(www.vknews.in) ; ಕಾರ್ಕಳ ತಾಲೂಕಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ನಿರ್ಮಿಸಿದ ಕೃಷ್ಣ ನಾಯಕ್ – Krish Art World ರವರ ಖಾತೆಯಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಣ ಪಡೆದ ಬಗ್ಗೆ ತನಿಖೆ ಮಾಡಲು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ:
ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ (ರಿ) ನ ಗೌರವಾಧ್ಯಕ್ಷರಾದ ಕೃಷ್ಣ ಮೂರ್ತಿ ಆಚಾರ್ಯ. ಕಾರ್ಕಳ ತಾಲೂಕಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ಧ ಮಾನ್ಯ ಉಚ್ಛ ನ್ಯಾಯಾಲಯದ ಅರ್ಜಿದಾರರು ಹಾಗೂ ಆರೋಪಿತನಾದ ಕೃಷ್ಣ ನಾಯಕ್ ರವರ ದಾಖಲು ಮಾಡಿರುವ ದಾವೆ CRL.P 6159/24 ರಲ್ಲಿ ವಾದ ಮಾಡುವ ಸಂಧರ್ಭದಲ್ಲಿ ಮೂಲ ದೂರುದಾರರು ಹಾಗೂ ಉಚ್ಛ ನ್ಯಾಯಾಲಯದಲ್ಲಿ ಪ್ರತಿವಾದಿಯಾದ ನಲ್ಲೂರು ಕೃಷ್ಣ ಶೆಟ್ಟಿಯವರ ವಕೀಲರಾದ ಕೆ ವಿ ಶ್ರೀಕಾಂತ್ ರವರು ದಾಖಲೆ ಸಮೇತ ಮಾನ್ಯ ನ್ಯಾಯಾಧೀಶರಿಗೆ ಶಿಲ್ಪಿ ಕೃಷ್ಣ ನಾಯಕ್ – Krish Art World ರವರ ಬ್ಯಾಂಕ್ ಖಾತೆಯಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಖಾತೆಗೆ ಹಣ ಪಡೆದ ಬಗ್ಗೆ ಕಾರ್ಕಳ ಪೊಲೀಸರ ವಶದಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧೀಕ್ಷಕರಿಗೆ ಕಾರ್ಕಳ ಪರಶುರಾಮ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಕೃಷ್ಣ ಮೂರ್ತಿ ಆಚಾರ್ಯರವರು ಮನವಿಯನ್ನು ಮಾಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.