(www.vknews.in)ಮಂಗಳೂರು:-ಮಂಗಳೂರು ಇಲ್ಲಿನ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ 58 ನೇ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ರವಿವಾರ ಜಿಲ್ಲಾ ಕಚೇರಿ ಆವರಣದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ||ರಾಜೇಂದ್ರ.ಕೆ.ವಿ.( l.A.S.) ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ನಂತರ ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಗೃಹರಕ್ಷಕರಿಗೆ ಪ್ರತಿಜ್ಞೆ ವಿಧಿ ಭೋಧನೆ ಮಾಡಿದರು ನಂತರ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸೇರಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ಕೊರೋನ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಆಗಿ ಸೇವೆ ಅತ್ಯಂತ ಶ್ಲಾಘನೀಯ ಎಂದರು ಹಾಗೂ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಜಿಲ್ಲಾಡಳಿತ ಪರವಾಗಿ ಗೃಹರಕ್ಷಕರ ದಿನಾಚರಣೆ ಶುಭಾಶಯಗಳು ತಿಳಿಸಿದರು ಮುಖ್ಯ ಅಥಿತಿಯಾಗಿ ಆಗಮಿಸಿದ ಮಾಜಿ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಶಿವಪ್ರಸಾದ್ ರೈ ಶುಭ ಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣಾದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರುರವರು ವಾರ್ಷಿಕ ವರದಿ ಮಂಡಿಸಿದರು
ಸನ್ಮಾನ ಕಾರ್ಯಕ್ರಮ:- ಕಾರ್ಯಕ್ರಮದಲ್ಲಿ ಸುರತ್ಕಲ್ ಪ್ರಭಾರ ಘಟಕಾಧಿಕಾರಿ ರಮೇಶ್, ಬೆಳ್ತಂಗಡಿ ಪ್ರಭಾರ ಘಟಕಾಧಿಕಾರಿ ಜಯಾನಂದ,ಮೂಡಬಿದ್ರೆ ಘಟಕದ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್,ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ, ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ ಇವರನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಯ ಪರವಾಗಿ ಫಲ ಪುಷ್ಪ ಶಾಲು ಹೊದಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಕುಮಾರಿ ನಿಧಿ.ಜಿ. ಪ್ರಾರ್ಥನೆ ಮಾಡಿದರು ಜಿಲ್ಲಾ ಡೆಪ್ಯುಟಿ ಕಮಾಡೆಂಟ್ ರಮೇಶ್ ಸ್ವಾಗತಿಸಿದರು ಬೆಳ್ತಂಗಡಿ ಪ್ರಭಾರ ಘಟಕಾಧಿಕಾರಿ ಜಯನಂದ ವಂದಿಸಿದರು
(www.vknews.in)
ಡಿಸೆಂಬರ್ 6 ನ್ನು ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚಾರಿಸಲಾಗುತ್ತಿದೆ “ಗೃಹರಕ್ಷಕದಳ “ಎಂದರೆ “ಗೃಹ” ಎಂದರೆ ಮನೆ ಮನೆ ಎನ್ನುವ ಪದವನ್ನು ಇಲ್ಲಿ ಸಮಾಜ ಎಂದು ಅರ್ಥೈಸಲಾಗಿದೆ ಆದ್ದರಿಂದ ಸಮಾಜರಕ್ಷಣೆಯೇ ಗೃಹರಕ್ಷಣೆ “ದಳ”ಎಂಬುವುದು ಸ್ವಯಂಸೇವಾ ಸದಸ್ಯರ ಬಳಗ ಗೃಹರಕ್ಷಕದಳವೆಂದರೆ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರ ಧರಿಸಿದ ಒಂದು ಸ್ವಯಂಸೇವಾ ಸಂಸ್ಥೆ “ನಿಷ್ಕಾಮ ಸೇವಾ” ಇದರ ಮೂಲ ದ್ಯೇಯ ರಾಜಕೀಯ, ಕೊಮುವಾರು,ಮತ್ತು ಬಾಷವಾರು ಪಂಗಡಗಳಿಂದ ದೂರವಿದ್ದು ತಮ್ಮ ನಿತ್ಯದ ಉದ್ಯೋಗದ ಮತ್ತು ದಿನಚರಿಯ ಜೊತೆ ದೇಶ ಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟೀಕರ ಸೇವಾದಳವಿದು ಶಾಂತಿ ಪಾಲನೆಯೇ ಇದರ ಮುಖ್ಯ ದ್ಯೇಯ ಶಾಂತಿ ಪಾಲನೆಯಲ್ಲಿ ಪೋಲಿಸರೊಂದಿಗೆ ಭುಜಕ್ಕೆ ಭುಜ ಕೊಟ್ಟು ಸೇವೆ ಸಲ್ಲಿಸುತ್ತಾರೆ
ಗೃಹರಕ್ಷಕದಳದ ಸ್ಥಾಪನೆ:- ಗೃಹರಕ್ಷಕದಳವು ಸ್ವಯು ಸೇವಾ ಸಂಸ್ಥೆಯಾಗಿ ಪ್ರಪಂಚದ ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಪ್ರಾರಂಭವಾಯಿತು 1946 ಡಿಸೆಂಬರ್ ನಲ್ಲಿ ಗೃಹರಕ್ಷಕದಳವು ಬಾಂಬೇ ರಾಜ್ಯದಲ್ಲಿ ಸ್ಥಾಪನೆಯಾಯಿತು ಸೈನ್ಯಪಡೆಯನ್ನು ಹಿಮ್ಮಟ್ಟಿಸಲು ಪೋಲಿಸ್, ಮಿಲಿಟರಿ ಪಡೆಯ ಪರ್ಯಾಯವಾಗಿ ಜನರೇ ದೇಶವನ್ನು ರಕ್ಷಿಸಲು ರೂಪಿಸಿದ ನಾಗರಿಕ ಪಡೆ [Local Defence Volllinter] ಸ್ಥಳಿಯ ರಕ್ಷಣಾ ಕಾರ್ಯಕರ್ತ ಎಂದು ಕರೆಯುತ್ತಾರೆ ಆಗಿನ ಮುಂಬಯಿ ಪ್ರಾಂತ್ಯ ಕೋಮುಗಲಭೆಗಳಿಂದ ತತ್ತರಿಸಿದಾಗ ಕೆಲವು ಮಂದಿ ಸಮಾಜ ಸೇವಕರು,ನಾಗರಿಕ ಪ್ರಜ್ಞೆಯುಳ್ಳ ಯುವಕರು ನಾಡಿನ ಶಾಂತಿಪಾಲನೆ,ಜನರ ಮಾನ-ಪ್ರಾಣ ,ಮತ್ತು ಆಸ್ತಿ-ಪಾಸ್ತಿ ರಕ್ಷಣೆಗೆ ಮುಂದೆ ಬಂದರು ಈ ಸಮಯದಲ್ಲಿ ಆಗಿನ ಮುಂಬಯಿ ಸರಕಾರ ಇಂಥ ಸ್ವಯುಂ ಸೇವಾದಳದ ಅಗತ್ಯತೆಯನ್ನು ಮನಗಂಡು 1947ರಲ್ಲಿ ಮೊರಾರ್ಜಿ ದೇಸಾಯಿ ಪ್ರದಾನ ಮಂತ್ರಿ ಆಗಿದ್ದಾಗ ಈ ಸಂಬಧ ಶಾಸನ ಬದ್ಧ ಕಾಯ್ದೆ ರೂಪಿಸಿ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂಧರ್ಭದಲ್ಲಿ ರಕ್ಷಣೆ ನೀಡಲು ಗೃಹರಕ್ಷಕದಳವನ್ನು ಕೇಂದ್ರಡಳಿತ ಪ್ರದೇಶದಲ್ಲಿ ಆರಂಭಿಸಿ ಖಾಕಿ ಸಮವಸ್ತ್ರಕ್ಕೆ ಮನ್ನಣೆ ನೀಡಲಾಯಿತ ನಂತರ ಕಾಲಕ್ರಮೇಣ ಇತರ ರಾಜ್ಯಗಳು ಆ ಮಾರ್ಗವನ್ನು ಅನುಸರಿಸಿದವು ಮೊದಲು ಪೋಲಿಸರ ಜೊತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಲಾಗುತ್ತಿತ್ತು ಬರುಬರುತ್ತಾ ಗೃಹರಕ್ಷಕದಳ ಸೇವೆಯನ್ನು ರಾಷ್ಟ್ರದ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಪೋಲಿಸರು ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಲಾಗುತ್ತಿದೆ ಇವರಿಗೆ ಗೊತ್ತಾದ ಸರ್ಕಾರಿ ಸಂಬಳವಿಲ್ಲಾ ಸರ್ಕಾರ ನಿಗದಿ ಮಾಡಿದ ಗೌರವಧನ,ಇತರಭತ್ಯೆಗಳು ಮಾತ್ರ ದೊರೆಯುತ್ತದೆ ಪ್ರಸ್ತುತ ದಿನಗಳಲ್ಲಿ ಸರ್ಕಾರ ನಿಗದಿಪಡಿಸಿದ್ದಂತೆ ಆರಕ್ಷಕ ಠಾಣೆಯಲ್ಲಿ ಸೇವೆ ಸಲ್ಲೀಸುವ ಗೃಹರಕ್ಷಕರಿಗೆ ದಿನವೊಂದಕ್ಕೆ750/- ಹಾಗೂ ಇತರೆ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ 380/- ಗೌರವಧನ ಗೃಹರಕ್ಷಕರಿಗೆ ನೀಡಲಾಗುತ್ತದೆ
ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ ಸ್ಥಾಪನೆ:-ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ1962 ರಲ್ಲಿ ಉದಯವಾಯಿತು ಗೃಹರಕ್ಷಕ ಕಾಯ್ದೆ (1962 ರ ಕಾಯ್ದೆ ಸಂಖ್ಯೆ 35ರಲ್ಲಿ)ರಚಿತಗೊಂಡಿದೆ ಕರ್ನಾಟಕದಲ್ಲಿ ಗೃಹರಕ್ಷಕರ ಕಾಯ್ದೆಯನ್ನು ರೂಪಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿತು ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಗೃಹರಕ್ಷಕದಳದ ಮಾಹಾ ಸಮಾದೇಷ್ಠಕರಾಗಿ ಶ್ರೀ ಆರ್.ಎ.ಮುಂಡ್ಕೂರ್ ಐ.ಪಿ.ಎಸ್.ಇವರು ಕರ್ನಾಟಕದಲ್ಲಿ ಗೃಹರಕ್ಷಕದಳ ರಚನೆಗೆ ಭದ್ರ ಬುನಾದಿಗೆ ಅಡಿಪಾಯ ಹಾಕಿದವರು
ಗೃಹರಕ್ಷಕದಳ ಸೇರಲು ಯಾರು ಅರ್ಹರು ಹಾಗೂ ಸೇರ್ಪಡೆ ಕ್ರಮ ಹೇಗೆ:-ಆಯಾ ಜಿಲ್ಲಾ ವಾಸಿಗಳು ಭಾರತೀಯ ನಾಗರಿಕರು ಈ ದಳವನ್ನು ಸೆರಬಹುದು ವಿದ್ಯಾರ್ಹತೆ SSLC ಪಾಸಗಿರಬೇಕು, ವಯಸ್ಸು 19-50 ಅಂತರವಿರಬೇಕು,ನಿರ್ದಿಷ್ಟ ದೇಹದ ಅಳತೆಯೊಂದಿಗೆ ಕೂಡಿ ದೃಢಕಾಯವಾಗಿರಬೇಕು, ಓದು ಬರಹ ತಿಳಿದರಬೇಕು, ಹಾಗೂ ಯಾವುದೇ ರೀತಿಯಿಂದಲೂ ನ್ಯಾಯಲಯದಿಂದ ಶಿಕ್ಷೆಗೆ ಒಳಗಾಗಿರಬಾರದು,ಸಮಾಜ ಕಂಟಕ ವ್ಯಕ್ತಿಯಾಗಿರಬಾರದು,ಯಾವುದೇ ರೀತಿಯಲ್ಲೂ ಅಂಗಂಗಾ ನ್ಯೂನತೆಗಳು ಇರಬಾರದು, ವ್ಯಕ್ತಿಯ ಘನತೆ ,ದೇಹ ದೃಢತೆ,ಆತನ ಸೇವೆ ಎಲ್ಲವನ್ನು ಪರಿಗಣಿಸಿ ಸರಕಾರ ವಿಧಿಸಿರುವ ನಿಯಮದಂತೆ ಆಯ್ಕೆ ಮಾಡಲಾಗುತ್ತದೆ
ಗೃಹರಕ್ಷಕದಳ ಸೇವೆಯನ್ನು ಎಲ್ಲೆಲ್ಲಿ ಬಳಸಲಾಗುತ್ತದೆ:-
ಪ್ರಸ್ತುತ ವರ್ಷಗಳಲ್ಲಿ ಕೊರೋನ ಮಾಹಾಮಾರಿ ವಿರುದ್ಧ ಕೊರೋನ ವಾರಿಯರ್ಸ್ ಆಗಿ ಗೃಹರಕ್ಷಕರು ಸೇವೆ ಸಲ್ಲಿಸಿರುತ್ತಾರೆ ಈ ವೇಳೆ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಸಿಬ್ಬಂದಿಗೆ ಕೊರೋನ ಸೋಂಕು ತಗುಲಿದ್ದು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿ ವಾಪಸ್ಸು ಸೇವೆಗೆ ಹಾಜರಾಗಿರುತ್ತಾರೆ
1】ದೇಶದ ಅಂತರಿಕ ಭದ್ರತೆಯಲ್ಲಿ ಪೋಲಿಸರೊಂದಿಗೆ ಸೇರಿ ಸೇವೆ ಸಲ್ಲಿಸುವುದು,ಹಾಗೂ ಪೋಲಿಸರ ಜೊತೆ ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು 2】ಅಪರಾಧ ತಡೆಗಟ್ಟುವ ದೃಷ್ಟಿಯಿಂದ ಪೋಲಿಸರ ಜೊತೆಯಲ್ಲಿ ಗಸ್ತು ತಿರುಗುವುದು 3】ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ,ಸುನಾಮಿ, ಭೂಕುಸಿತ, ಭೂಕಂಪ, ಇತ್ಯಾದಿ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಜೊತೆ ಸೇರಿ ಸೇವೆ ಸಲ್ಲಿಸುವುದು 4】1961 ರ ಕರ್ನಾಟಕ ಮದ್ಯಪಾನ ಪ್ರತಿಬಂಧಕ ಕಾಯ್ದಿಯನ್ನು ಜಾರಿಗೊಳಿಸಲು ಅಬಕಾರಿ ಇಲಾಖೆಯ ಕಳ್ಳಭಟ್ಟಿ ಸಾರಾಯಿ ಮತ್ತು ಅನಧಿಕೃತ ಮದ್ಯಮಾರಟ ನಿಯಂತ್ರಣಕ್ಕೆ ಸಂಬಂಧ ಪಟ್ಟ ಇಲಾಖೆಯ ಜೊತೆ ಕೈ ಜೋಡಿಸಿವುದು 5】ಪ್ರತಿಭಟನೆ, ಮುಸ್ಕರ,ವಿವಾದಾತ್ಮಕ ವಲ್ಲದ ಪ್ರತಿಫಟನೆ,ಕ್ರೀಡಾಕೂಟ, ಯಾವುದೇ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಗೃಹರಕ್ಷಕರನ್ನು ಬಳಸಬಹುದು ಆದರೆ ರಾಜ್ಯ(ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಾಹಾಸಮಾದೇಷ್ಠರು) ಇವರ ಪೂರ್ವನುಮತಿ ಕಡ್ಡಾಯ
ಪ್ರತಿ ವರ್ಷ ಡಿಸೆಂಬರ್ 6 ನ್ನು ದೇಶದಾದ್ಯಂತ ಅಖಿಲ ಭಾರತ ಗೃಹರಕ್ಷಕರ ಆಚರಿಸರಿಸಲಾಗುತ್ತದೆ ಈ ಸಂದರ್ಭದಲ್ಲಿ ಪ್ರತಿಯೊಂದು ಗೃಹರಕ್ಷಕದಳದ ಕಟ್ಟಡದ ಮೇಲೆ ಗೃಹರಕ್ಷಕದಳದ ಬಾವುಟವನ್ನು ಹಾರಿಸಲಾಗುತ್ತದೆ ಪ್ರತಿ ಜಿಲ್ಲೆಯ ಜಿಲ್ಲಾ ಕಚೇರಿಯಲ್ಲಿ ಸರ್ಕಾರದ ನಿರ್ದೇಶನದಂತೆ ಗೃಹರಕ್ಷಕದಳದ ದಿನಾಚರಣೆಯನ್ನು ಆಚರಿಸುತ್ತಾರೆ
ಏನೇ ಇರಲಿ ಸಮಾಜದಲ್ಲಿ ಯಾವುದೇ ಪ್ರತಿಫಲ ಬಯಸದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸುವ
✍ ಬರಹಗಾರರು ದಿನೇಶ್.ಬಿ ಪ್ರಭಾರ ಘಟಕಾಧಿಕಾರಿ ಗೃಹರಕ್ಷಕದಳ ಉಪ್ಪಿನಂಗಡಿ ಘಟಕ
೧ ರಿಂದ ೮ ನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ತೆರೆಯದಿರಲು ಸರಕಾರ ತೆಗೆದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗು ಮಕ್ಕಳ ವಿರೋಧಿ ನಿರ್ಧಾರ
ಸರ್ಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ. ಸ್ಪಷ್ಟವಾಗಿ ಇದು ಬಡ ಮತ್ತು ಹಿಂದುಳಿದ ಸಮುದಾಯಗಳು ಮತ್ತು ಅವರ ಮಕ್ಕಳ ಹಿತಾಸಕ್ತಿ ಹಾಗು ಬೆಳವಣಿಗೆಗೆ ವಿರುದ್ಧದ ನಿರ್ಧಾರವಾಗಿದೆ.
ಇದನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಖಂಡಿಸುತ್ತದೆ.
ಸಚಿವರ ನೇತೃತ್ವದಲ್ಲಿ ಸರಕಾರಿ ಶಾಲೆಗಳ ಪೋಷಕರು ಮತ್ತು ಎಸ್ಡಿಎಂಸಿ ಯವರಿಂದ ರಾಜ್ಯವ್ಯಾಪಿ ಅಭಿಪ್ರಾಯವನ್ನು ಕೇಳಿದ್ದು, ಎಲ್ಲಾ ಪೋಷಕರು ಒಕ್ಕೊರಲಿನಿಂದ ಶಾಲೆಯನ್ನು ತೆರೆಯುವ ಬಗ್ಗೆ ಸಹಮತ ವ್ಯಕ್ತ ಪಡಿಸಿದ್ದರು.ಅದಲ್ಲದೆ ಹಲವು ಶಿಕ್ಷಣ ತಜ್ಞರು, ಶಿಕ್ಷಣಕ್ಕೆ ಸಂಭಂದಪಟ್ಟ ಸಂಘ ಸಂಸ್ತೆ ಗಳು ಕೂಡ ಶಾಲೆ ತೆರೆದು ಪ್ರಾರಂಭ ಮಾಡುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದು ಕೂಡ ,ಮಾನ್ಯ ಮುಖ್ಯ ಮಂತ್ರಿಯವರು ಸಂಬಂಧಪಟ್ಟ ಶಿಕ್ಷಣ ಸಚಿವರನ್ನು ಮೂಲೆಗುಂಪು ಮಾಡುವ ರೀತಿಯಲ್ಲಿ ಎಲ್ಲಾ ನಿರ್ಧಾರಗಳನ್ನು ಅವರೇ ಏಕೆ ತೆಗೆದುಕೊಳ್ಳುತ್ತಿದ್ದಾರೆ.
ಪೋಷಕರ ಮತ್ತು ಮಕ್ಕಳ ಹಾಗೂ ಸರಕಾರಿ ಶಾಲೆಯ ನಿಜವಾದ ವಾರಿಸುದಾರರಾದ ಎಸ್ಡಿಎಂಸಿ ಯವರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ಇಲ್ಲವೇ, ಶಾಲೆ ತರೆಯದಿರುವ ಬಗ್ಗೆ ಮೊದಲೇ ನಿಶ್ಚಯ ಮಾಡಿದ್ದರೆ ಪೋಷಕರ ಅಭಿಪ್ರಾಯ ಎನ್ನುವ ನಾಟಕದ ಅಗತ್ಯವೇನಿತ್ತು. ಈ ಶೈಕ್ಷಣಿಕ ವರ್ಷ ಶಾಲೆ ತೆರೆಯದಿರಲು ಮಾಡಿದ ನಿರ್ಣಯದ ಹಿಂದಿರುವ ಒತ್ತಡ ಯಾವುದು ಎಂಬುದು ದೊಡ್ಡ ರಹಸ್ಯವಾಗಿದೆ.
ಸರಕಾರಿ ಶಾಲೆಗಳ ಮಕ್ಕಳಿಗೆ ಅತೀ ಸುರಕ್ಷಿತ ವಿಧಾನದಿಂದ ಕಲಿಸುತ್ತಿದ್ದ ವಿಧ್ಯಾಗಮ ಎನ್ನುವ ಒಂದು ಒಳ್ಳೆಯ ಕಾರ್ಯಕ್ರಮವು ಮಾನ್ಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ವೈಜ್ಞಾನಿಕ ಮತ್ತು ದಾಖಲೆಗಳು ಇಲ್ಲದೆ ಮಾಧ್ಯಮ ಮತ್ತು ಕೆಲವು ಲಾಬಿಗಳ ದುರುದ್ದೇಶ ಪೂರಿತ ವಾದ ಸಂದೇಶದಿಂದಾಗಿ ನಿಲ್ಲಿಸಲಾಗಿದೆ.
ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಪ್ರಾಥಮಿಕ ಬಾಧ್ಯತೆಯನ್ನು ಹೊಂದಿರುವ ರಾಜ್ಯ ಸರಕಾರವೇ “ಮಕ್ಕಳ ಹಿತಾಸಕ್ತಿಗೆ” ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ , ಜೀತ ಪದ್ಧತಿ ಮತ್ತು ಮಕ್ಕಳ ಸಾಗಾಣಿಕೆಗೆ ಉತ್ತೇಜನ ನೀಡುವ ನೀತಿ ಅನುಸರಿಸಲು ಹೊರಟಿರುವುದು ಖಂಡನೀಯ .
ಇದು ಸಂವಿಧಾನದಲ್ಲಿ ಬದುಕುವ ಹಾಗು ಶಿಕ್ಷಣದ ಮೂಲ ಭೂತ ಹಕ್ಕಿನ (ಪರಿಚ್ಛೇಧ ೨೧, ೨೧ ಎ ಮತ್ತು ೨೪ ಹಾಗು ರಾಜ್ಯ ನಿರ್ದೇಶಕ ತತ್ವಗಳಾದ ೩೯,೪೧,೪೫,೪೬ ಮತ್ತು ೪೭ ) ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಯ (ಯುಎನ್ಸಿಆರ್ಸಿ) ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜ್ಯ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸ್ಪಷ್ಟ ಉದಾಹರಣೆಯಾಗಿದೆ .
ಸರಕಾರವು ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಪುನರ್ವಿಮರ್ಷೆ ಮಾಡಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಕೊಡಲು ಈ ಹಿಂದೆ ತಾತ್ಕಾಲಿಕ ವಾಗಿ ನಿಲ್ಲಿಸಲಾಗಿದ್ದ ವಿಧ್ಯಾಗಮವನ್ನು ಪ್ರಾರಂಭ ಮಾಡುವುದರೊಂದಿಗೆ, ಆದಷ್ಟು ಬೇಗ ಶಾಲೆಗಳನ್ನು ತೆರೆಯುವ ಬಗ್ಗೆ ಆದೇಶವನ್ನು ಕೊಡಬೇಕು.
ಇಲ್ಲದಿದ್ದರೆ ಎಸ್ಡಿಎಂಸಿ ಸಮನ್ವಯ ವೇದಿಕೆಯು ಪೋಷಕರೊಂದಿಗೆ ಸೇರಿ ಹೋರಾಟ ಮಾಡಲಿದ್ದೇವೆ ಎಂದು
ಸಮನ್ವಯ ವೇದಿಕೆಯ ಮಹಾ ಪೋಷಕರಾದ ನಿರಂಜನಾರಾಧ್ಯ ವಿ ಪಿ,
ರಾಜ್ಯಾಧ್ಯಕ್ಷರಾದಮೊಯಿದಿನ್ ಕುಟ್ಟಿ,
ಕಾರ್ಯದರ್ಶಿ ಕವಿತಾ ಹಾಸನ
ವಿಭಾಗ ಉಸ್ತುವಾರಿ ಗಳಾದ ಅಶೋಕ್ ಮಾಗಡಿ, ನಾಗೇಶ್ ಕೊಡಗು,
ಡಿ. ವಿ.ಕುಪ್ಪಸ್ತ್ರ ವಿಜಯಪುರ
ಮತ್ತು ರಾಘವೇಂದ್ರ ಗುನ್ನಲ್ಲಿ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ
(www.vknews.in) ಮಂಗಳೂರು:-ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಳ್ಳಾಲ ಘಟಕದ ವತಿಯಿಂದ ರವಿವಾರ ಬೆಳಿಗ್ಗೆ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ರವರ ನೇತೃತ್ವದಲ್ಲಿ ಉಳ್ಳಾಲ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು
ಪ್ರಾಣಾಯಾಮ ಮತ್ತು ಯೋಗ ಶಿಬಿರ:
-ಸ್ವಚ್ಛತಾ ಕಾರ್ಯಕ್ರಮದ ನಂತರ ಕಾರ್ಯಕ್ರಮ ಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ಯೋಗ ಗುರುಗಳಾದ ಯೋಗರತ್ನ ಶ್ರೀ ಗೋಪಾಲ ಕೃಷ್ಣ ದೇಲಂಪಾಡಿ ರವರು ಪ್ರಾಣಾಯಾಮ ಮತ್ತು ಯೋಗ ಶಿಬಿರ ನಡೆಸಿ ಕೊಟ್ಟರು ಹಲವು ಮಂದಿ ಗೃಹರಕ್ಷಕರು ಇದರ ಸದುಪಯೋಗ ಪಡೆದುಕೊಂಡರು ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣಾ ದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುರೇಶ್ ಶೇಟ್,ಹಿರಿಯ ಗೃಹರಕ್ಷಕ ಸುನಿಲ್,ಮಂಗಳೂರು ಘಟಕದ ಸಾರ್ಜೆಂಟ್ ಸುನಿಲ್ ಕುಮಾರ್, ಸೆಕ್ಷನ್ ಲೀಡರ್ ಕೇಶವ ಶೆಟ್ಟಿಗಾರ್,ಘಟಕದ ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು,ಪೌರರಕ್ಷಣಾ ದಳದ ಸಿಬ್ಬಂದಿ. ಭಾಗವಹಿಸಿದರು
(www.vknews.in)ನೆಕ್ಕಿಲಾಡಿ 34 ರಲ್ಲಿ ನಡೆಯುತ್ತಿರುವ ವಾರದ ಸಂತೆಯು, ಸಂತೆ ಮೇಳ ಎನ್ನುವ ಹೆಸರಿನೊಂದಿಗೆ ಅಲ್ಲಿಯ ವ್ಯಾಪಾರಿಗಳ ಸಹಕಾರದೊಂದಿಗೆ 3 ನೇ ವಾರ ಕೂಡ ಕಡಿಮೆ ದರದಲ್ಲಿ ತರಕಾರಿ ಮತ್ತು ಇನ್ನಿತರ ದಿನಸಿ ವಸ್ತುಗಳನ್ನು ಗ್ರಾಹಕರಿಗೆ ಕೊಡುವ ಉದ್ದೇಶ ದಿಂದ ದರಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೌತೆ ಕಾಯಿ 15 ರೂಪಾಯಿ,ಬೀನ್ಸ್ 15 ರೂಪಾಯಿ,ಟೊಮಾಟೊ 20 ರೂಪಾಯಿ, ಕೇಶು ಬೀಜ 20 ರೂಪಾಯಿ, ಬೆಂಡೆ 20 ರೂಪಾಯಿ, ತೊಂಡೆಕಾಯಿ 30 ರೂಪಾಯಿ, ಹೀರೆಕಾಯಿ 25, ಮುಳ್ಳುಸೌತೆ 20, ಚೀನಿಕಾಯಿ 20 ರೂಪಾಯಿ, ಕೋಸು 30 ರೂಪಾಯಿ, ಶುಂಠಿ 40 ರೂಪಾಯಿ, ನೀರುಳ್ಳಿ 55 ರೂಪಾಯಿ, ಅದೇ ರೀತಿ ಒಣ ಮೀನು ಕಿಲೋಗೆ 120 ರೂಪಾಯಿ. ಹಸಿ ಮೀನು ಬಂಗುಡೆ 120 ರೂಪಾಯಿ. ಇದರೊಂದಿಗೆ ಈ ದಿನ ಮರ ಕೊಯ್ಯುವ ಯಂತ್ರ ಮತ್ತು ಹುಲ್ಲು ಕೊಯ್ಯುವ ಯಂತ್ರದ ಪ್ರದರ್ಶನ ಮತ್ತು ಮಾರಾಟ ವಿಶೇಷ ರಿಯಾಯಿತಿ ದರದಲ್ಲಿ ನಡೆಯಲ್ಲಿಕ್ಕಿದೆ
(Www.vknews.in) ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಪುತ್ತೂರು ಸಮಿತಿ ವತಿಯಿಂದ ಎಸ್ಎಂಎ ಎಲೆಕ್ಷನ್ ಕ್ರಿಯೇಶನ್ ಸಮಾವೇಶ 2020 ಹಾಗೂ ಸೈಯದ್ ತಾಜುಲ್ ಉಲಮಾ ಅನುಷ್ಮರಣಾ ಕಾರ್ಯಕ್ರಮ ನವಂಬರ್17 ರಂದು ಜಿಲ್ಲಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ರವರ ಅಧ್ಯಕ್ಷತೆಯಲ್ಲಿ ನೆಕ್ಕಿಲಾಡಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಅಸ್ಸಯ್ಯದ್ ಸಾದಾತ್ ತಂಙಳ್ ಕರುವೇಲು ದುವಾ ನೇತೃತ್ವ ನೀಡಿದರು. ಎಸ್ಎಂಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಮಿತಿ ಎಲೆಕ್ಷನ್ ಡೈರೆಕ್ಟರೇಟ್ ಗಳಾದ ಆತೂರು ಸಅದ್ ಮು ಸ್ಲಿಯಾರ್ ಹಾಗೂ ಕೆ ಕೆ ಕಾಮಿಲ್ ಸಖಾಫಿ ಎಲೆಕ್ಷನ್ ಕ್ರಿಯೇಶನ್ ಕಾರ್ಯಾಗಾರ ನಡೆಸಿದರು
. ಈ ವೇಳೆಯಲ್ಲಿ ಮುಂದಿನ ಸಾಲಿನ ಎಲೆಕ್ಷನ್ ಸಮಿತಿಯ ದ ಕ ಜಿಲ್ಲಾ ಎಲೆಕ್ಷನ್ ಡಯರಕ್ಟರೇಟ್ ಸದಸ್ಯರ ಅಧಿಕಾರ ಸ್ವೀಕಾರ ಹಾಗೂ ದಾಖಲೆ ಪತ್ರಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸಮಾವೇಶದ ಕುರಿತು ಆಶಂಸಾ ಭಾಷಣ ಎಂ. ಬಿ. ಮುಹಮ್ಮದ್ ಸಾದಿಕ್ ಮಲೆಬೆಟ್ಟುSMA ರಾಜ್ಯ ಎಲೆಕ್ಷನ್ ಡೈರೆಕ್ಟರ್,ಸಯ್ಯಿದ್ ಸಾದಾತ್ ತಂಙ್ಙಳ್ ಕರುವೇಲ್ ದ. ಕ. ಜಿಲ್ಲಾ ಈಸ್ಟ್ ಎಲೆಕ್ಷನ್ ಡೈರೆಕ್ಟರೇಟ್ ಚಯರ್ಮಾನ್ ನಡೆಸಿದರು.
ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ತಹಲೀಲ್ ಸಮರ್ಪಣ ಕಾರ್ಯಕ್ರಮವು ನಡೆಯಿತು.ರಾಜ್ಯಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ಸಖಾಫಿ ಅನುಸ್ಮರಣಾ ಭಾಷಣ ನಡೆಸಿದರು. ವೇದಿಕೆಯಲ್ಲಿ ವಿಟ್ಲ ಝೋನಲ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ, ಎಸ್ಎಂಎರಾಜ್ಯಸಮಿತಿ ನಾಯಕ ಬಾವ ಹಾಜಿ ಪುತ್ತೂರು, ಬೆಳ್ಳಾರೆ ಜೋನಲ್ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಪಡ್ಪಿನಂಗಡಿ, ಎಸ್ಎಂಎ ಜಿಲ್ಲಾ ನಾಯಕ ಹಾಜಿ ಇಶಾಕ್, ನೆಕ್ಕಿಲಾಡಿ ಜುಮಾ ಮಸ್ಜಿದ್ ಮುದರ್ರಿಸ್ ಇಬ್ರಾಹಿಂ ಸಹದಿ, ಎಸ್ಎಂಎಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ, ರಾಜ್ಯ ಸಮಿತಿ ಕಾರ್ಯದರ್ಶಿ ಸಾಧಿಕ್ ಮಾಸ್ಟರ್, ಯೂಸುಫ್ ಹಾಜಿ ಪುತ್ತೂರು, ಮಹಮ್ಮದ್ ಹಾಜಿ ಉಪ್ಪಿನಂಗಡಿ, ಹಮೀದ್ ಮುಂಡಾಜೆ, ಅಬ್ದುಲ್ಲಾ ಅಹ್ಸನಿ ಕಾವು, ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ಲಾ ಅಹ್ಸನಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಜೋನಲ್ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಸದಸ್ಯರು, ರೀಜಿನಲ್ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು ಭಾಗವಹಿಸಿದ್ದರು.
(www.vknews.in) ಧಾರಾವಾಡ ತಾಲೂಕ ವೀರಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ , ಕಲಘಟಗಿ ವಿಧಾನ ಸಭೆಯ ಶಾಸಕರಾದ ಶ್ರೀ ಸಿ ಎಮ್ ನಿಂಬನ್ನವರ ನೂತನವಾಗಿ ಮಂಜೂರಾದ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೇರವೇರಿಸಿದರು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಈರಣ್ಣ ಮುರಗೋಡ, ಸಂಜು ಜೀರಗೋಡ ಹಾಗೂ ಶಾಲಾ ಪ್ರಧಾನ ಗುರುಮಾತೆ ಶ್ರೀಮತಿ ಕಸ್ತೂರಿಯವರು ಮಾನ್ಯ ಶಾಸಕರನ್ನು ಸನ್ಮಾನಿಸಿ ಶಾಲಾಭಿವೃದ್ದಿಗೆ ಸಂಬಂದಿಸಿದ ಕೆಲ ಕಾರ್ಯಗಳಿಗಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀಮತಿ ರಾಘವೇಣಿ ಸುನಿಲ ಪಾಟೀಲ, ಕಲ್ಮೇಶ ಬೇಲೂರ. ಗ್ರಾಮದ ಹಿರಿಯರಾದ ಶ್ರೀ ಸಿದ್ದಪ್ಪ ವಾಘ ಶ್ರೀ ಶಂಕರ ಬೋಗೂರ, ಭೀಮನಗೌಡ ಪಾಟೀಲ, ,ದ್ಯಾಮವ್ವ ಗಂಡಗುದರಿ, ಫಕ್ಕೀರಪ್ಪ ಕೋಟೂರ, ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶ್ರೀ ವಿಠ್ಠಲ ಕಾಡೇನವರ ಸಿ, ಆರ್ ಪಿ ಶ್ರೀ ಬಸವರಾಜ ಶಿಕ್ಷಕರಾದ ಶ್ರೀ ಕಲ್ಲಪ್ಪ ಅಮ್ಮೀನಬಾವಿ, ಸವಿತಾ ಮಾದರ, ಗೀತಾ ಕುಲಕರ್ಣಿ ಹಾಜರಿದ್ದರು,
(www.vknews.in) ಹಲವು ವರ್ಷಗಳ ಇತಿಹಾಸ ಇರುವಂತಹ ಉಪ್ಪಿನಂಗಡಿಯ ಸಂತೆಯು ನೆಕ್ಕಿಲಾಡಿ ಯಲ್ಲಿ ನಡೆಯುತ್ತಿತ್ತು, ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಆಗುತ್ತಿದ್ದು, ಕೋರೋಣ ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಸಾಂಪತ್ತಿಕ ವಾಗಿ ಕೂಡ ಕಷ್ಟ ವಿದ್ದು ತರಕಾರಿ,ದಿನಸಿ ಸಾಮಾನುಗಳ ಬೆಲೆ ಕೂಡ ಗಗನಕ್ಕೆ ಏರಿರುವುದು ಕಾರಣವಾಗಿದೆ. ಇದರಿಂದ ಉಪ್ಪಿನಂಗಡಿ ಸಂತೆ ಎನ್ನುವುದು ಜನರಿಂದ ಮಾಯ ವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ನೆಕ್ಕಿಲಾಡಿ ಸಂತೆಯು ಉಳಿಯ ಬೇಕಾದ ಆವಶ್ಯಕತೆ, ಹಾಗೂ ಜನರಿಗೆ ಕೈ ಗಟುಕುವ ದರದಲ್ಲಿ ಸಾಮಾನುಗಳನ್ನು ತಲುಪಿಸುವ ಅಗತ್ಯತೆ ಯನ್ನು ಮನಗಂಡ ಸಂತೆಯಲ್ಲಿ ಅಂಗಡಿ ಹಾಕುತ್ತಿದ್ದ 30 ರಷ್ಟು ವ್ಯಾಪಾರಿಗಳು ಸೇರಿ ಎರಡು ವಾರದಿಂದ ನೆಕ್ಕಿಲಾಡಿ ಸಂತೆ ಮೇಳ ಎನ್ನುವ ವಿನೂತನವಾದ ಹಾಗೂ ಕಡಿಮೆ ದರದಲ್ಲಿ ಉತ್ಕೃಷ್ಟವಾದ ತರಕಾರಿ, ಮೀನು,ಹಣ್ಣು ,ಒಣಮೀನು ಜಿನಸಿ ,ಬಟ್ಟೆ ಮೊದಲಾದವುಗಳನ್ನು ನೀಡುತ್ತಿರುವುದು ಸಾಮಾನ್ಯ ಜನರಿಗೆ ಅತ್ಯಮೂಲ್ಯವಾದ ಸಹಾಯ ವಾಗುತ್ತಿದೆ.
ಸಂತೆ ಮೇಳದ ಒಂದು ದಿನದ ಮೊದಲೇ ಸಂತೆ ಮೇಳದಲ್ಲಿ ಸಿಗುವ ದರಕಡಿತದ ವಸ್ತುಗಳ ದರಪಟ್ಟಿಯನ್ನು ಬಿಡುಗಡೆ ಮಾಡುತ್ತಿರುವುದು ಖರೀದಿ ಮಾಡಲು ಬರುವ ಜನರಿಗೆ, ಸಾಮಾನ್ಯ ಅಂಗಡಿಯಲ್ಲಿ ಹಾಗೂ ಇಲ್ಲಿ ಸಿಗುವ ವಸ್ತುಗಳ ಬಗ್ಗೆ ಧಾರಣೆ ಸಿಗುತ್ತಿರುವುದು ಖರೀದಿ ಮಾಡಲು ಸುಲಭವಾಗಿದೆ.
ಸಾಮಾನ್ಯ ಅಂಗಡಿಯಲ್ಲಿ ಸಿಗುವ ವಸ್ತುಗಳು ಹಾಗೂ ಇಲ್ಲಿ ಮಾರಾಟ ಮಾಡುವಂತಹ ವಸ್ತುಗಳಿಗೆ ಧಾರಣೆಯಲ್ಲಿ ತುಂಬಾ ವ್ಯತ್ಯಾಸವಿದ್ದು ಗುಣಮಟ್ಟದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇಲ್ಲದಿರುವುದು ಸಾಮಾನ್ಯ ಜನರಿಗೆ ಖರೀದಿ ಮಾಡಲು ಉಪಕಾರ ಪ್ರದವಾಗಿದೆ.
ಗುರುವಾರ ಬೆಳಿಗ್ಗೆ 4 ಗಂಟೆಯಿಂದ ಸಂತೆ ಮೇಳವು ಶುರುವಾಗುತ್ತಿದ್ದು ಮದ್ಯಾಹ್ನ 12 ರಿಂದ 1 ಗಂಟೆಯವರೆಗೆ ಇದೆ ಎಂದು ವರ್ತಕರ ನ್ನು ಒಟ್ಟು ಗೂಡಿಸಿ ಇಂತಹ ಮೇಳಕ್ಕೆ ಚಾಲನೆಯನ್ನು ನೀಡುವಲ್ಲಿ ಪ್ರಮುಖ ಪಾತ್ರದಾರಿಗಳಾದ ರಶೀದ್ ನೇಷನಲ್ ಮತ್ತು ಅಬ್ದುಲ್ ರಹಿಮಾನ್ ನೆಕ್ಕಿಲಾಡಿ ತಿಳಿಸಿದರು.
ಕೋರೋಣ ಸಮಯದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದ್ದು ಅವರ ಕಷ್ಟಗಳನ್ನು ನಾವು ಅರ್ಥ ಮಾಡಿ ಕೊಂಡಿದ್ದು, ವಾರಕ್ಕೆ ಒಂದು ದಿನವಾದರೂ ಕಡಿಮೆ ದರದಲ್ಲಿ ತರಕಾರಿ ದಿನಸಿಗಳನ್ನು ಕೊಟ್ಟು ನಮ್ಮಿಂದ ಆಗುವಂತಹ ಸಹಕಾರವನ್ನು ಮಾಡಲು ಇಲ್ಲಿಯ ಸಂತೆ ವ್ಯಾಪಾರಿಗಳು ಎಲ್ಲರೂ ಸೇರಿ ಒಮ್ಮತದ ತೀರ್ಮಾನವನ್ನು ತೆಗೆದಿರುವುದರಿಂದ ಸಾಧ್ಯವಾಗಿದೆ.
ಅದಲ್ಲದೆ ಈ ನೆಕ್ಕಿಲಾಡಿ ಸಂತೆಯು ಮುಚ್ಚದೆ ಇರಲು ,ಹಾಗೂ ಜನರನ್ನು ಸೆಳೆಯುವುದು ಕೂಡ ನಮ್ಮ ಉದ್ದೇಶವಾಗಿದೆ.
ನಿನ್ನೆ ಬಿಡುಗಡೆ ಮಾಡಿದ ದರ ಪಟ್ಟಿಯ ಪ್ರಕಾರ ಇಂದು ಎಲ್ಲಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಬಂಗುಡೆ ಮೀನಿಗೆ ದರಪಟ್ಟಿ ಗಿಂತಲೂ ಕಡಿಮೆ ದರವಾದ ಕಿಲೋ 80 ರೂಪಾಯಿಯಲ್ಲಿ ಕೊಡುತ್ತಿದ್ದಾರೆ. ಈ ವ್ಯಾಪಾರಿಗಳ ಈ ಸೇವೆಯನ್ನು ಎಲ್ಲಾ ಜನರು ಕೂಡ ಸದುಪಯೋಗ ಪಡಿಸ ಬೇಕಿದೆ. ಹಾಗೂ ಅವರೊಂದಿಗೆ ಕೈ ಜೋಡಿಸಿ ಈ ಸಂತೆ ಮೇಳವನ್ನು ವಿಜಯಗೊಳಿಸಬೇಕಿದೆ
(www.vknews.in)ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ದಕ್ಷಿಣ ಕನ್ನಡ ಘಟಕದ ವತಿಯಿಂದ ದಿನಾಂಕ 27/10/2020 ಮಂಗಳವಾರದಂದು ಉಪ್ಪಿನಂಗಡಿ ಮಾದರಿ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪ್ರತಿನಿಧಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಖ್ಯಾತ ಶಿಕ್ಷಣ ತಜ್ಞರು, ಮಗು ಮತ್ತು ಕಾನೂನು ಕೇಂದ್ರ(ನೇಷನಲ್ ಲಾ ಕಾಲೇಜು ಇಂಡಿಯಾ ಯೂನಿವರ್ಸಿಟಿ) ಬೆಂಗಳೂರು ಇದರ ಸೀನಿಯರ್ ಫೆಲೋ ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರಾದ ಡಾ.ನಿರಂಜನಾರಾಧ್ಯ. ವಿ. ಪಿ ರೊಂದಿಗೆ ವಿಧ್ಯಾಗಮ ಅಥವಾ ಅದರ ಬದಲಿ ವ್ಯವಸ್ಥೆ ಎಂಬುದರ ಬಗ್ಗೆ ಆನ್ಲೈನ್ ನಲ್ಲಿ ವಿಚಾರ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ನಡಸಲಾಯಿತು.
ಅದಲ್ಲದೆ ಜಿಲ್ಲೆಯಲ್ಲಿರುವ ಸಂಘಟನೆಯನ್ನು ಗಟ್ಟಿ ಮಾಡುವ ಆವಶ್ಯಕತೆ,ಮತ್ತು ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಕೂಡ ಸಂವಾದದ ವಿಷಯ ವಾಯಿತು.
ದಕ್ಷಿಣ ಕನ್ನಡದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ಎಸ್ಡಿಎಂಸಿ ಯವರು ಕೂಡ ಶಾಲೆ ತೆರೆಯುವುದು,ಅಥವಾ ವಿಧ್ಯಾಗಮವನ್ನು ಮುಂದುವರಿಸಿ ಕೊಂಡು ಹೋಗುವ ಬಗ್ಗೆ ತಮ್ಮ ಸಹಮತವನ್ನು ವ್ಯಕ್ತ ಪಡಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣವು ಮರೀಚಿಕೆ ಆಗಿರುವ ಸಂಧರ್ಭದಲ್ಲಿ ವಿಧ್ಯಾಗಮ ಎನ್ನುವ ಒಂದು ಯೋಜನೆ ತುಂಬಾ ಪ್ರಯೋಜನವಾಗಿದೆ. ಇದರಿಂದ ಹೆಚ್ಚಿನ ಎಲ್ಲಾ ಶಾಲೆಗಳಲ್ಲೂ ದಾಖಲಾತಿಯ ಹೆಚ್ಚಳ ಕೂಡ ಆಗಿರುವ ಬಗ್ಗೆ ಎಸ್ಡಿಎಂಸಿ ಪ್ರತಿನಿಧಿಗಳು ತಮ್ಮ ಶಾಲೆಗಳ ಮತ್ತು ಪ್ರದೇಶಗಳ ವಿವರವನ್ನು ಸಲ್ಲಿಸಿದರು.
ಅದೇ ರೀತಿ ಸರಕಾರಿ ಶಾಲೆಗಳಲ್ಲಿ ರುವ ಶಿಕ್ಷಕರ ಕೊರತೆ, ಪಠ್ಯ ಪುಸ್ತಕಗಳ ಸರಿಯಾದ ವಿತರಣೆ ಆಗದಿರುವುದು, ಮೂಲಭೂತವಾದ ಕೆಲವು ಆವಶ್ಯಕತೆ ಯ ಬಗ್ಗೆ ಕೂಡ ಚರ್ಚೆಗಳು ನಡೆದವು.
ಅದಲ್ಲದೆ ಮಕ್ಕಳ ಅಕ್ಷರದಾಸೋಹದ ಅಕ್ಕಿ ,ಹಾಲು ಮತ್ತು ದಿನಸಿ ಸಾಮಾನುಗಳು ಗ್ರಾಮಾಂತರ ಮಕ್ಕಳ ಪೌಷ್ಟಿಕತೆ ಗೆ ಅಗತ್ಯವಾಗಿದ್ದುಅದು ಇನ್ನೂ ಕೂಡ ವಿತರಣೆ ಆಗದಿರುವ ಬಗ್ಗೆ ಆಶಂಕೆ ವ್ಯಕ್ತವಾಯಿತು,
ಸರಕಾರ ಇದರ ಬಗ್ಗೆ ಆದಷ್ಟು ಬೇಗ ಕ್ರಮ ಜರಗಿಸಲು ಒತ್ತಾಯಿಸಲು ನಿರ್ಣಯಿಸಲಾಯಿತು. ಸರಕಾರಿ ಶಾಲೆಗಳ ವಿದ್ಯಾಗಮವು ಯಾವುದೋ ಲಾಬಿಯ ಕಾರಣದಿಂದ ತಾತ್ಕಾಲಿಕ ವಾಗಿ ನಿಲ್ಲಿಸಿರುವುದನ್ನು ಆದಷ್ಟು ಬೇಗ ಶಾಲಾ ವರಾಂಡದಲ್ಲಿ ಅಥವಾ ಶಾಲೆಯಲ್ಲೇ ದಿನಕ್ಕೆ ಒಂದು ತರಗತಿ ಅಥವಾ ಪಾಲಿ ಪದ್ಧತಿಯಲ್ಲಿ ನಡೆಸುವ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಯಿತು.
ಅದಲ್ಲದೆ ಕಿರಿಯ ಪ್ರಾಥಮಿಕ ಶಾಲೆಗಳು, ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಮಧ್ಯಾಹ್ನದ ಊಟ ದೊಂದಿಗೆ ಶಾಲೆಯನ್ನು ತೆರೆಯುವುದು ಕೂಡ ಸೂಕ್ತ ವಾಗಿರುವ ಬಗ್ಗೆ ಕೂಡ ಚರ್ಚೆಗಳು ನಡೆಯಿತು.
ಶಾಲೆಗಳನ್ನು ತೆರೆಯುವುದಾದರೆ ಮಾಸ್ಕ್, ಸಾನಿಟೈ ಜರ್ ,ಶುದ್ಧ ಬಿಸಿನೀರು ಮುಂತಾದ ಆವಶ್ಯಕ ಮುಂಜಾಗರೂಕತೆ ಯನ್ನು ಸ್ಥಳೀಯ ಪಂಚಾಯತ್ ಗಳ ಸಹಕಾರ ,ಪೋಷಕರ ಮತ್ತು ಎಸ್ಡಿಎಂಸಿ ಯವರ ಸಹಕಾರದೊಂದಿಗೆ ನಡೆಸುವ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಗಿತ್ತು.
ಇದರ ಬಗ್ಗೆ ಸರಕಾರಕ್ಕೆ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕರಿಗೆ ಮನವಿಯನ್ನು ಕೊಡುವುದು ಎಂದು ತೀರ್ಮಾನಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಯಿತು. ಅಧ್ಯಕ್ಷರಾಗಿ ಎಸ್ ಎಂ ಇಸ್ಮಾಯಿಲ್
, ಉಪಾಧ್ಯಕ್ಷರಾಗಿ ಪ್ರಮೀಳಾ ಎಂ
(www.vk news.in) ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷರಾದ ಮೊಯಿದಿನ್ ಕುಟ್ಟಿ, ಕಾರವಾರ ಜಿಲ್ಲಾಧ್ಯಕ್ಷ ಶಾಂತಿ ಬಾಯಿ ,ಬೀರಣ್ಣ ನಾಯಕ್ ಮತ್ತು ತಂಡ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಾನ್ಯ ಬಸವರಾಜ್ ಗುರಿಕಾರ್ ಪರವಾಗಿ ಅಂಕೋಲಾ, ಕಾರವಾರದಲ್ಲಿ ಮತದಾರರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು,
ಬೆಳಿಗ್ಗೆ ಅಂಕೋಲಾ ದಲ್ಲಿ ರಾಜ್ಯಾಧ್ಯಕ್ಷ ರ ನೇತೃತ್ವದಲ್ಲಿ ಸುದ್ದಿಗೋಷ್ಠಿ ಕರೆದು ಬಸವರಾಜ್ ಗುರಿಕಾರ್ ಪರ ಮತಯಾಚನೆ ಮಾಡುವ ಅಗತ್ಯತೆ ಬಗ್ಗೆ ,ಹಾಗೂ ಸರಕಾರಿ ಶಾಲೆಗಳ ಉಳಿಯುವಿಕೆಯ ಅಗತ್ಯತೆ ಹಾಗೂ ಅದಕ್ಕಾಗಿ ಈ ಅಭ್ಯರ್ಥಿಯು ವಿಜಯಿ ಯಾಗುವುದರ ಅನಿವಾರ್ಯತೆ ಯನ್ನು ವಿವರಿಸಿದರು, ಸುದ್ದಿಗೋಷ್ಠಿಯಲ್ಲಿ ಬೀರನ್ನ ನಾಯಕ್ ಸ್ವಾಗತವನ್ನು ಮಾಡಿ ಉಡುಪಿ ಜಿಲ್ಲೆಯ ಜ್ಯೋತಿ ಶೆಟ್ಟಿ ಧನ್ಯವಾದ ಅರ್ಪಿಸಿದರು, ಕೆರಾಘವೇಂದ್ರ ಗಾಣಿಗ ಮತ್ತು ಹರೀಶ್. ಉಪಸ್ಥಿತರಿದ್ದರು.
ಸುದ್ದಿ ಗೋಷ್ಠಿ ಯ ನಂತರ ಅಂಕೋಲಾ ದಲ್ಲಿ ಹಲವು ಕಾಲೇಜುಗಳಿಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು.
ಅಂಕೋಲಾ ದಿಂದ ಕಾರವಾರಕ್ಕೆ ಭೇಟಿ ಕೊಟ್ಟ ರಾಜ್ಯಾಧ್ಯಕ್ಷರ ತಂಡ ಶಾಂತಿ ಬಾಯಿ ಯವರೊಂಡಿಗೆ ಕಾರವಾರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ರಾಘು ನಾಯ್ಕ್ ರವರನ್ನು ಭೇಟಿಯಾಗಿ ಅವರೊಂದಿಗೆ ಅವರ ಸಹಕಾರವನ್ನು ಕೋರಿದೆವು.
ಅಲ್ಲಿಂದ ಸರಕಾರಿ ಪಾಲಿಟೆಕ್ನಿಕ್
ಮತ್ತು ಶಿವಾಜಿ ಕಾಲೇಜು ಕಾರವಾರದಲ್ಲಿ
ಅಲ್ಲಿಯ ಶಿಕ್ಷಕ ವೃಂದದ ಸಹಕಾರವನ್ನು ಮತ್ತು ನಮಗೆ ಬಸವರಾಜ್ ಗುರಿಕಾರ್ ರಂತಹ ಅಭ್ಯರ್ಥಿ ಗಳ ಆವಶ್ಯಕತೆ ಯ ಬಗ್ಗೆ ವಿವರಿಸಿ ಸಹಕಾರ ಮತ್ತು ಮತದಾನ ಮಾಡುವಂತೆ ವಿನಂತಿಸ ಲಾಯಿತು.
ಕೊನೆಗೆ ಕಾರವಾರದ ಪತ್ರಿಕಾ ಭವನದಲ್ಲಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ,ವಿದ್ಯಾರ್ಥಿ ಒಕ್ಕೂಟದ ಅದ್ಯಕ್ಷರು ಮತ್ತು ಎಸ್ಡಿಎಂಸಿ ಸಿ ಎಫ್ ತಂಡವು ಸುದ್ದಿಗೋಷ್ಠಿಯನ್ನು ಕರೆದು ಸರಕಾರಿ ಶಾಲೆಗಳ ಸಬಲೀಕರಣ ಕ್ಕಾಗಿ ಮಾನ್ಯ ಪಶ್ಚಿಮ ಪದವೀಧರ ಕ್ಷೇತ್ರ ಅಭ್ಯರ್ಥಿ ಹಲವು ವಿಷಯಗಳ ಬಗ್ಗೆ ತಮ್ಮ ಅಜೆಂಡಾ ದಲ್ಲಿ ಹೆಸರಿಸಿದ್ದು ಅದರಲ್ಲಿ ಸಬಲೀಕರಣ ಸಮಿತಿಯ ವರದಿಯಲ್ಲಿ ರುವ ಹಲವು ವಿಷಯಗಳು,ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಶಾಲೆಗಳಲ್ಲಿ ಜಾರಿಗೊಳಿಸುವ ಬಗ್ಗೆ ಆಶ್ವಾಸನೆಯನ್ನು ಕೊಟ್ಟಿರುವುದರಿಂದ,ಮತ್ತು ಈಗಾಗಲೇ ಎಸ್ಡಿಎಂಸಿ ಸಮನ್ವಯ ವೇದಿಕೆಗೆ ಹಲವು ರೀತಿಯ ಸಲಹೆ ಸಹಕಾರಗಳನ್ನು ಕೊಟ್ಟಿರುವುದರಿಂದ , ಅದಲ್ಲದೆ ಅವರು ಪಕ್ಷಾತೀತ ಮತ್ತು ಪಕ್ಷೇತರ ಅಭ್ಯರ್ಥಿ ಆಗಿರುವ ಕಾರಣ ಸಮನ್ವಯ ವೇದಿಕೆಯು ಬೆಂಬಲವನ್ನು ಸೂಚಿಸುತ್ತಿದೆ.
ಅದೇ ರೀತಿ ಪದವೀಧರ ಮತದಾರರು ಪಕ್ಷವನ್ನು ಬಿಟ್ಟು ಚಿಂತಿಸಿ ರಾಜಕೀಯ ರಹಿತ ,ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಹೋರಾಟ ಮಾಡುತ್ತಿರುವ ಸಮರ್ಥ ನಾಯಕನಿಗೆ ಮತವನ್ನು ನೀಡಿ ವಿಜಯಿಸಬೇಕಾಗಿ ಅಪೇಕ್ಷಿಸಿದರು.
ಅದಲ್ಲದೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ರಾಘು ನಾಯ್ಕ್ ಮಾತನಾಡಿ ಈ ಸಲ ನಮ್ಮ ಮತ ಅರ್ಹ ಶಿಕ್ಷಣ ಪ್ರೇಮಿಗೆ ಕೊಡುತ್ತಿದ್ದು,ಅವರಿಂದ ಪದವೀಧರ ರ ಸಮಸ್ಯೆಗಳು ಖಂಡಿತವಾಗಿಯೂ ಪರಿಹಾರ ಆಗಬಹುದು, ಅವರು ನಮ್ಮ ದ್ವನಿಯಾಗಿ ವಿಧಾನ ಪರಿಷತ್ ನಲ್ಲಿ ಇರಬೇಕಾಗಿದೆ. ಅವರಿಗೆ ಎಲ್ಲಾ ಪದವೀದರ ಬಂದುಗಳು ಮತ ನೀಡಬೇಕಾಗಿ ಕೇಳಿಕೊಂಡು,ವಿದ್ಯಾರ್ಥಿ ಒಕ್ಕೂಟವು ಪೂರ್ಣ ಸಹಕಾರವನ್ನು ಕೊಡುತ್ತಿದೆ ಎಂದು ಹೇಳಿದರು.
ಶಾಂತಿ ಮೇಡಂ ರವರು ಸ್ವಾಗತ ಮಾಡಿ, ರಾಘವೇಂದ್ರ ಗಾಣಿಗರು ಧನ್ಯವಾದ ಸಮರ್ಪಿಸಿದರು, ಜ್ಯೋತಿ ಶೆಟ್ಟಿ ಮತ್ತು ಹರೀಶ್ ಕೆ ಉಪಸ್ಥಿತರಿದ್ದರು
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.