(www.vknews. in) ಕಲ್ಲಡ್ಕ ಅಬ್ರಾಡ್ ಫೋರಂ : ಅನಿವಾಸಿಗಳ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ಸೌದಿ ಅರೇಬಿಯಾ : ಕಲ್ಲಡ್ಕ ಅಬ್ರಾಡ್ ಫೋರಂ, ಸೌದಿ ಅರೇಬಿಯಾ ಸಮಿತಿಯು ಆಯೋಜಿಸುವ ಜಿಸಿಸಿ ರಾಷ್ಟ್ರಗಳಲ್ಲಿ ನೆಲೆಸಿರುವ ಕಲ್ಲಡ್ಕದ ಅನಿವಾಸಿಗಳ ಸ್ನೇಹ ಸಮ್ಮಿಲನ ಸಮಾರಂಭದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜುಬೈಲ್ನಲ್ಲಿರುವ ಬ್ರೈಟ್ ಸಪೋರ್ಟ್ ಕಚೇರಿ ಹಾಗೂ ದುಬೈನಲ್ಲಿರುವ ಹೋಟೆಲ್ ಕ್ಯಾಲಿಕಟ್ ಪ್ಯಾರಾಗಾನ್ನಲ್ಲಿ ನಡೆಯಿತು. ಕಾರ್ಯಕ್ರಮದ ದಿನಾಂಕವನ್ನು ಬ್ರೈಟ್ ಸಪೋರ್ಟ್ ಮಾಲಕರಾದ ರಫೀಕ್ ರವರು ಘೋಷಿಸಿದರು. ಯುಎಇ, ಕತಾರ್, ಕುವೈತ್, ಒಮಾನ್, ಬಹರೈನ್ ಹಾಗೂ ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ನೆಲೆಸಿರುವ ಕಲ್ಲಡ್ಕದ ಅನಿವಾಸಿ ಸಹೋದರರನ್ನು ಒಟ್ಟು ಸೇರಿಸಿ ನಡೆಸುವ ಈ ಕಾರ್ಯಕ್ರಮ 2024 ನವೆಂಬರ್ 22 ರ ಶುಕ್ರವಾರದಂದು ದಮ್ಮಾಮ್ ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಲಡ್ಕ ಅಬ್ರಾಡ್ ಫೋರಂ ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಜಾಬಿರ್ ರವರು, ಕಲ್ಲಡ್ಕದಿಂದ ಗುರುತಿಸಲ್ಪಟ್ಟ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿಗಳಾದ ಸಕ್ವಾಫ್, ಸಿದ್ದೀಕ್,ಕಾರ್ಯಕಾರಿ ಸಮಿತಿ ಸದಸ್ಯರಾದ ಅಕ್ಬರ್, ಇರ್ಷಾದ್, ಮಸ್ಹೂದ್ ಭಾಗವಹಿಸಿದ್ದರು.
ದುಬೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌದಿ ಅಲ್ – ಅಕ್ದೂದ್ ಕಂಪೆನಿಯ ಮಾಲಕರಾದ ಫಿರೋಝ್ ಮತ್ತು ಇಸ್ಮಾಯಿಲ್, ಕಲ್ಲಡ್ಕ ಅಬ್ರಾಡ್ ಫೋರಂ ಯುಎಇ ಘಟಕದ ಅಧ್ಯಕ್ಷರಾದ ನವಾಝ್ ಹಜಾಜ್, ರಫೀಕ್ ಸಾಹಿಬ್ ನೆಕ್ಕರಾಜೆ, ಜಬ್ಬಾರ್ ಕೆಕೆ, ಫಾರೂಕ್, ಫಯಾಝ್, ಮಹಮ್ಮದಾಲಿ, ತಮೀಮ್ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.