(www.vknews. in) ಮುಸ್ಲಿಂ ಜಸ್ಟಿಸ್ ಫೋರಂ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಸಾಮಣಿಗೆ ಆಯ್ಕೆ.
ಮಂಗಳೂರು : ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ವಾರ್ಷಿಕ ಸಬೆಯು ಫಳ್ನೀರ್ ನ ಲೂಲೂ ಸೆಂಟರ್ ನಲ್ಲಿ ಮಾಜಿ ಅಧ್ಯಕ್ಷರಾದ ಇರ್ಷಾದ್ ಯು ಟಿ ಇವರ ಸಭಾಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ ಗುಪ್ತ ಮತದಾನದ ಮೂಲಕ ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಹಾಗು ಕಾರ್ಯ ಕಾರಿಣಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇದರ ಮುಂದಿನ ಎರಡು ವರ್ಷದ ಅವಧಿಗೆ (2024 -2026) ಅಧ್ಯಕ್ಷರಾಗಿ ಇಕ್ಬಾಲ್ ಸಾಮಣಿಗೆ ಚುಣಾಯಿತರಾದರು. ಅದೇ ರೀತಿ ಉಪಾಧ್ಯಕ್ಷರಾಗಿ ಮುಸ್ತಫಾ ಹರೇಕಳ ಮತ್ತು ಇದ್ದಿ ಕುಂಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಹಾಬ್ ಕುದ್ರೋಳಿ ಅವರು ಪುನರಾಯ್ಕೆ ಯಾದರು
ಕಾರ್ಯದರ್ಶಿಯಾಗಿ ನವಾಝ್ ಉಳ್ಳಾಲ್, ಕೋಶಧಿಕಾರಿಯಾಗಿ ಸಲಾಂ ಉಚ್ಚಿಲ್ ರವರು ಮತ್ತು 9 ಕಾರ್ಯಕಾರಿ ಸಮಿತಿಯ ಸದಸ್ಯರು ಆಯ್ಕೆಯಾದರು.
ಸ್ಥಾಪಕಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹಾಗೂ ವಕ್ತಾರ ಹನೀಫ್ ಖಾನ್ ಕೊಡಾಜೆ ಸಭೆಯಲ್ಲಿ ಹಾಗು ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.