(www.vknews. in)ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ಮನ್ ಶರ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಘಟಕದ ಉದ್ಘಾಟನೆ. ಸಮನ್ವಯಾಧಿಕಾರಿಯಾಗಿ ಉಪಪ್ರಾಂಶುಪಾಲರಾದ ತೌಫೀಕ್ ಪುತ್ತೂರು ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಹೀದ್ ಗೇರುಕಟ್ಟೆ ನೇಮಕ
ಬೆಳ್ತಂಗಡಿ :- ಭಾರತದಾದ್ಯಂತ ಸೆಪ್ಟೆಂಬರ್ 24 ರಂದು ಆಚರಿಸಲಾಗುವ ಎನ್.ಎಸ್.ಎಸ್ ದಿನದ ಅಂಗವಾಗಿ ಮನ್ ಶರ್ ಪದವಿಪೂರ್ವ ಕಾಲೇಜು ಗೇರುಕಟ್ಟೆ ಬೆಳ್ತಂಗಡಿ ಇಲ್ಲಿಯೂ ಯಶಸ್ವಿಯಾಗಿ ಎನ್.ಎಸ್.ಎಸ್ ದಿನಾಚರಣೆಯನ್ನು ಮಾಡುವುದರೊಂದಿಗೆ ಅದರ ಘಟಕವನ್ನೂ ಉದ್ಘಾಟನೆಗೊಳಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಜನರಲ್ ಮ್ಯಾನೇಜರ್ ಹಾಗೂ ಪ್ಯಾರಾಮೆಡಿಕಲ್ ವಿಭಾಗದ ಪ್ರಾಂಶುಪಾಲರಾಗಿರುವ ಹೈದರ್ ಮರ್ದಾಳ ಇವರು ಎನ್.ಎಸ್.ಎಸ್ ಬಗೆಗೆ ಸವಿವರವನ್ನು ನೀಡಿ ರಾಷ್ಟ್ರದ ಏಳಿಗೆಗೆ ವಿದ್ಯಾರ್ಥಿಗಳ ಪಾತ್ರ ಅತಿಮುಖ್ಯ. ವಿದ್ಯಾರ್ಥಿಗಳಿಗೆ ಸಮುದಾಯ ಚಿಂತನೆ, ಒಗ್ಗಟ್ಟು, ವೈಯಕ್ತಿಕ ಬೆಳವಣಿಗೆಗೆ ಹಾಗೂ ನಾಯಕತ್ವ ಗುಣಗಳ ಅತೀ ಮುಖ್ಯ ರಂಗದಲ್ಲಿ ಸಹಾಯಕವಾಗುವ ಘಟಕವೆಂದರೆ ಈ ಎನ್.ಎಸ್.ಎಸ್ ಎಂಬ ನುಡಿಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳಲು ಸಹಾಯಕವಾಗುವ ಘಟಕ ಇದಾಗಿದೆ ಎಂಬ ದೂರದೃಷ್ಟಿಯ ಮಾತುಗಳನ್ನಾಡಿದರು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾದ ರಶೀದ್ ಕುಪ್ಪೆಟ್ಟಿ ಇವರು ಎನ್.ಎಸ್.ಎಸ್ ಬಗೆಗೆ ಮಾತುಗಳನ್ನಾಡುತ್ತಾ ತಮ್ಮ ಕಾಲೇಜು ಜೀವನದಲ್ಲಿ ತೊಡಗಿಸಿಕೊಂಡ ಅನುಭವಗಳನ್ನು ಮೆಲುಕು ಹಾಕಿದರು. ಹಾಗೆಯೇ ಪ್ರಾಸ್ತಾವಿಕ ಮಾತುಗಳನ್ನಾಡಿದ ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಕೌಸರ್ ಪಲ್ಲಾದೆ ಇವರು ಎನ್.ಎಸ್. ಎಸ್ ಇದರ ಚರಿತ್ರೆಗಳನ್ನು ವಿದ್ಯಾರ್ಥಿಗಳಿಗೆ ಮನಮಿಡಿಯುವಂತೆ ತಿಳಿಸಿ, ಪಿಯುಸಿ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ, ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಆಯ್ಕೆಪಟ್ಟಿಯಂತೆ ಎನ್.ಎಸ್.ಎಸ್ ಪಿಯುಸಿ ವಿಭಾಗದ ಯೋಜನಾಧಿಕಾರಿಯಾಗಿ ಉಪಪ್ರಾಂಶುಪಾಲರಾದ ಮಹಮ್ಮದ್ ತೌಫೀಕ್ ಪುತ್ತೂರು ಆಯ್ಕೆಯಾದರೆ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಬ್ದುಲ್ ಶಹೀದ್ ಹಾಗೂ ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ರುಶೈದ ಆಯ್ಕೆಯಾದರು.ಆಯ್ಕೆಯಾದ ಯೋಜನಾಧಿಕಾರಿ ಹಾಗೂ ವಿದ್ಯಾರ್ಥಿ ಘಟಕದ ನಾಯಕರುಗಳಿಗೆ ಮುಖ್ಯ ಅತಿಥಿಗಳಿಂದ ಎನ್.ಎಸ್.ಎಸ್ ಪದಕ ಹಸ್ತಾಂತರ ಮಾಡಲಾಯಿತು.
ಈ ಸುಸಂದರ್ಭದಲ್ಲಿ ಪ್ಯಾರಾಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಗೌತಮಿ ಶರಣ್, ಪಿಯುಸಿ ಉಪನ್ಯಾಸಕರಾದ ಪ್ರತಾಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಪ್ರಾರ್ಥನಾ ಗೀತೆಯನ್ನು ಪ್ರಥಮ ಪಿಯುಸಿ ಸಮೀದ ತಂಡ ಹಾಡಿದರೆ, ಯೋಜನಾಧಿಕಾರಿಯಾಗಿ ಆಯ್ಕೆಗೊಂಡ ಮಹಮ್ಮದ್ ತೌಫೀಕ್ ಇವರು ಎನ್.ಎಸ್.ಎಸ್ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಭೋದಿಸಿದರು. ಈ ಕಾರ್ಯಕ್ರಮದುದ್ದಕ್ಕೂ ಪಿಯುಸಿ ಉಪನ್ಯಾಸಕಿಯಾದ ಸುಧಾ.ಬಿ ಇವರು ನಿರೂಪಕರಾಗಿ ಕಾರ್ಯ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.