(www.vknews. in) ಅಲ್ಲಿಪಾದೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ
ಬಂಟ್ವಾಳ : ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ನೇತೃತ್ವದಲ್ಲಿ ಸ್ತ್ರೀ ಆಯೋಗ, ಅರೋಗ್ಯ, ಯುವ ಆಯೋಗ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ಅಲ್ಲಿಪಾದೆ ಸೌಹಾರ್ದ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯುತು.
ಶಿಬಿರವನ್ನು ವಂ. ಫಾ. ರೋಬರ್ಟ್ ಡಿ ಸೋಜ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ. ಜ್ಞಾನೇಶ್ವರಿ ಜಯರಾಮ್, ಡಾ. ಸೋನಿಯಾ ಕೆ.ಎಲ್ ಸಿಕ್ವೆರಾ, ಪ್ರಮುಖರಾದ ರಂಜನ್ ಎ.ವಿ, ಕ್ಲುನಿ ಕಾನ್ವೆಂಟ್ ನ ಸುಪೀರ್ಯರ್ ಸಿಸ್ಟೆರ್ ನಸಿಸ, ನವೀನ್ ಮೊರಸ್, ಕಿರಣ್ ನೊರೊನ್ಹಾ, ಜೋನ್ ವಾಲ್ಡರ್ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲಿಪಾದೆ ಸ್ತ್ರೀ ಸಂಘದ ಅಧ್ಯಕ್ಷೆ ಲವೀನಾ ಮೋರಸ್ ಸ್ವಾಗತಿಸಿ, ರೆನ್ನಿ ಫೆರ್ನಾಂಡಿಸ್ ವಂದಿಸಿದರು. ಕುಮಾರಿ ವೆನೆಸ್ಸಾ ಮೊರಸ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.