ಮಂಗಳೂರು (www.vknews.in) : ಇತ್ತೀಚೆಗೆ ಮೈಸೂರಿನ ನಾಗಮಂಗಲದಲ್ಲಿ ನಡೆದ ಮತೀಯ ಗಲಭೆ ಪೂರ್ವಯೋಜಿತ, ಕುಮಾರ ಸ್ವಾಮಿಯವರ ಅಂತಿಮ ಉದ್ದೇಶ ಅದೇ ಆಗಿತ್ತು, ಗಲಭೆಗೆ ಆರ್.ಎಸ್.ಎಸ್ ಸ್ಕೆಚ್ಚು ಹಾಕಿದೆ, ಧಾರ್ಮಿಕ ಸಂದರ್ಭವನ್ನು ಬಳಸಿ ಕೊಂಡಿದೆ. ಗಲಬೇಕೋರ ಪಟ್ಟ ಮುಸ್ಲಿಮರ ಪಾಲಿಗೆ ಸಿಕ್ಕಿದೆ, ಕಾನೂನಾತ್ಮಕವಾಗಿ ತನಿಖೆ ನಡೆಯುತ್ತಿದೆ. ಅಮಾಯಕ ಮುಸ್ಲಿಂ ಸಮುದಾಯದವರನ್ನು ಭಂದಿಸಲಾಗಿದೆ. ಆರ್.ಅಶೋಕ್ ನ್ಯಾಯಾಧೀಶರಂತೆ ತೀರ್ಪು ಹೇಳಿಕೆ ನೀಡಿ ಮುಸ್ಲಿಮರ ಮನೆ ಮೇಲೆ ಬುಲ್ಡೋಜರ್ ನುಗ್ಗಿಸುವ ಹೇಳಿಕೆ ನೀಡಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಮುಖ್ಯ ಮಂತ್ರಿ ಗಿರಿಯ ಕನಸು ಕಾಣುತ್ತಿದ್ದಾರೆ. ಫುಲ್ – ಡೋಸ್ ನಶೆಯಲ್ಲಿ ಹೇಳಿಕೆ ನೀಡಿದಂತಿದೆ. ಹಾಗಿದ್ದರೆ ಆರ್.ಅಶೋಕ್ ಮುಖ್ಯ ಮಂತ್ರಿ ಸ್ಥಾನದ ಕನಸು ಬಿಟ್ಟು ಬಿಡಲಿ, ಹಾಲಿ ಸರಕಾರದ ವಿರುದ್ಧದ ತನ್ನ ಅಭಿವೃದ್ಧಿ ಯೇತರ ಹೇಳಿಕೆ ಎಲ್ಲೂ ಫಲಿಸುವುದಿಲ್ಲ ಎಂದು ತಿಳಿಯಲಿ. ಬಿಜೆಪಿ ತನ್ನ ಪಕ್ಷದ ಅದೆಷ್ಟೋ ನಾಯಕರನ್ನು ಮನೆಗೆ ಕಳುಹಿಸಿದ ಮುಂದಿನ ಸರದಿಯಲ್ಲಿ ಅಶೋಕ್ ಇದ್ದಾರೆ ಎಂದು ತಿಳಿಯಲಿ, ಕೆ.ಎಸ್.ಈಶ್ವರಪ್ಪ ರವರಲ್ಲಿ ಅನುಭವ ತಿಳಿದು ಕೊಳ್ಳಲಿ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.