮಿತಿ ಚಯರ್ಮಾನ್ ರಝಾಕ್ ಹಾಜಿ ಜಲ್ಲಿ , ರಾಶಿದ್ ಬನಿಯಾಸ್ ಸ್ಪೈಕ್ ,ಇಂಡಿಯನ್ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷರು ಬಾವ ಹಾಜಿ ಹಾಗೂ ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.ನಂತರ ಕೆಸಿಎಫ್ ಅಬುಧಾಬಿ ಅಧ್ಯಕ್ಷರಾದ ಹಸೈನಾರ್ ಅಮಾನಿ ಸ್ವಾಗತಿಸಿದ ಕಾರ್ಯಕ್ರಮವನ್ನು ಸ್ವಾಗತ ಸಮಿತಿ ಜನರಲ್ ಕನ್ವೀನರ್ ಉಮರ್ ಈಶ್ವರಮಂಗಲ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.