(www.vknews. in) ಬುರೂಜ್ ಶಾಲೆ: ಶಿಕ್ಷಕ -ರಕ್ಷಕ ಸಂಘದ ಸಭೆ
ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ 2024-25 ನೇ ಸಾಲಿನ ಶಿಕ್ಷಕ -ರಕ್ಷಕ ಸಂಘದ ಸಭೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಉದ್ಘಾಟನೆ ಹಾಗೂ ಸ್ವಾಗತವನ್ನು ನೇರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ವಹಿಸಿದ್ದರು. ದಕ್ಷಿಣ ಕನ್ನಡದ ಶ್ರೇಷ್ಠ ಕಲಾವಿದ ಹಾಸ್ಯದ ಮೂಲಕ ಮನೆ ಮಾತಾಗಿರುವ ವಾಲ್ಟರ್ ಡಿ ಸೋಜಾ ನಂದಳಿಕೆ ಮಾತಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರ ಬೇಕಾಗಿದರೆ ನೀವು ನಿಮ್ಮ ಆಸಕ್ತಿಯಲ್ಲಿ ಮುಂದುವರಿಯಿರಿ ಎಂದು ಪೋಷಕರು ಮತ್ತು ಮಕ್ಕಳನ್ನು ಹುರಿದುಂಬಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಮೇಶ್ ಕೊಟ್ಯಾನ್ ತಮ್ಮ ಅದ್ಬುತ ಕಂಠದಲ್ಲಿ ಸ್ವರ ಮಾಧುರ್ಯವನ್ನು ಚೆಲ್ಲಿ ಎಲ್ಲರನ್ನೂ ಸಂತಸಗೊಳಿಸಿದರು. ಈ ವೇದಿಕೆಯಲ್ಲಿ ಕರಾಟೆ ಮಾಸ್ಟರ್ ಸರ್ಫಾಝ್ , ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಪ್ರತಿಭಾ ಕಾರಂಜಿಯಲ್ಲಿ ವಿಜೇತ ರಾದವರನ್ನು ಸನ್ಮಾನಿಸಲಾಯಿತು. ಅನೇಕ ಪೋಷಕರು,ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೆರೆದಿದ್ದ ಎಲ್ಲರನ್ನು ರಝೀಯಾ ಎಸ್.ಪಿ ವಂದಿಸಿದರು.ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.