ವಿಟ್ಲ(www.Vknews.in): ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿ ಮಾಡಿಕೊಂಡು ಬಿಜೆಪಿ ಕೇಂದ್ರ ಸರಕಾರ ರೂಪಿಸಿದ ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಜನಾಂದೋಲನ ರೂಪಿಸುವಲ್ಲಿ ಯಶಸ್ವಿಯಾದ ಹೋರಾಟಗಾರ್ತಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ , ಪ್ರಚಂಡ ವಾಗ್ಮಿ ಶ್ರೀಮತಿ ಭವ್ಯ ನರಸಿಂಹಮೂರ್ತಿಯವರು ಬುಧವಾರದಂದು ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿಗೆ ಆಗಮಿಸಿದರು,
ಅವರ ಅಪ್ಪಟ ಅಭಿಮಾನಿ ಸಮದ್ ಅಬುಧಾಬಿ ಇವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು, ಇವರನ್ನು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿ, ಅನಿವಾಸಿ ಉದ್ಯಮಿ ಇಬ್ರಾಹಿಂ ಅರಫಾ, ಹಾಗೂ ನಾಡಿನ ಹಲವು ಸಂಘ ಸಂಸ್ಥೆಗಳ ನೇತಾರರಾದ ನಾಸಿರ್ ಕೊಡಂಗಾಯಿ, ಮಜೀದ್ ಟಿ ಎಮ್, ಹಾರಿಸ್ ಕೊಡಂಗಾಯಿ, ಇವರು ಹೂ ಗುಚ್ಛ ನೀಡಿ ಸ್ವಾಗತಿಸಿದರು, ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡ ಧೀರೆಯನ್ನು ವಿಟ್ಲ ಪಡ್ನೂರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಝರುದ್ದೀನ್ ಕೊಡಂಗಾಯಿ ಹಾಗೂ ಸಮಾರಂಭದ ತಾರೆ ಸಮದ್ ಅಬುಧಾಬಿ ಇವರು ಸ್ಮರಣಿಕೆ ನೀಡಿ ಅಭಿನಂದಿಸಿದರು, ಕೊನೆಯಲ್ಲಿ ಸತ್ತಾರ್ ಟಿಪ್ಪುನಗರ ಶುಭಹಾರೈಸಿ ವಂದಿಸಿದರು.
ವರದಿ:ಶರೀಫ್ ಮೇಲಂಗಡಿ,
ಜೆದ್ದಾ(www..vknews.in): ಎರಡನೇ ಹಂತದ ಕೊವಿಡ್ ಹರಡುವಿಕೆಯನ್ನು ತಡೆಗಟ್ಟುವ ಭಾಗವಾಗಿ ಮಕ್ಕಾದಲ್ಲಿರುವ ಪವಿತ್ರ ಝಂ ಝಂ ನೀರಿನ ಸರಬರಾಜು ಕೇಂದ್ರವನ್ನು ಮುಂದಿವ ಆದೇಶದ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಷನಲ್ ವಾಟರ್ ಕಂಪೆನಿ ಹೇಳಿದೆ.
ಆದಾಗ್ಯೂ ಸೌದಿ ಅರೇಬಿಯಾದ್ಯಂತ ಲುಲು ಹೈಪರ್ ಮಾರ್ಕೆಟ್, ಪಾಂಡ ಮಾರ್ಕೆಟ್ ಹಾಗೂ ಒತೈಮ್ ಮಾರ್ಕೆಟ್ ಗಳಲ್ಲಿ ಸಾರ್ವಜನಿಕರಿಗೆ ಪವಿತ್ರ ಜಲ ಝಂ ಝಂ ಲಭ್ಯವಿರುವುದಾಗಿ ಎನ್ ಡಬ್ಲೂಸಿ ಸ್ಫಷ್ಟಪಡಿಸಿದೆ.
ಬೋಳಿಯಾರು(www.vknews.in): ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿನ ರಕ್ತದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘಟಿತ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿತವಾದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಇದರ ಬೋಳಿಯಾರು ವಲಯ ಸಮಿತಿ ಅಸ್ಥಿತ್ವಕ್ಕೆ ತರಲಾಗಿದ್ದು ಇದರ ನೂತನ ಅಧ್ಯಕ್ಷರಾಗಿ ಸಾಮಜಿಕ ಸೇವಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅಬ್ದುಲ್ ಅಝೀಝ್ ಬೋಳಿಯಾರು ಆಯ್ಕೆ ಆಗಿದ್ದಾರೆ. ಗೌರವಧ್ಯಕ್ಷರಾಗಿ ರಹಿಮಾನ್ ಮಠ ಉಪಾಧ್ಯಕ್ಷರಾಗಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಆಶ್ರಫ್ ಮೋನು ಬೋಳಿಯಾರು ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಕುಕ್ಕೋಟು, ಜೊತೆ ಕಾರ್ಯದರ್ಶಿಯಾಗಿ ನಿಝಾಮ್ ಎನ್.ಜಿ ಹಾಗು ಇರ್ಫಾನ್ ಬೋಳಿಯಾರು ರಫೀಕ್ ಕುರ್ನಾಡು, ಕೋಶಾಧಿಕಾರಿಯಾಗಿ ಸವಾದ್ ರಂತಡ್ಕ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಮ್ತಿಯಾಝ್ ರಂತಡ್ಕ, ಇಕ್ಬಾಲ್ ಬೋಳಿಯಾರು, ಇಮ್ರಾನ್ ರಂತಡ್ಕ, ಸಿರಾಜ್ ಪಲ್ಲ ಆಯ್ಕೆಯಾಗಿದ್ದಾರೆ.
ಧರ್ಮಸ್ಥಳ(www.vknews.in):ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ಕಡೆಗೆ ಎಂದು ಹೂವುಗಳೆಲ್ಲ ಸೂರ್ಯನ ಕಡೆಗೆ ಮುಖಮಾಡಿ ನಕ್ಕರೆ ಹಕ್ಕಿಗಳೆಲ್ಲ ಚಂದ್ರನೆಡೆಗೆ ನೆಗೆದು ಬರುತ್ತಿದ್ದವು. ಈ ದೃಶ್ಯ ಕಂಡು ಬಂದಿದ್ದು ದಿನಾಂಕ 22-೦2-2021 ರಂದು ನಡೆದ*ಹಕ್ಕಿಗಳಿಗಾಗಿ ಆಹಾರದ ಸಂಚಿ ,ತೃಷೆ ಇಂಗಿಸಲು ಜಲಬಿಂದು-ಉದ್ಘಾಟನಾ ಸಮಾರಂಭದಲ್ಲಿ. ಶ್ರೀ.ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯಲ್ಲಿ. ಬಿಳಿಯುಡುಗೆ ಉಟ್ಟು ಬಣ್ಣ ಬಣ್ಣದ ಗರಿಗಳ ಹೊತ್ತ ಹಕ್ಕಿಗಳಾದ , ಸೂರ್ಯಕಾಂತಿ ಹೂಗಳಾದ, ಸೂರ್ಯ ಚಂದ್ರ,ಗಡಿಯಾರಗಳಾದ ಮಕ್ಕಳು ಹಕ್ಕಿಯನ್ನು ಉಳಿಸಿ ಪರಿಸರವನ್ನು ಉಳಿಸುವ ಜಾಗೃತಿಯನ್ನು ಬಿಂಬಿಸುವ ನಾಟಕದೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ವಿನೂತನ ವಿಧಾನದ ಮೂಲಕ ಹಕ್ಕಿಗಳಿಗೆ ಆಹಾರ ಒದಗಿಸುವ ಅನ್ನದ ಸಂಚಿ ಹಾಗೂ ನೀರು ಪೂರೈಸುವ ಸಲುವಾಗಿ ಇರುವ ಜಲಬಿಂದುವಿನ ಉದ್ಘಾಟನಾ ಸಮಾರಂಭ ಜರುಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಖ್ಯಾತ ವಕೀಲರು ಹಾಗೂ ರೋಟರಿ ಕ್ಲಬ್ ಇದರ ಪ್ರಸ್ತುತ ಅಧ್ಯಕ್ಷರೂ ಆಗಿರುವ ಶ್ರೀಯುತ ಧನಂಜಯ ರಾವ್ ಇವರು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ನಾಡಿನಲ್ಲಿ ಎಲ್ಲೆಡೆ ಇದು ಜರುಗಬೇಕು ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ನಾಲ್ಕುಗೋಡೆಯ ಮಧ್ಯ ಈ ಕಾರ್ಯಕ್ರಮ ನಡೆಸದೆ ಪ್ರಕೃತಿಯ ಮಡಿಲಲ್ಲಿ ಆಯೋಜಿಸಿದ್ದಕ್ಕೆ ಸಂತಸ ಪಟ್ಟರು. ಮಾತ್ರವಲ್ಲದೆ ಪ್ರತೀದಿನ ನಿಮ್ಮ ಮನೆಗಳಿಗೆ ಬರುವ ಹಕ್ಕಿಗಳ ಛಾಯಾಚಿತ್ರ ತೆಗೆದು ಸಂಗ್ರಹಿಸಿ ಅದರ ಹೆಸರನ್ನು ಹೆತ್ತವರಲ್ಲಿ ಕೇಳಬೇಕು.ಯಾರು ಹೆಚ್ಚು ಸಂಗ್ರಹಿಸುತ್ತಾರೋ ಅವರಿಗೆ ಇಂನ್ಟರಾಕ್ಟ್ ಕ್ಲಬ್ ಮುಖಾಂತರ ಬಹುಮಾನ ನೀಡಲಾಗುವುದು ಎಂದು ಸ್ಥಳದಲ್ಲಿಯೇ ಅದಕ್ಕೆ ತಗಲುವ ವೆಚ್ಚವನ್ನು ನೀಡಿದರು.ಹಕ್ಕಿಗಳ ನಾಶಕ್ಕೆ ಆಗುವ ನಾಶ ಹಾಗು ಅದನ್ನು ಸಂರಕ್ಷಿಸಲು ನಾವು ಮಾಡಬೇಕಾದ ಕ್ರಮಗಳ ಕುರಿತು ಮಾಹಿತಿನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಈ ಕಾರ್ಯಕ್ರಮದ ರೂಪುರೇಷೆಯ ಕುರಿತು ಸಹಕರಿಸಿದ ವ್ಯಕ್ತಿಗಳ ಕುರಿತು,ಮುಂದಿನ ಯೋಜನೆ ಯೋಚನೆ ಕನಸುಗಳ ಕುರಿತು ವಿಚಾರ ಹಂಚಿಕೊಂಡರು.ನಂತರ ಮಾತನಾಡಿದ ಧರ್ಮಸ್ಥಳದ ಡಿಎಂಸಿಯ ಶ್ರೀಯುತ ಯಶೋಧರ ಅವರು ಪ್ರಥಮತವಾಗಿ ನಮ್ಮಲ್ಲಿ ಬಂದು ಕೆಲವು ತಂತಿ ಮರದ ತುಂಡು ಇತ್ಯಾದಿ ಪರಿಕರಗಳನ್ನು ಈ ಶಾಲಾ ಮುಖ್ಯೋಪಾಧ್ಯಾಯಿನಿ ಕೇಳಿದಾಗ ಅಚ್ಚರಿಯಾಗಿತ್ತು ಇದೇಕಿರಬಹುದು ಎಂದು. ಆದರೆ ಇಂದು ಅರಿವಾಯಿತು ಉತ್ತಮ ಕೆಲಸಗಳಿಗೆ ಉಪಯೋಗವಾಗಿದೆ ಎಂದು.ಇನ್ನಷ್ಟು ಉತ್ತಮ ಕೆಲಸಗಳು ನಡೆಯುವಂತಾಗಲಿ ಎಂದು ನುಡಿದರು. ಈ ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರಿ.ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಶೆಟ್ಟಿಯವರು ಮಾತನಾಡುತ್ತಾ ವಿಧ್ಯಾರ್ಥಿಗಳಿಗೆ ಪರಿಸರದೊಂದಿಗೆ ಬದುಕಲು ಕಲಿಯಿರಿ ಎಂದು ನುಡಿದು ಶುಭಹಾರೈಸಿದರು.ಅಚ್ಚುಕಟ್ಟಾಗಿ ಪ್ರಕೃತಿಯ ಮಡಿಲಲ್ಲಿ ನಡೆದ ಕಾರ್ಯಕ್ರಮಕ್ಕೆ ಆಕಾಶವೇ ಚಪ್ಪರವಾಗಿತ್ತು ಭೂಮಿಯೇ ಸಾಕ್ಷಿಯಾದಂತಿತ್ತು.ಅತಿಥಿಗಳಿಗೆ ತೆಂಗಿನ ಗರಿಯಿಂದ ತಯಾರಿಸಿದ ಹಕ್ಕಿಯೇ ಸ್ವಾಗತಿಸಲು ಬಳಸಿದ ವಸ್ತುವಾಗಿತ್ತು ಹಾಗೂ ಶಾಲೆಯಲ್ಲಿ ತಯಾರಿಸಿದ ಉಪಯೋಗವಿಲ್ಲವೆಂದು ಬಿಸಾಡಲು ಹೊರಟ ಕ್ಯಾನ್ ಗಳನ್ನು ಚೌಕಾಕಾರಕ್ಕೆ ಕತ್ತರಿಸಿ ಅದಕ್ಕೆ ಅಂದದ ಬಣ್ಣಹಚ್ಚಿ ಅದರಲ್ಲಿ ಹಕ್ಕಿಗಳಿಗೆ ನೀರು ಹಾಗೂ ಆಹಾರ ನೀಡಲು ಸಾಧ್ಯವಾಗುವಂತಹ ಅನ್ನದ ಸಂಚಿ ಹಾಗೂ ಜಲ ನೀಡುವ ಜಲಬಿಂದುವನ್ನು ಉದ್ಘಾಟನೆ ಗೆ ಬಳಸಲಾಗಿತ್ತು ಹಾಗೂ ಅಂತಹುದೇ ಕ್ಯಾನ್ ಗಳನ್ನು ನೀಡಿ ಅತಿಥಿಗಳ ಮನೆಗಳಲ್ಲೂ ಹಕ್ಕಿಗಳಿಗೆ ಆಹಾರ ,ನೀರು ನೀಡಿ ಆ ಮೂಲಕ ಶಾಲೆಯ ನೆನಪು ಹಸಿರಾಗಿರಲಿ ಎಂದು ನೆನಪಿನ ಕಾಣಿಕೆಯಾಗಿ ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.ತೋಟದ ತುಂಬೆಲ್ಲಾ ಮರಕ್ಕೆ ಅಲ್ಲಲ್ಲಿ ಸುಂದರ ಬಣ್ಣ ಹೊಂದಿದ, ಒಂದರಲ್ಲಿ ಆಹಾರ ಹಾಗೂ ಮತ್ತೊಂದರಲ್ಲಿ ನೀರು ಹಾಕಿಟ್ಟ ಅಂದದ ತಕ್ಕಡಿಯಂತೆ ಕಾಣುವ ಕ್ಯಾನ್ ಗಳು ಹಕ್ಕಿಗಳ ಹಸಿವು ತಣಿಸಲು ಕಾದ ಜಾತಕ ಪಕ್ಷಿಯಂತೆ ಕಾಣುತ್ತಿದ್ದವು. ಬೇಸಗೆಯಲ್ಲಿ ಈ ಬಾರಿ ಹಕ್ಕಿಗಳು ಹಸಿವು ಬಾಯಾರಿಕೆಯಿಂದ ಕಂಗೆಡಬಾರದು ಎಂಬುದೇ ಇದರ ಗುರಿ.ಈ ಕಾರ್ಯಕ್ರಮದ ಮುಖಾಂತರ ಪ್ರಕೃತಿ ಹಾಗೂ ಅದರೊಂದಿಗಿನ ಒಡನಾಡಿಗಳನ್ನು ಉಳಿಸುವ ಇನ್ನಷ್ಟು ನೂತನ ವಿಧಾನಗಳನ್ನು ಆವಿಷ್ಕರಿಸುವ ಕನಸುಹೊತ್ತು ಕಾರ್ಯಕ್ರಮ ಕೊನೆಗೊಂಡಿತು. ಶಾಲೆಯ ಸಂವಹನ ಸಂಘ ಹಾಗೂ ಸಾಂಸ್ಕ್ರತಿಕ ಸಂಘದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಇದರ ಕಾರ್ಯದರ್ಶಿಯಾದ ಶೀಯುತ ಶ್ರೀಧರ್,ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಜೆದ್ದಾ(www.vknews.in):ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್-ರಾಜಿ ಅವರು ರೆಸ್ಟೋರೆಂಟ್ಗಳು, ಕೆಫೆಗಳು, ಹೈಪರ್ಮಾರ್ಕೆಟ್ಗಳು ಮತ್ತು ಮಾಲ್ಗಳಲ್ಲಿನ ವೃತ್ತಿಗಳನ್ನು ಸೌದಿ ಪ್ರಜೆಗಳಿಗೆ ಮೀಸಲು ಗೊಳಿಸುವ ನಿರ್ಧಾರವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಜನವರಿಯಲ್ಲಿ ಕಾರ್ಮಿಕ ಮಾರುಕಟ್ಟೆಗೆ ಪ್ರವೇಶಿಸಿದ ಸೌದಿ ಯುವಕ-ಯುವತಿಯರ ಸಂಖ್ಯೆ 28,000 ಮೀರಿದೆ ಎಂದ ಅವರು “ ನಾವು ಎಲ್ಲಾ ಕ್ಷೇತ್ರಗಳ ವೃತ್ತಿಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಮತ್ತು ದೇಶದ ಯುವಕ ಯುವತಿಯರಿಗೆ ಉದ್ಯೋಗವನ್ನು ಒದಗಿಸಲು ನಾವು ಎಲ್ಲಾ ಕಟುಬದ್ಧರಾಗಿದ್ದೇವೆ.ಕಾನೂನು ಮತ್ತು ಶೈಕ್ಷಣಿಕ ಕ್ಷೇತ್ರವನ್ನೂ ಸ್ಥಳೀಕರಿಸುವ ನಿರ್ಧಾರವನ್ನು ನಾವು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ”ಎಂದು ಅಲ್-ರಾಜಿ ಅವರು ಗುತ್ತಿಗೆದಾರರ ರಾಷ್ಟ್ರೀಯ ಸಮಿತಿ ಮತ್ತು ಕನ್ಸಲ್ಟಿಂಗ್ ವೃತ್ತಿಗಳ ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ.
ಭಾರತೀಯರೇ ಹೆಚ್ಚಾಗಿರುವ ರೆಸ್ಟೋರೆಂಟ್,ಕೆಫೆ,ಶಾಪಿಂಗ್ ಮಾಲ್ ಹಾಗೂ ಹೈಪರ್ ಮಾರ್ಕೆಟ್ ಕ್ಷೇತ್ರಗಳಲ್ಲಿನ ಸೌದೀಕರಣದಿಂದಾಗಿ ಲಕ್ಷಾಂತರ ಭಾರತೀಯರು ಸೇರಿದಂತೆ ಕೋಟ್ಯಾಂತರ ವಿದೇಶಿಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ.
ಜೆದ್ದಾ(www.Vknews.in): 2021ನೇ ಮಾರ್ಚ್ ನಿಂದ ಸೌದಿ ಅರೇಬಿಯಾದಲ್ಲಿ ಜಾರಿಗೆ ಬರಲಿರುವ ಹೊಸ ಕಾರ್ಮಿಕ ನೀತಿಯ ಕರುಡು ಸಿದ್ಧವಾಗಿದ್ದು, ಸರಕಾರದ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದೆ.
ಹೊಸ ಕಾರ್ಮಿಕ ನೀತಿಯು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ಭಾರತೀಯರು ಸೇರಿದಂತೆ ಕೋಟ್ಯಾಂತರ ವಿದೇಶಿಗಳಿಗೆ ವರದಾನವೆಂದೇ ಹೇಳಲಾಗುತ್ತಿದೆ. ಈ ಹೊಸ ನೀತಿಯಡಿಯಲ್ಲಿ ಉದ್ಯೋಗದಾತ ಹಾಗೂ ಕಾರ್ಮಿಕರ ನಡುವೆ ಲಿಖಿತ ಒಪ್ಪಂದ ಕಡ್ಡಾಯವಾಗಿರುತ್ತದೆ. ಲಿಖಿತ ಕರಾರಿಗೆ ತಪ್ಪಿದಲ್ಲಿ ಉದ್ಯೋಗದಾತನನ್ನು ತೊರೆಯುವ ಅವಕಾಶ ಕಾರ್ಮಿಕರಿಗಿದೆ. ಮಾತ್ರವಲ್ಲ ಪ್ರತೀ ವರ್ಷ ಕಾರ್ಮಿಕನ ಇಕಾಮ ನವೀಕರಿಸಿ ಕೊಡುವುದು, ಕಾರ್ಮಿಕನು ರಜೆಯಲ್ಲಿ ತಾಯ್ನಾಡಿಗೆ ತೆರಳುವಾಗ ಆತನ ಪ್ರಯಾಣದ ವೆಚ್ಚವನ್ನು ಉದ್ಯೋಗದಾತನೇ ಭರಿಸಬೇಕಾಗುತ್ತದೆ. ಅದಲ್ಲದೇ ಕೆಲಸದ ಕರಾರಿಗೆ ಅನುಗುಣವಾಗಿ ಸ್ಪೋನ್ಸರ್ ಹಾಗೂ ಕಾರ್ಮಿಕ ನಡೆದುಕೊಳ್ಳಬೇಕಾಗುತ್ತದೆ. ತಪ್ಪಿದಲ್ಲಿ ಇರ್ವರಿಗೂ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಹೂಡುವ ಸಮಾನ ಹಕ್ಕನ್ನು ಹೊಸ ಕಾರ್ಮಿಕ ನೀತಿಯಲ್ಲಿ ನೀಡಲಾಗಿದೆ.
ಜೆದ್ದಾ(www.Vknews.in): ತಮ್ಮ ರೆಸಿಡೆನ್ಸಿ ಪರವಾನಗಿ (ಇಕಾಮಾ) ಮಾನ್ಯತೆಯ ಅವಧಿ ಮುಗಿದ ವಲಸಿಗರಿಗೂ ತವಕ್ಕಲ್ನಾ ಅರ್ಜಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಆದಾಗ್ಯೂ, ಅಂತಿಮ ನಿರ್ಗಮನ ವೀಸಾ ಹೊಂದಿರುವ ವಲಸಿಗರು ತಮ್ಮನ್ನು ನೋಂದಾಯಿಸಲು ಸಾಧ್ಯವಿಲ್ಲ.ಎಂದು ಆ್ಯಪ್ ಮ್ಯಾನೇಜ್ಮೆಂಟ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಸಿಟಿಂಗ್ ವೀಸಾಗಳಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವವರು ಕೂಡ ಅರ್ಜಿಯಲ್ಲಿ ನೋಂದಾಯಿಸಲು ಅನುಮತಿಸಲಾಗಿದೆ. ಇದಕ್ಕಾಗಿ, ಭೇಟಿ ವೀಸಾ ಹೊಂದಿರುವವರು ಅವನ ಅಥವಾ ಅವಳ ಪಾಸ್ಪೋರ್ಟ್ ಸಂಖ್ಯೆ, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಮೊಬೈಲ್ ಫೋನ್ ಸಂಖ್ಯೆ ಮತ್ತು ಪಾಸ್ವರ್ಡ್ನಂತಹ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ಎರಡನೇ ಹಂತದ ಕೊವಿಡ್ ಸಾಂಕ್ರಾಮಿಕ ಭೀತಿಯ ನಂತರ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ನಾಗರೀಕರು ಹಾಗೂ ವಲಸಿಗರಿಗೆ ತವಕಲ್ನಾ ಆ್ಯಪ್ ಕಡ್ಡಾಯವಾಗಿದ್ದು, ಶಾಪಿಂಗ್ ಮಾಲ್, ರೆಸ್ಚೊರೆಂಟ್, ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಮುಂತಾದ ಕಡೆಗಳಲ್ಲಿ ಈ ಆ್ಯಪ್ ಇಲ್ಲದವರಿಗೆ ಪ್ರವೇಶಾನುಮತಿ ನಿರಾಕರಿಸಲಾಗುತ್ತಿದೆ.
ಬೋಳಿಯಾರು(www.Vknews.in):ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೋಳಿಯಾರು ಘಟಕದ ವತಿಯಿಂದ ಪಾಪ್ಯುಲರ್ ಫ್ರಂಟ್ ದಿನಾಚರಣೆಯ ಅಂಗವಾಗಿ ರಂತಡ್ಕ ಕಛೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಸಮಿತಿ ಸದಸ್ಯರಾದ ರಹಿಮಾನ್ ಮಠರವರು ಕಾರ್ಯಕ್ರಮವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೋಳಿಯಾರು ಘಟಕದ ಅಧ್ಯಕ್ಷರಾದ ಇಕ್ಬಾಲ್ ರಂತಡ್ಕರವರು ಧ್ವಜಾರೋಹಣ ಕಾರ್ಯಕ್ರಮ ನೆರೆವೆರಿಸಿದರು. ಈ ಸಂಧರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಂತಡ್ಕ ಘಟಕದ ಪ್ರಧಾನ ಕಾರ್ಯದರ್ಶಿ ಕಬೀರ್ ಹಾಗೂ ಕೊನಾಜೆ ಪೋಲಿಸ್ ಠಾಣಾಧಿಕಾರಿಗಳು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ಕೇಂದ್ರ ಸರಕಾರದ ರೈತವಿರೋಧಿ ಹೋರಾಟದಲ್ಲಿ ಹುತಾತ್ಮರಾದ ರೈತರನ್ನು ನೆನಸುತ್ತಾ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಮ್ರಾನ್ ರಂತಡ್ಕ ಸ್ವಾಗತಿಸಿದರು ಇರ್ಫಾನ್ ರಂತಡ್ಕ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಾಜನಿಕರಿಗೆ ಸಿಹಿತಿಂಡಿ ಹಂಚಲಾಯಿತು.
ಅಗರ್ತಲಾ(www.vknews.in): ಬಿಜೆಪಿ ಪಕ್ಷವನ್ನು ಭಾರತದಲ್ಲಿ ಸಂಘಟಿಸುವುದು ಮಾತ್ರವಲ್ಲದೆ ನೆರೆಯ ನೇಪಾಲ ಹಾಗೂ ಶ್ರೀಲಂಕಾದಲ್ಲಿಯೂ ವಿಸ್ತರಿಸುವ ಯೋಜನೆ ಅಮಿತ್ ಶಾರವರಿಗೆ ಇದೆ ಎಂಬ ಹೇಳಿಕೆ ನೀಡುವ ಮೂಲಕ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ಧಿಯಾಗುತ್ತಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಅಗರ್ತಲಾದಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆಯ ಬಳಿಕ ನೆರೆಯ ನೇಪಾಳ ಹಾಗೂ ಶ್ರೀಲಂಕಾದಲ್ಲೂ ಪಕ್ಷ ಸಂಘಟಿಸಿ ಬಿಜೆಪಿ ಸರ್ಕಾರವನ್ನು ರಚಿಸುವ ಇರಾದೆಯನ್ನು ಗೃಹ ಸಚಿವ ಅಮಿತ್ ಶಾ ಹೊಂದಿದ್ದಾರೆ’ ಎಂದು ಬಿಪ್ಲವ್ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
ದುಬೈ(www.vknews.in): ಪ್ರಪಂಚದಾದ್ಯಂತ ಇದುವರೆಗೂ 109 ಮಿಲಿಯನ್ (109,195,022) ಕರೋನವೈರಸ್ ಪ್ರಕರಣಗಳು ದಾಖಲಾಗಿದ್ದು, 24,07,171 ಮಂದಿ ಸಾವನ್ನಪ್ಪಿದ್ದಾರೆ ಎಂದು ವರ್ಲ್ಡ್ಡೋಮೀಟರ್ ಲೆಕ್ಕಾಚಾರದಲ್ಲಿ ತಿಳಿಸಲಾಗಿದೆ. ಒಟ್ಟು ಕೊವಿಡ್ ಸೋಂಕಿತರಲ್ಲಿ ಇದುವರೆಗೂ 8,12,31,258 ರೋಗಮುಕ್ತಿ ಹೊಂದಿದ್ದಾರೆ ಎಂದು ಅದು ವರದಿ ಮಾಡಿದೆ.
ಸುಮಾರು 27 ಮಿಲಿಯನ್ ಕೊವಿಡ್ ಪ್ರಕರಣಗಳು ಮತ್ತು 4,80,000 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದ ಅಮೇರಿಕಾವು ಕೊವಿಡ್ ಪ್ರಕರಣಗಳಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.