(www.vknews. in)ಪ್ರತಿಭಾ ಕಾರಂಜಿ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಸತತ ಮೂರನೇ ಬಾರಿ ಚಾಂಪಿಯನ್ ಬೆಳ್ತಂಗಡಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಕರಾಯ ಇದರ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತ್ತಡ್ಕ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ 2024 ರಲ್ಲಿ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆ ಚಾಂಪಿಯನ್ ಶಿಪ್ ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ತನ್ನ ಚಾಂಪಿಯನ್ ಶಿಪ್ ನ್ನು ಉಳಿಸಿಕೊಂಡು ಸಂಸ್ಥೆ ಗೆ ಕೀರ್ತಿ ತಂದಿದೆ. ಇಂಗ್ಲಿಷ್ ಕಂಠಪಾಠದಲ್ಲಿ ತರಗತಿ ವಿದ್ಯಾರ್ಥಿ ಉಝೈಫ್ ಪ್ರಥಮ, ಛದ್ಮವೇಷ ದಲ್ಲಿ ಆರಿಫ್ ಪ್ರಥಯ, ಅರೆಬಿಕ್ ಪಠಣದಲ್ಲಿ ಫಾತಿಮಾ ದ್ವಿತೀಯ, ಶಯಾನ್ ದ್ವಿತೀಯ, ಮಿಮಿಕ್ರಿಯಲ್ಲಿ ಶಾಮಿಲ್ ದ್ವಿತೀಯ, ದೇಶಭಕ್ತಿ ಗೀತೆಯಲ್ಲಿ ಅಮ್ಜದ್ ತೃತೀಯ, ಕ್ಲೇ ಮೋಡೆಲ್ ನಲ್ಲಿ ಮನ್ ಹ ದ್ವಿತೀಯ, ಹಿಂದಿ ಕಂಠಪಾಠ ದಲ್ಲಿ ಶಹಾನ ತೃತೀಯ, ಕನ್ನಡ ಕಂಠಪಾಠ ದಲ್ಲಿ ಖಾಸಿಂ ಪ್ರಥಮ, ಕಥೆ ಹೇಳುವುದರಲ್ಲಿ ಶಝ್ನ ತೃತೀಯ, ಅಭಿನಯ ಗೀತೆ ಯಲ್ಲಿ ರಾಯಿಫ ಪ್ರಥಮ ಸಂಸ್ಕೃತ ಧಾರ್ಮಿಕ ಪಠಣ ದಲ್ಲಿ ಮನ್ವಿತ್ ಪ್ರಥಮ ಸ್ಥಾನ ಗಳನ್ನು ಗಳಿಸುವ ಮೂಲಕ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಯಲ್ಲಿ ಚಾಂಪಿಯನ್ ಶಿಪ್ ಪಡೆದಿದೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯ ರಾದ ಇಬ್ರಾಹಿಂ ಖಲೀಲ್ ಎಚ್ ಇವರು ತಿಳಿಸಿದ್ದಾರೆ. ಶಾಲಾ ಸಂಚಾಲಕರು ಅಬ್ದುಲ್ ರವೂಫ್ ಯು ಟಿ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂಸದಿಸಿದರು.ಮತ್ತು ರಕ್ಷಕ ಶಿಕ್ಷಕ ಸಂಘದ ಇಕ್ಬಾಲ್ ಜೊಗಿಬೆಟ್ಟು ಎಲ್ಲರನ್ನೂ ಅಭಿನಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.