ಬಂಟ್ವಾಳ (www.vknews. in) : ನಿವೃತ್ತ ಸೈನಿಕ ರೋರ್ವರು ಬಿ.ಸಿ.ರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲವೇ ಸಮಯದಲ್ಲಿ ಲಕ್ಷಾಂತರ ರೂ ನಗದು ಇದ್ದ ಬ್ಯಾಗ್ ಕಳವಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬ್ರೋಸ್ ಡಿಸೋಜ ಅವರ 1.30 ಲಕ್ಷ ರೂಪಾಯಿ ಎಸ್.ಬಿ.ಐ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಿಂದ ಕಳವಾಗಿದೆ.
ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಅವರು ಬರುವ ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ತೆಗೆಯುತ್ತಿದ್ದರು. 50 ಸಾವಿರ ಹಣವನ್ನು ಬ್ಯಾಗ್ ನಲ್ಲಿ ಇರಿಸಿಕೊಂಡು ಬಿ.ಸಿ.ರೋಡಿನ ಎಸ್.ಬಿ.ಐ ಬ್ಯಾಂಕ್ ಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್ ನಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು. ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಅಲ್ಲಿರದೆ ಕಾಣೆಯಾಗಿತ್ತು.
ಕಳವಾದ ಬ್ಯಾಗ್ ಬಿ.ಸಿ.ರೋಡು ಸಮೀಪದ ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದ್ದು, ಅದರಲ್ಲಿ ದಾಖಲೆ ಪತ್ರಗಳು ಮಾತ್ರ ಇದ್ದು ನಗದು ಲಪಟಾಯಿಸಿದ್ದಾರೆ ಎಂದವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.