(www.vknews. in) ಶಿ.ಜು.ಪಾಶರಿಗೆ `ಜನ್ನ ಕಾವ್ಯ ಪ್ರಶಸ್ತಿ ಶಿವಮೊಗ್ಗ; ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ `ಜನ್ನ ಕಾವ್ಯ ಪ್ರಶಸ್ತಿಗಳನ್ನು ಘೋಷಿಸಿದ್ದು, ಶಿವಮೊಗ್ಗದ ಪತ್ರಕರ್ತ ಹಾಗೂ ಸಾಹಿತಿ ಶಿ.ಜು.ಪಾಶ, ಖಾಕಿ ಕವಿ ಮಂಜುನಾಥ್ ಸೇರಿದಂತೆ ಐವರಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಶಿ.ಜು.ಪಾಶ, ಖಾಕಿ ಕವಿ ಮಂಜುನಾಥ್ರವರ ಜೊತೆ ಕೊ.ಮ.ಮುತ್ತಣ್ಣ, ಎಚ್.ಸುಂದರಮ್ಮ, ಮನ್ಸೂರ್ ಮುಲ್ಕಿರವರಿಗೂ `ಜನ್ನ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಜಯ ಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಸೆ.೨೮ರ ಶನಿವಾರ ಬೆಳಿಗ್ಗೆ ೧೦ಕ್ಕೆ ನಡೆಯಲಿದೆ. ವರದಿ; ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.