( ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ 19 ವಿಚಾರದಲ್ಲಿ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಾಗುತ್ತ ಸುದ್ದಿಗಾಗುತ್ತಿದ್ದ ಶಾಹಿದ್ ಅಫ್ರಿದಿ ಈಗ ಹೃದಯಗೆಲ್ಲುವಂತ ಕೆಲಸವನ್ನು ಮಾಡಿ ಎಲ್ಲರ ಮನ ಗೆದ್ದಿದ್ದಾರೆ .
ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಹಾಗು ಅಫ್ರಿದಿ ಆತ್ಮೀಯ ಸ್ನೇಹಿತರಾಗಿದ್ದು ಇದೀಗ ಈ ಸ್ನೇಹ ಮತ್ತೊಂದು ರೀತಿಯಲ್ಲಿ ಪಾಕ್ ನಲ್ಲಿರುವ ಹಿಂದೂಗಳ ನೆರವಿಗೆ ಸಹಕಾರಿಯಾಗಿದೆ . ಯುವರಾಜ್ ಸಿಂಗ್ ಫೌಂಡೇಶನ್ ಹಣವನ್ನು ಬಳಸಿರುವ ಅಫ್ರಿದಿ ಕರಾಚಿಯಲ್ಲಿರುವ ಲಕ್ಷ್ಮಿ ನಾರಾಯಣ್ ಮಂದಿರದಲ್ಲಿ ಅನೇಕ ಹಿಂದೂ ಕುಟುಂಬಗಳಿಗೆ ಪಡಿತರವನ್ನು ವಿತರಿಸಿದ್ದಾರೆ .
(ವಿಶ್ವ ಕನ್ನಡಿಗ ನ್ಯೂಸ್) ಕೊರೊನ ವೈರಸ್ ವಿಚಾರವಾಗಿ ಶ್ವತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೈನಾ ಮೂಲದ ಅಮೇರಿಕನ್ ಪತ್ರಕರ್ತೆಗೆ ಖಡಕ್ ಉತ್ತರ ನೀಡಿದ್ದಾರೆ .
“ನೀವು ಅಮೆರಿಕದಲ್ಲಿ ಎಲ್ಲವು ಸಹಜವಾಗೇ ಇದೆ ಎಂದು ಹೇಳುತ್ತಾ ಬಂದಿದ್ದೀರಿ ಆದರೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ ಇದಕ್ಕೆ ಕಾರಣವೇನು “ಎಂದು ಪತ್ರಕರ್ತೆ ಡೊನಾಲ್ಡ್ ಟ್ರಂಪ್ ಅವರನ್ನು ಕೇಳಿದರು ಇದಕ್ಕೆ ಖಡಕ್ ಉತ್ತರ ನೀಡಿದ ಟ್ರಂಪ್ “ಜನ ಅಮೆರಿಕವಲ್ಲದೆ ವಿಶ್ವದ ಎಲ್ಲೆಡೆ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ , ನೀವು ಈಗ ಕೇಳಿದ ಪ್ರಶ್ನೆ ಬಹುಶಃ ನೀವು ಚೀನಾವನ್ನು ಕೇಳಬೇಕಾದ ಪ್ರಶ್ನೆಯಾಗಿದೆ – ನನ್ನನ್ನು ಕೇಳಬೇಡಿ ಚೀನಾವನ್ನು ಆ ಪ್ರಶ್ನೆಯನ್ನು ಕೇಳಿ” ಎಂದು ಎದಿರೇಟು ನೀಡಿದರು .
( ವಿಶ್ವ ಕನ್ನಡಿಗ ನ್ಯೂಸ್): ನವದೆಹಲಿ , ಮೇ 12 (ಎಎನ್ಐ): ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ನ ಮತ್ತೊಂದು ಸಂಭವನೀಯ ವಿಸ್ತರಣೆಯ ಬಗ್ಗೆ ಸುಳಿವು ನೀಡಿದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
( ವಿಶ್ವ ಕನ್ನಡಿಗ ನ್ಯೂಸ್): ಕೊರೊನವೈರಸ್ ಅಬ್ಬರಕ್ಕೆ ವಿಶ್ವದ ಆರ್ಥಿಕತೆಯೇ ಅಲ್ಲೋಲ ಕಲ್ಲೋಲವಾಗಿದ್ದು ವಿಶ್ವಾದ್ಯಂತ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಈಗಾಗಲೇ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ . ಜೊತೆಗೆ ವಿದೇಶದಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ಕೂಡ ಅತಂತ್ರರಾಗಿದ್ದಾರೆ .ಇದರ ನಡುವೆ ಹಳ್ಳಿಗಳಲ್ಲಿ ಆಸ್ತಿ ಹೊಂದಿದ ಅನೇಕರು ವಿದೇಶ ಪಟ್ಟಣಗಳ ಕೆಲಸವನ್ನು ಬಿಟ್ಟು ತಮ್ಮ ತಮ್ಮ ಊರಿಗೆ ಬಂದು ಕೃಷಿ , ಹೈನುಗಾರಿಕೆ ಮಾಡಲು ಮನಸ್ಸುಮಾಡಿದ್ದು ಇನ್ನು ಕೆಲವರು ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ .ಇದರಿಂದ ಹಳ್ಳಿಗಳಲ್ಲಿ ಹೊಸ ಹುಮ್ಮಸ್ಸು ಮೂಡತೊಡಗಿದೆ .
ಒಂದು ಕಾಲದಲ್ಲಿ ಕೃಷಿ ಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಯುವ ಜನಾಂಗ ಈಗ ಮನಸ್ಸು ಬದಲಾಗಿಸಿ ಕೃಷಿಯತ್ತ ಚಿತ್ತ ಇಟ್ಟಿರುವುದು ಒಳ್ಳೆಯ ವಿಚಾರ .ಕುಟುಂಬ ಪ್ರೀತಿಯಿಂದ ವಂಚಿತರಾಗಿದ್ದ ಹಲವರು ಕೃಷಿ ಜೊತೆ ಅದನ್ನು ಇನ್ನು ಪಡೆಯಲಿದ್ದಾರೆ . ಕಳೆದ ಕೆಲವು ವರ್ಷಗಳಿಂದ ಅಮೇರಿಕ ಸೇರಿದಂತೆ ಹಲವು ರಾಷ್ಟ್ರಗಳಿಂದ ಮರಳಿ ಬಂದು ಕೃಷಿ ಮಾಡಿದ ಅನೇಕ ಯುವಕರ ಉದಾಹರಣೆ ನಮ್ಮ ಮುಂದಿರುವಾಗ ಕೊರೊನ ನಂತರ ಇದರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ .
( ವಿಶ್ವ ಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನ ಅಬ್ಬರ ಜೋರಾಗುತ್ತಿದ್ದು ಫಸ್ಟ್ ನ್ಯೂರೋ ಕಂಟಕವಾಗಿ ಪರಿಣಮಿಸುತ್ತಿದೆ .ಇಂದು ಬಂಟ್ವಾಳದಲ್ಲಿ ಮತ್ತೆ ಮೂರು ಜನರಿಗೆ ಕೊರೋನಾ ಪಾಸಿಟಿವ್ ಆಗಿದ್ದು ಇದು ಫಸ್ಟ್ ನ್ಯೂರೋ ಕೃಪೆಯಾಗಿದೆ ಇಂದು ಪತ್ತೆಯಾದ ಪ್ರಕರಣ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
(ವಿಶ್ವ ಕನ್ನಡಿಗ ನ್ಯೂಸ್ )ಕೊಲ್ಲಿ ರಾಷ್ಟ್ರದಿಂದ ಸ್ಥಳಾಂತರಿಸುವ ವಿಮಾನವಾಗಿ ಕರ್ನಾಟಕಕ್ಕೆ ಮೇ 14 ರಂದು ಮೊದಲ ವಿಮಾನ ಹಾರಾಟ ನಡೆಸಲಿದೆ .
ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 814 ಸಂಜೆ 4.10 ಕ್ಕೆ ದುಬೈನಿಂದ ಮಂಗಳೂರಿಗೆ ಹಾರಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಇದು ದೇಶದ ಕನ್ನಡಿಗರಿಗೆ ದೊಡ್ಡ ಪರಿಹಾರವಾಗಿದೆ ಎಂದು ಯುಎಇ ಅಧ್ಯಕ್ಷ ಕರ್ನಾಟಕ ಎನ್ಆರ್ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
(ವಿಶ್ವ ಕನ್ನಡಿಗ ನ್ಯೂಸ್) ಕಳೆದ ಎಂಟು ವರ್ಷದಿಂದ ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಉಗ್ರ ರಿಯಾಜ್ ನಾಯ್ಕೂ ಅವನನ್ನ ಎರಡು ದಿನಗಳ ಹಿಂದೆ ವಿಶೇಷ ಭದ್ರತಾ ಪಡೆಯ ಕಮಾಂಡೋಗಳು ಆತನ ಹುಟ್ಟೂರಲ್ಲೇ ಏನ್ ಕೌಂಟರ್ ಮಾಡಿ ಕೊಂದು ಹಾಕಿದೆ .ಇದು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ದೃಷ್ಟಿಯಲ್ಲಿ ಭಾರತೀಯ ಪಡೆಗಳ ದೊಡ್ಡ ಯಶಸ್ಸು ಎಂದು ಪರಿಣಿತರು ಹೇಳಿದ್ದಾರೆ .
ಪಾಕಿಸ್ತಾನದ ಹಿಜ್ಬುಲ್ ಕಮಾಂಡರ್ ರಿಯಾಜ್ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವಲ್ಲಿ ಮಹತ್ವದ ಕೆಲಸಗಳನ್ನು ಮಾಡುತ್ತಿದ್ದ ಹಾಗು ಸಾಕಷ್ಟು ಯುವಕರನ್ನು ಸೆಳೆದುಕೊಂಡಿದ್ದ .ಈತನ ಹತ್ಯೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದ ಸೇನಾಪಡೆ ಕೊನೆಗು ಯಶಸ್ವಿಯಾಗಿದೆ .
( ವಿಶ್ವ ಕನ್ನಡಿಗ ನ್ಯೂಸ್): ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ದೇಶಗಳು ಪ್ರಯತ್ನ ಪಡುತ್ತಿದ್ದರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) 2021 ರ ಅಂತ್ಯದ ಮೊದಲು ನಾವು ಲಸಿಕೆ ಪಡೆಯುವ ಸಾಧ್ಯತೆಯಿಲ್ಲ ಎಂದು ಎಚ್ಚರಿಸಿದೆ.
ಯುಎಸ್ನ ಮೂರು ದೊಡ್ಡ ಛೆ ಷಧೀಯ ಕಂಪನಿಗಳು – ಇನೋವಿಯೊ ಮಾಡರ್ನಾ ಮತ್ತು ಫಿಜರ್ – ಈಗಾಗಲೇ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿವೆ ಇದು ಲಸಿಕೆ ಅಭಿವೃದ್ಧಿಪಡಿಸುವ ಮೊದಲ ಹಂತವಾಗಿ ಕಂಡುಬರುತ್ತದೆ. ಯುಕೆ ನಲ್ಲಿ ಸರ್ಕಾರದಿಂದ ಬೆಂಬಲಿತವಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಶರತ್ಕಾಲದ ವೇಳೆಗೆ ಲಸಿಕೆ ತಯಾರಿಸುವ ಗುರಿ ಹೊಂದಿದ್ದಾರೆಂದು ಹೇಳಿದ್ದಾರೆ . ಆದರೆ ಯಾವುದೇ ಪ್ರಯತ್ನ ಕೂಡ ಅತಿ ಶೀಘ್ರದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಂದು ಹೇಳಿದೆ
(ವಿಶ್ವ ಕನ್ನಡಿಗ ನ್ಯೂಸ್) ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ತಮ್ಮ ಆರ್ಥಿಕತೆಯನ್ನು ಪುನಃ ತೆರೆಯುತ್ತಿರುವ ರಾಷ್ಟ್ರಗಳು ತಪ್ಪು ಮಾಡುತ್ತಿವೆ ಎಂದು ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಬುಧವಾರ ಹೇಳಿದ್ದಾರೆ. ಲಕ್ಡೌನ್ ಸಡಿಲಿಕೆ ಮಾಡಿ ನಿಮ್ಮ ಆರ್ಥಿಕತೆಯನ್ನು ಕಾಪಾಡಬಹುದು ಆದರೆ ಸಾಕಷ್ಟು ಜೀವಗಳು ಬಲಿಯಾಗಲಿವೆ ಎಂದು ಕ್ಯೂಮೋ ಹೇಳಿದ್ದಾರೆ.
ಕೊರೊನ ನ್ಯೂಯಾರ್ಕ್ ನಲ್ಲಿ ಸಾಕಷ್ಟು ಸಾವು ನೋವುಗಳನ್ನು ಮಾಡಿದೆ .ಇದೀಗ ನ್ಯೂಯಾರ್ಕ್ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದರು ಅಮೇರಿಕಾದ ಇತರ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ .ಇದು ಲಕ್ಡೌನ್ ಸಡಿಲಿಕೆಯ ಪರಿಣಾಮ ಎಂದು ಕ್ಯೂಮೋ ಹೇಳಿದ್ದಾರೆ .
(ವಿಶ್ವ ಕನ್ನಡಿಗ ನ್ಯೂಸ್ ): ಕೊರೊನ ವಿರುದ್ಧ ಜಗತ್ತು ಒಂದಾಗಿ ಹೊರಡುವ ಅಗತ್ಯವಿದೆ .ನಾವೆಲ್ಲರು ಒಗ್ಗಟ್ಟನ್ನು ತೋರಿಸಿ ಕೊರೊನ ವಿರುದ್ಧ ಹೋರಾಡಬೇಕು , ಭಯೋತ್ಪಾದನೆ ಹಾಗು ಫೇಕ್ ನ್ಯೂಸ್ ನಮಗೆ ಮಾರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಹೇಳಿದ್ದಾರೆ . ಕೆಲವರು ಫೇಕ್ ಸುದ್ದಿಗಳನ್ನು ಹಾಗು ವಿಡಿಯೋಗಳನ್ನು ಸೃಷ್ಟಿ ಮಾಡಿ ಸಮಾಜ ಹಾಗು ಪಂಗಡಗಳನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನರೇಂದ್ರ ಮೋದಿ ಅಲಿಪ್ತ ಚಳವಳಿ (ನಾಮ್) ಶೃಂಗದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿದ್ದಾರೆ .
ಪ್ರಧಾನಿ ಮೋದಿ ಹೇಳಿಕೆ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಹೇಳಿದ ಹೇಳಿಕೆಯಾಗಿತ್ತು .ಜಗತ್ತು ಕೊರೊನ ವಿರುದ್ಧ ಹೋರಾಡುತ್ತಿದ್ದರೆ ಕೆಲವರು ಭಯೋತ್ಪಾದನೆ, ಸುಳ್ಳು ಸುದ್ದಿ, ತಿರುಚಿದ ವೀಡಿಯೋ ಮಾಡಿ ಹಂಚುತ್ತಿದ್ದು ಇದು ಒಂದು ವೈರಸ್ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು .
ನಮ್ಮ ಜಾಲತಾಣದ ಇನ್ಸಾಗ್ರಾಂ,ಪೇಜ್ Follow ಮಾಡಿ ಮತ್ತು ಶೇರ್ ಮಾಡಿ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆಯಿರಿ
ನಮ್ಮ ಪೇಜ್ ನ್ನು Follow ಮಾಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ...
https://www.instagram.com/vknews_media/
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.