ದುಬೈ (www.vknews. in) ; ಮಾನವಜಾತಿಗೆ ಮಾರ್ಗದರ್ಶಕರಾದ ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಎಂಬ ಶೀರ್ಷಿಕೆಯಡಿಯಲ್ಲಿ ಕೆಸಿಎಫ್ ದುಬೈ ನಾರ್ತ್ ಝೋನ್ ಗ್ರಾಂಡ್ ಮೀಲಾದ್ ಸಮಾವೇಶ 2024 ಸೆಪ್ಟೆಂಬರ್ 15 ರಂದು, ಆದಿತ್ಯವಾರ ಸಂಜೆ 5 ಗಂಟೆಗೆ ದುಬೈ ಅಲ್ ನಹ್ದಾದಲ್ಲಿ ಇರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಕೂರತ್ ನೇತೃತ್ವವನ್ನು ವಹಿಸಲಿದ್ದು, ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟಪದವು ಮುಖ್ಯಭಾಷಣ ಮಾಡಲಿದ್ದಾರೆ.
ಕರ್ನಾಟಕ ವಿಧಾನ ಸಭಾ ಸ್ಪೀಕರ್ ಗೌರವಾನ್ವಿತ ಯುಟಿ ಖಾದರ್ ಹಾಗು ತುಂಬೆ ಗ್ರೂಪ್ ಮಾಲಕರಾದ ಡಾ.ಮೊಹಿದ್ದೀನ್ ತುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಯುಎಇ ಯ ಹಲವು ಉದ್ಯಮಿಗಳು, ಸಾಮಾಜಿಕ ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ. ಪ್ರವಾದಿ ಕೀರ್ತನೆಗಳ ಮಧುರ ಕಾವ್ಯ ಬುರ್ದಾ ಮತ್ತು ನಾತ್ ಆಲಾಪನೆಯನ್ನು ಪ್ರಸಿದ್ಧ ಗಾಯಕರಾದ ಉಮರುಲ್ ಫಾರೂಕ್ ಶ್ರೀಕಂದಪುರಂ, ಸಲೀಂ ಜೌಹರಿ ಕೊಲ್ಲಂ ಮತ್ತು ಅಮೀನ್ ಸಅದಿ ಪೇರಾಲ್ ನೇತೃತ್ವ ವಹಿಸಲಿದ್ದಾರೆ.
ಆಧ್ಯಾತ್ಮಿಕವಾಗಿ ಸ್ಮರಣೀಯವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಭಕ್ತಿಮಯ ಸೆಷನ್ಗಳಲ್ಲಿ ಪಾಲ್ಗೊಳ್ಳಲು ಯುಎಇ ಎಲ್ಲಾ ಅನಿವಾಸಿ ಸಹೋದರ ಸಹೋದರಿಯರು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಲು ಗ್ರಾಂಡ್ ಮೀಲಾದ್ ಸ್ವಾಗತ ಸಮಿತಿಯ ಪತ್ರಿಕಾ ಪ್ರಕಟಣೆಯಲ್ಲಿ ಉಪಸ್ಥಿತರಿದ್ದ ಚೇರ್ಮನ್ ಜನಾಬ್ ಅಬ್ದುಲ್ ಖಾದರ್ ಸಾಲೆತ್ತೂರು, ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ರವರು ಮನವಿಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.