(www.vknews. in) ಮಾನವ ಹಕ್ಕು ಹೋರಾಟಗಾರ ಪಿ.ಬಿ.ಡೆ’ಸ್ಸಾ ನಿಧನ: ಪಿಯುಸಿಎಲ್ ಕರ್ನಾಟಕ ತೀವ್ರ ಸಂತಾಪ.
ಶ್ರೀ ಪಿ.ಬಿ ಡೆ’ಸ್ಸಾ ಅವರು ಇಂದು ನಿಧನರಾಗಿದ್ದು ಪಿಯುಸಿಎಲ್ ಕರ್ನಾಟಕ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯ ಸ್ಪರ್ಶಿ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಡೆ’ಸ್ಸಾ ಅವರ ನಿಧನ ತೀವ್ರ ದುಃಖ ತಂದಿದ್ದು (20 ಮೇ 1941-24 ಸೆಪ್ಟೆಂಬರ್ 2024)ಅವರ ಜೀವಿತ ಕಾಲವಧಿ ಆಗಿದೆ. ಶ್ರೀ ಡಿ’ಸಾ ಅವರು ಪಿಯುಸಿಎಲ್- ಕರ್ನಾಟಕದ ಅಧ್ಯಕ್ಷರಾಗಿದ್ದರು, ರಾಷ್ಟ್ರೀಯ ಪರಿಷತ್ತಿನ ಸದಸ್ಯರಾಗಿದ್ದರು ಮತ್ತು ಉಪಾಧ್ಯಕ್ಷರಾಗಿದ್ದರು.
ಶ್ರೀ ಡೆ’ಸ್ಸಾ ಅವರು ಮಾನವ ಹಕ್ಕುಗಳ ಅಪ್ರತಿಮ ಚಾಂಪಿಯನ್ ಆಗಿದ್ದರು ಮತ್ತು ಅವರು ನಿಖರ ಮತ್ತು ನಿರ್ದಿಷ್ಟವಾಗಿ ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾಗಿ ಅವರದೇ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೂಡಾ ಕಷ್ಟಸಾಧ್ಯ ಎಂಬ ಸಂಧರ್ಬದಲ್ಲಿ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡು ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಸತ್ಯಶೋಧನಾ ಕಾರ್ಯಗಳನ್ನು ಪ್ರಾರಂಭಿಸುವಲ್ಲಿ ಮುಂಚೂಣಿಯಲ್ಲಿದ್ದ ಅವರು ಅನೈತಿಕ ಪೊಲೀಸ್ ಗಿರಿಯನ್ನು ಬಲವಾಗಿ ವಿರೋಧಿಸಿದ್ದಾರೆ.
ಆದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಅನೈತಿಕ ಪೋಲೀಸ್ ಗಿರಿ, ಕಸ್ಟಡಿ ಸಾವುಗಳು, ಕೋಮು ಹಿಂಸಾಚಾರ ಮತ್ತು ದ್ವೇಷದ ಭಾಷಣಗಳನ್ನು ಪ್ರಬಲವಾಗಿ ವಿರೋಧಿಸಿದ್ದು ಅದರ ತಡೆಗಾಗಿ ಕಾರ್ಯ ನಿರ್ವಹಿಸಿದ್ದಾರೆ
ಶ್ರೀ ಡೆ ‘ಸ್ಸಾ ಅವರು ‘ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣಾ ಮನೋಭಾವ’ವನ್ನು ಬೆಳೆಸುವ ಮೂಲಭೂತ ಕರ್ತವ್ಯದ ಬದ್ಧತೆಯನ್ನು ಸಾಕಾರಗೊಳಿಸಿದ್ದಾರೆ ಅವರ ನಿಧನದ ನಂತರ ಯಾವುದೇ ‘ಧಾರ್ಮಿಕ ಆಚರಣೆಗಳು, ಹೂವುಗಳು ಮತ್ತು ಹೂಗುಚ್ಛಗಳಿಲ್ಲ’ ಆದರೆ ಅವರ ಆಶಯದಲ್ಲಿ ಅವರ ಪಾರ್ಥಿವ ಶರೀರವನ್ನು ಸಾಮಾಜಿಕ ಶೈಕ್ಷಣಿಕ ಉದ್ದೇಶಕ್ಕೆ ದೇಣಿಗೆ’ ನೀಡುವುದನ್ನು ಕಾಣಬಹುದಾಗಿದೆ. ಅವರ ದೃಷ್ಟಿಕೋನದ ಭಾಗವಾಗಿದ್ದ ‘ವೈಜ್ಞಾನಿಕ ಮನೋಭಾವ’ಕ್ಕೆ ಅನುಗುಣವಾಗಿ, ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು.
ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ದುಃಖದಲ್ಲಿ ಒಂದಾಗಿ ಭಾಗಿಯಾಗಿದ್ದೇವೆ.
ಮಾನವ ಹಕ್ಕುಗಳ ಹೋರಾಟಗಾರನಾಗಿ, ಡೇ’ಸಾಅವರ ಅನುಪಸ್ಥಿತಿಯನ್ನು ಆಳವಾಗಿ ಅನುಭವಿಸಲಾಗುತ್ತದೆ. ನಾವು ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಮಾನವ ಹಕ್ಕುಗಳ ಉದ್ದೇಶಕ್ಕಾಗಿ ನಮ್ಮನ್ನು ಪುನರ್ ಸಮರ್ಪಿಸಿಕೊಳ್ಳುವುದು ಮತ್ತು ಮಾನವ ಹಕ್ಕುಗಳಿಗೆ ಶ್ರೀ ಡಿ’ಸಾ ಅವರ ಜೀವಮಾನದ ಬದ್ಧತೆಯನ್ನು ಅನುಕರಿಸಲು ಪ್ರಯತ್ನಿಸುವುದು ಆಗಿದೆ ಎಂದು ಕರ್ನಾಟಕ ಪಿಯುಸಿಎಲ್ ಅಧ್ಯಕ್ಷ ಅರವಿಂದ್ ನರೈನ್ ಮತ್ತು ಪ್ರಧಾನ ಕಾರ್ಯದರ್ಶಿ ಸುಜಾಯತುಲ್ಲಾ ತಮ್ಮ ಜಂಟಿ ಪ್ರಕ್ರಣೆಯಲ್ಲಿ ಹೇಳಿಕೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.