ಸಕಲೇಶಪುರ (www.vknews. in) : ಸಕಲೇಶಪುರ ತಾಲೂಕಿನ ಕೊಳ್ಲೆಹಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿಯಲ್ಲಿ ಸಂಭ್ರಮ, ಸಡಗರದಿಂದ ಈದ್ ಮೀಲಾದ್ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷರಾದ ಕೊಳ್ಳಹಳಿ ಸಲೀಮ್ ರವರು ಧ್ವಜಾರೋಹಣಗೈದರೂ ನಂತರ ಜುಮ್ಮಾ ಮಸೀದಿಯ ಖತೀಬರಾದ ಬದ್ರುದ್ದಿನ್ ದಾರಮಿರವರ ನೇತ್ರತ್ವದಲ್ಲಿ ಮೀಲಾದ್ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಸ್ಥಳೀಯ ಮದ್ರಸ ವಿದ್ಯಾರ್ಥಿಗಳು, ಜಮಾಹತ್ ಕಮಿಟಿ ಯ ಪದಾಧಿಕಾರಿಗಳು, ಊರ ಮುಖಂಡರು, ಹಿರಿಯರು ಕಿರಿಯರು ಭಾಗವಹಿಸಿದರು, ಈ ಮೆರವಣಿಗೆಯಲ್ಲಿ ಸ್ಥಳೀಯ ಮದ್ರಸ ವಿದ್ಯಾರ್ಥಿಗಳ ದಫ್ ಕಾರ್ಯಕ್ರಮವು ರಸವತ್ತಾಗಿತ್ತು ಸರ್ವ ಜನರು ಸಹೋದರತೆಯಿಂದ, ಪ್ರೀತಿ ಪ್ರೇಮದಿಂದ ಸೌಹರ್ದತೆಯಿಂದ ಬಾಳಬೇಕು ಎಂದು ಸಾರಿದ ಪ್ರವಾದಿಗಳ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳು, ಬದ್ರಿಯಾ ಜುಮ್ಮಾ ಮಸೀದಿಯ ಅದ್ಯಕ್ಷರಾದ ಕೊಳ್ಳೆಹಳಿ ಸಲೀಮ್ ರವರು ತಮ್ಮ ಈದ್ ಮೀಲಾದ್ ಸಂದೇಶದಲ್ಲಿ ನುಡಿದರು.
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.