(www.vknews.in) ; ದಿನಾಂಕ: 10-09-2024 ಮಂಗಳವಾ ರದಂದು ಹಿರಿಯ ಗೃಹರಕ್ಷಕ ಶ್ರೀ ಅಣ್ಣು ಬಿ. ಅಸಿಸ್ಟೆಂಟ್ ಸೆಕ್ಷನ್ ಲೀಡರ್, ಉಪ್ಪಿನಂಗಡಿ ಘಟಕ ಅವರನ್ನು ಗೃಹರಕ್ಷಕ ದಳದ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಿ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.
ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ ದಿನೇಶ್ ಬಿ. ಇವರು ವೈಯಕ್ತಿಕ ಕಾರಣದಿಂದಾಗಿ ಪ್ರಭಾರ ಘಟಕಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಅವರನ್ನು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಿ ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳದ ಕಛೇರಿ ಅಧೀಕ್ಷಕರಾದ ಶ್ರೀ ಚಂದ್ರು, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಶ್ರೀಮತಿ ಮಂಜುಳಾ ಮತ್ತು ಉಪ್ಪಿನಂಗಡಿ ಘಟಕದ ಸಾರ್ಜೆಂಟ್ ಶ್ರೀ ರಾಮಣ್ಣ ಆಚಾರ್, ಗೃಹರಕ್ಷಕಿಯರಾದ ಶ್ರೀಮತಿ ಸುಲೋಚನಾ, ನಿಶಾ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.