(www.vknews.in) ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು.ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ಉತ್ತರ ಹಾಗೂ ಕೆನರಾ ಪ್ರೌಢಶಾಲೆ ಡೊಂಗರಕೆರೆ ಮಂಗಳೂರು ಇವುಗಳ ಸಹಯೋಗದೊಂದಿಗೆ ಇಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಅಕ್ಷರ ಭಾರತಿ ವಿದ್ಯಾಲಯ ಆಲದಪದವಿನ ಎಂಟನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಸೈದಾ ಇವರು 2000 ಮೀಟರ್ ಹಾಗೂ 500 ಡಿ ಮೀಟರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಎರಡು ಬೆಳ್ಳಿಪದಕ ತಮ್ಮದಾಗಿಸಿಕೊಂಡಿದ್ದಾರೆ.
ಇವರು ಮಾವಿನಕಟ್ಟೆ ನಿವಾಸಿ ಅಬ್ದುಲ್ ಶರೀಫ್ ಮತ್ತು ಸಫೀನಾ ದಂಪತಿ ಪುತ್ರಿ. ಮಂಗಳೂರು ಸ್ಕೇಟಿಂಗ್ ಕ್ಲಬ್ ನ ಮಹೇಶ್ ಕುಮಾರ್ ಹಾಗೂ ಶ್ರವಣ್ ತರಬೇತಿ ನೀಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.