(www.vknews. in) ಸ.29 ರಂದು ಕಿನ್ನಿಗೋಳಿ – ಪದ್ಮನ್ನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯವರಿಗೆ ಐಕ್ಯ ವೇದಿಕೆ ಕೊಡಾಜೆ ವತಿಯಿಂದ ಅಭಿನಂದನೆ
ಕಿನ್ನಿಗೋಳಿ : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆಯ ಐಕ್ಯ ವೇದಿಕೆ ಕೊಡಾಜೆ ಇದರ ವತಿಯಿಂದ ಐಕ್ಯ-ಭಾವೈಕ್ಯತೆಯನ್ನು ಮೈಗೂಡಿಸಿಕೊಂಡು ಸರ್ವ ಧರ್ಮೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುತ್ತಿರುವ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ, ಪದ್ಮನ್ನೂರು – ಕಿನ್ನಿಗೋಳಿ ಇದರ ಅದ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವು ಭಾನುವಾರ (ಸ.29) ಸಂಜೆ ಸಂಜೆ 5.30 ಕ್ಕೆ ಪದ್ಮನ್ನೂರಿನ ಸಾರ್ವಜನಿಕ ಯಕ್ಷಗಾನ ಬಯಲಾಟ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ದೇವಸ್ಥಾನದ ಅರ್ಚಕರು, ಮಸೀದಿ ಖತೀಬರು ಹಾಗೂ ಚರ್ಚ್ ನ ಧರ್ಮಗುರುಗಳಿಗೆ ಗೌರವಾರ್ಪಣೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷರಿಗೆ ಸನ್ಮಾನ, ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ ಎಂದು ಐಕ್ಯ ವೇದಿಕೆ ಕೊಡಾಜೆಯ ಪ್ರಕಟಣೆ ತಿಳಿಸಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.