(www.vknews. in) ; ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ದಿನಾಂಕ: 13-09-2024 ರಂದು ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಮೂಡಬಿದ್ರಿ ಘಟಕದ ಗೃಹರಕ್ಷಕ ಶ್ರೀ ನಾರಾಯಣ ಗೌಡ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು. 1964 ಏಪ್ರಿಲ್ 20ರಂದು ಜನಿಸಿದ ಶ್ರೀ ನಾರಾಯಣ ಗೌಡ, 2014 ರ ಏಪ್ರಿಲ್ 28 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸತತವಾಗಿ ಸುಮಾರು 10 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ದಿನಾಂಕ: 20-04-2024 ರಂದು ಸೇವಾ ನಿವೃತ್ತಿ ಪಡೆದರು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮೂಡಬಿದ್ರಿ ಘಟಕದ ಗೃಹರಕ್ಷಕ ಶ್ರೀ ನಾರಾಯಣ ಗೌಡ ಇವರಿಗೆ ಹೂ, ಹಾರ, ಹಣ್ಣು ಹಂಪಲು ನೀಡಿ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಡಾ|| ಚೂಂತಾರು ಅವರು ಮಾತನಾಡುತ್ತಾ ನಿವೃತ್ತ ಗೃಹರಕ್ಷಕರ ಸೇವೆ ಬಹಳ ಸ್ಮರಣೀಯ. ಇವರು ಇತರ ಎಲ್ಲಾ ಗೃಹರಕ್ಷಕರಿಗೆ ಮಾದರಿಯಾಗಿ ಕೆಲಸ ಮಾಡಿದ್ದಾರೆ. ಇವರು ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ ಹಾಗೂ ಚುನಾವಣಾ ಬಂದೋಬಸ್ತ್ ಕರ್ತವ್ಯ ಹಾಗೂ ನೆರೆಹಾವಳಿ, ಕೋಮುಗಲಭೆ ನಿಯಂತ್ರಣ, ಹಬ್ಬಗಳ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುತ್ತಾರೆ. ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ.
ಮೂಡಬಿದ್ರಿ ಘಟಕದ ಕಛೇರಿ ಕಟ್ಟಡ ನಿರ್ಮಾಣ ಕಾರ್ಯದ ಸಮಯದಲ್ಲಿ ಯಾವುದೇ ಸಂಭಾವನೆಯನ್ನು ಪಡೆಯದೇ ಕಟ್ಟಡವನ್ನು ಕಟ್ಟುವ ಕೆಲಸವನ್ನು ಮಾಡಿರುತ್ತಾರೆ. ಅವರ ನಿವೃತ್ತಿಯಿಂದ ಇಲಾಖೆಗೆ ಬಹಳ ತುಂಬಲಾರದ ನಷ್ಟ ಎಂದು ನುಡಿದರು. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಅಧೀಕ್ಷಕರಾದ ಎನ್. ಚಂದ್ರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ, ಸುಲೋಚನ, ನಿಶಾ, ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.