ಇರ್ವತ್ತೂರು ಪದವು (www.vknews. in) : ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ಇಲ್ಲಿ ಪುಣ್ಯ ಪ್ರವಾದಿಯವರ ಜನ್ಮದಿನ ಅಂಗವಾಗಿ ಮಿಲಾದ್ ಫೆಸ್ಟ್ ಆಚರಿಸಲಾಯಿತು. .ಇರ್ವತ್ತೂರು ಜಮಾಅತ್ ಖತೀಬರಾದ ಉಮರ್ ಮದನಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮದ್ರಸ ವಿದ್ಯಾರ್ಥಿಗಳು ಮುಹಮ್ಮದ್ ಪೈಗಂಬರ್ (ಸ.ಅ )ರವರ ಚರಿತ್ರೆ,ಭಾಷಣ ,ಮದಹ್ ಗೀತೆಗಳ ಮೂಲಕ ಈ ದಿನಕ್ಕೆ ಅರ್ಥ ಕಲ್ಪಿಸಿದರು.
ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಫೀಕ್ ಮದನಿ, ಸಿದ್ದೀಕ್ ಸಖಾಫಿ,ಜಮಾಅತ್ ಅಧ್ಯಕ್ಷರಾದ ಹಾಮದಾಕ ಸೇವಾ,ಉಪಾದ್ಯಕ್ಷರಾದ ಅಬೂಬಕ್ಕರ್, ಕಾರ್ಯದರ್ಶಿ ಮುನೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಹಾಗೂ ಸದಸ್ಯರಾದ ಪಿ ಅಬ್ದುಲ್ ಹಮೀದ್, ಪಿ ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್, ಬದ್ರುದ್ದೀನ್, ಸಾದಿಕ್ ಉಪಸ್ಥಿತರಿದ್ದರು. ಎಸ್.ಪಿ. ಮುಹಮ್ಮದ್ ರಫೀಕ್, ಸ್ವಾಗತಿಸಿದರು. ಮುಹಮ್ಮದ್ ಅಝರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.