(www.vknews.in) ; ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ದಿನಾಂಕ 10.9.20240 ಮತ್ತು 11.9.2024 ರಂದು ಸ್ವಚ್ಚತಾ ಪಖ್ವಾಡ ಕಾರ್ಯಕ್ರಮದಡಿಯಲ್ಲಿ “ಕೈ ತೊಳೆಯುವ ದಿನ” ಮತ್ತು “ವೈಯಕ್ತಿಕ ನೈರ್ಮಲ್ಯ ದಿನ” ಹಾಗೂ “ಸ್ವಚ್ಚತಾ ಕಾರ್ಯಕ್ರಮವನ್ನು” ಹಮ್ಮಿಕೊಳ್ಳಲಾಗಿತ್ತು. ಈ ದಿನ ಕಬ್ -ಬುಲ್ ಬುಲ್, ಸ್ಕೌಟ್ಸ್ -ಗೈಡ್ಸ್ ಹಾಗೂ ಶಾಲಾ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಅವರ ಸಾರಥ್ಯದಲ್ಲಿ ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಕೈ ತೊಳೆಯುವ ವಿಧಾನವನ್ನು ಶಿಕ್ಷಕಿ ಚಂದ್ರಾವತಿ ತಿಳಿಸಿದರು. ಸ್ವಚ್ಚತೆ ಹಾಗೂ ಅದರ ಮಹತ್ವವನ್ನು ಗೈಡ್ ಕ್ಯಾಪ್ಟನ್ ವನಿತಾ ಶೆಟ್ಟಿ ವಿವರಿಸಿದರು. ಶಾಲಾ ಕೊಠಡಿ, ಶೌಚಾಲಯಯದ ಸ್ವಚ್ಚತೆ ಹೇಗೆ ಮಾಡಬೇಕು ಎಂಬುದನ್ನು ಶೇಖ್ ಜಲಾಲುದ್ದೀನ್ ಮನದಟ್ಟು ಮಾಡಿದರು.ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.