(www.vknews. in) ಮಂಗಳೂರು : ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ 9 ನೇ ಬಾರಿಗೆ ಹನೀಫ್ ಹಾಜಿ ಗೋಳ್ತಮಜಲು ಆಯ್ಕೆ.
ಮಂಗಳೂರು ; ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಅಲ್ ಇಹ್ಸಾನ್ ಸಭಾಂಗಣದಲ್ಲಿ ನಡೆಯಿತು.
ವೀಕ್ಷಕರಾಗಿ ಭಾಗವಹಿಸಿದ್ದ ಟ್ರಸ್ಟ್ ನ ನಿಕಟಪೂರ್ವ ಚೇರ್ಮ್ಯಾನ್ ಮಾನ್ಸೂರ್ ಅಹಮದ್ ಮತ್ತು ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಅವರು ಸಂಸ್ಥೆಯ ಬಲವರ್ಧನೆಗೆ ಸದಸ್ಯರು ಯಾವ ರೀತಿ ತಮ್ಮ ಕೊಡುಗೆಗಳನ್ನು ನೀಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಗತ ಸಾಲಿನ ಮತ್ತು ಗ್ಲೋಬಲ್ ಮೀಟ್ ನಂತರದ ಚಟುವಟಿಕೆಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾದ ಆಸೀಫ್ ಇಕ್ಬಾಲ್ ಸ್ವಾಗತಿಸಿ, ಮಕ್ಬೂಲ್ ಅಹಮದ್ ಕಿರಾತ್ ಪಠಿಸಿದರು. ಶೇಖ್ ಇಸಾಕ್ ಕಡಬ ವಂದಿಸಿದರು.
ನೂತನ ಅಧ್ಯಕ್ಷರಾಗಿ 9 ನೇ ಬಾರಿಗೆ ಹನೀಫ್ ಹಾಜಿ ಪುನರಾಯ್ಕೆ
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಉಪಾಧ್ಯಕ್ಷರುಗಳಾಗಿ ಮಕ್ಬೂಲ್ ಅಹಮದ್ ಕುದ್ರೋಳಿ, ಆಸೀಫ್ ಇಕ್ಬಾಲ್ ಫರಂಗಿಪೇಟೆ, ಇದ್ದಿನ್ ಕುಂಞ , ಕಾರ್ಯದರ್ಶಿ ಯಾಗಿ ಶೇಕ್ ಇಸಾಕ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಕಲಾಯಿ, ಮಾಧ್ಯಮ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಆಯ್ಕೆಯಾದರು.
ಆಡಳಿತಾಧಿಕಾರಿಯಾಗಿ ಆಬಿದ್ ಅಸ್ಗರ್ ಕಾರ್ಯನಿರ್ವಹಿಸುವರು.
ಅಬ್ದುಲ್ ರಝಾಕ್, ಕೆ.ಎಸ್. ಅಬೂಬಕ್ಕರ್, ಪಿ.ಮೊಹಮ್ಮದ್, ಅಬ್ದುಲ್ ಹಮೀದ್ ಜಿ, ಇಬ್ರಾಹಿಂ ಪರ್ಲಿಯಾ, ಜುನೈದ್ ಬಂಟ್ವಾಳ ಶರೀಪ್ ಮುಕ್ರಂಪಾಡಿ, ಖಲೀಲ್ ಅಹಮದ್, ಅಬ್ದುಲ್ ರಹಿಮಾನ್ ಯೂನಿಕ್, ಸಾದಿಕ್ ಹಸನ್, , ಇಲ್ಯಾಸ್ ಕಕ್ಕಿಂಜೆ, ಹಕೀಂ ಸುನ್ನತ್ ಕೆರೆ, ಅಬೂಬಕ್ಕರ್, ಸಿದ್ದೀಕ್ ಮಂಗಳೂರು, ಅಬ್ದುಲ್ ರಹಿಮಾನ್ ಬಕ್ಷ್, ಬಿ.ಎಂ. ತುಂಬೆ, ಅಬ್ದುಲ್ ರಝಾಕ್ ಕುಪ್ಪೆಪದವು, ಅಬ್ದುಲ್ಲಾ ಮಂಗಳೂರು, ಆನಿಯಾ ಹಂಝ ಬಸ್ತಿ ಕೋಡಿ, ಬಶೀರ್ ವಗ್ಗ, ರಶೀದ್ ಕಕ್ಕಿಂಜೆ, ಉಮ್ಮರ್ ಕರಾವಳಿ, ಜಬ್ಬಾರ್ ಬೆಂಗರೆ, ಝಿಯಾವುದ್ದೀನ್, ಇಸ್ಮಾಯಿಲ್ ನೆಲ್ಯಾಡಿ ಮೊದಲಾದವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.