ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಜಾತ್ಯಾತೀತ ಸಾರ್ವಭೌಮ, ಭಾತೃತ್ವ,ಪ್ರಜಾಪ್ರಭುತ್ವ, ಸಹೋದರತ್ವ ಅದೇ ರೀತಿಯಲ್ಲಾಗಿ ಪರಸ್ಪರ ಸ್ನೇಹ – ಸೌಹಾರ್ದಯುತ ಜೀವನದ ವಿನಿಮಯದ ಮೂಲಕ ಒಗ್ಗಟ್ಟನ್ನೂ, ನಾಡಿನ ಅಖಂಡತೆಯನ್ನೂ ಎತ್ತಿ ಹಿಡಿದ ಸುರ-ಸುಂದರವಾದ ಹಾಗೂ ವ್ಯಕ್ತಿ ಸ್ವಾತಂತ್ರ್ಯ ,ಧಾರ್ಮಿಕವಾಗಿಯೂ, ಶೈಕ್ಷಣಿಕವಾಗಿಯೂ ತನ್ನ ಹಕ್ಕನ್ನು ನ್ಯಾಯಯುತವಾಗಿ ಪಡೆದು ಕೊಳ್ಳಲು ಅವಕಾಶವಿರುವಂತಹ ನೆಲೆಯಾಗಿದೆ ಭಾರತ ಬೀಡು.
ಇಲ್ಲಿ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪರಸ್ಪರ ವಿನಿಮಯ ಮಾಡುವಂತಹ ಒಂದು ಪ್ರದೇಶವಾಗಿದೆ ಭಾರತ. ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವಂತಹ ಸಂವಿಧಾನವಾಗಿದೆ ಭಾರತದ ಸಂವಿಧಾನ, ಕಾಲ ಪ್ರಸಕ್ತವಾಗಿ ಭಾರತದಲ್ಲಿ ಚರ್ಚಿಸಲ್ಪಡುವಂತಹ ಒಂದು ವಿಷಯವಾಗಿದೆ ಮದರಸ. ಇತ್ತೀಚೆಗೆ ಜಿಲ್ಲೆಯ ಕೆಲವು ನಾಯಕರು ಶೀಘ್ರ ರಾಜಕೀಯ ಅಧಿಕಾರ ಹಪಿಸುತ್ತಾ ಸಂಘೀ ಪ್ರೇರಿತ ಚೀಟಿ ಹೇಳಿಕೆಗಳ ಭರದಲ್ಲಿ ಮದರಸಗಳ ಬೋಧನೆಯ ಬಗ್ಗೆ ಸಾರ್ವಜನಿಕ ಗೊಂದಲ ಸೃಷ್ಟಿಸಿ ಮತೀಯ ದ್ರುವೀಕರಣಕ್ಕೆ ಪ್ರಯತ್ನಿಸುತ್ತಿರುವುದು ಖಂಡನೀಯ. ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ಸಮೂಜೋ ನೈತಿಕತೆಯನ್ನು ಸಂರಕ್ಷಿಸುವ ಕೇಂದ್ರಗಳಾಗಿವೆ. ಆರೋಗ್ಯಕರ ಸಮಾಜ ನಿರ್ಮಾಣ ಮದರಸದ ಮೂಲ ಉದ್ದೇಶವಾಗಿದೆ. ಮಾದರಿ ನಾಗರೀಕರನ್ನು ರೂಪಿಸುವ ಶೈಕ್ಷಣಿಕ ಸಂಸ್ಥೆಗಳಾಗಿ ಕಾರ್ಯಚರಿಸುತ್ತಿದೆ.
ಪ್ರವಾದಿಗಳು,ದಾರ್ಶನಿಕರು, ಸಂತರು ಗತ ಕಾಲಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಒಂದೇಮತ, ಒಂದೇಕುಲ, ಒಂದೇ ದೇವರು ಎಂಬ ಘೋಷ ವಾಕ್ಯದ ದೇವ ನಂಬಿಕೆಯನ್ನು ಬೋಧಿಸುವ ಕೇಂದ್ರಗಳಾಗಿವೆ. ಮದರಸವೆಂಬುದು ಭಯೋತ್ಪಾದನೆಯ ಕೇಂದ್ರವಾಗಿದೆ ಎಂದು ವಿಮರ್ಶಿಸುವಂತಹ ಕಾಲಘಟ್ಟದಲ್ಲಾಗಿದೆ ನಾವು ಜೀವಿಸುತ್ತಿರುವುದು. ಮದರಸ ಎಂದರೆ ಧಾರ್ಮಿಕ ವಿಧ್ಯಾಭ್ಯಾಸವನ್ನು ಕಲಿಸುವಂತಹ ಅತ್ಯುನ್ನತ ಕೇಂದ್ರವಾಗಿದೆ. ಇಸ್ಲಾಮಿನ ಪುಣ್ಯ ಗ್ರಂಥವನ್ನು ಬೋಧಿಸುವಲ್ಲಿ ಮೊದಲ ಪದವಾಗಿದೆ اقرء, ನೀನು ಓದು ಎಂಬುವುದು. ಮದರಸಗಳಲ್ಲಿ ವ್ಯಕ್ತಿ ವಿಕಸನ ಮತ್ತು ಅತ್ಯುತ್ತಮ ಗುಣನಡತೆ, ಶುದ್ಧ ಜೀವನ ಮತ್ತು ಸರ್ವಧರ್ಮ ಸಮನ್ವಯ ಎಂಬ ವಿಷಯಗಳನ್ನಾಗಿದೆ ಬೋಧಿಸುವುದು. ಮದರಸದ ಇತಿಹಾಸಕ್ಕೆ ಕನ್ನೋಡಿಸುವುದಾದರೆ ಜಗತ್ತಿನಲ್ಲಿ ಮೊದಲನೆಯದಾಗಿ 1472ರಲ್ಲಿ ಪ್ರಾರಂಭವಾಗಿದೆ. ಶಿಕ್ಷಣದ ಕೊರತೆಗಳು ಅತ್ಯಧಿಕವಾಗಿದೆ ಎಂದು ಮನದಟ್ಟು ಮಾಡಿಕೊಂಡು ತನ್ನ ಸ್ವಂತ ಸಂಪತ್ತಿನಿಂದ ಮುಹಮ್ಮದ್ ಗವಾನ್ ಬಹುಮನಿ ಸುಲ್ತಾನರ ಆಳ್ವಿಕೆಯ ಸಂದರ್ಭದಲ್ಲಿ ಬೀದರ್ ನಲ್ಲಿ ನಿರ್ಮಿಸಲಾಯಿತು. ಇವರು ಬಹುಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದರು. ಆ ಮದರಸಗಳಲ್ಲಿ ಎಲ್ಲಾ ರೀತಿಯ ಕಲಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಲಾಗಿತ್ತು. ತದನಂತರ ಮುಸ್ಲಿಂ ಉಲಮಾಗಳಿಗೆ ಮದರಸ ನಿರ್ಮಾಣದ ಬಗ್ಗೆ ಕರೆ ಕೊಟ್ಟಿದ್ದು ಶಾಹ್ ವಲಿಯುಲ್ಲಾಹಿ ದಹ್ಲವಿ ಆಗಿದ್ದಾರೆ. ಇವರ ನಂತರ ಈ ಮದರಸ ಪಾರಂಪರ್ಯವನ್ನು ಇವರ ಅನುಯಾಯಿಗಳಾದ ಶಾಹ್ ಅಬ್ದುಲ್ ಅಝೀಝ್ ದಹ್ಲವಿ ಮತ್ತು ಶಾಹ್ ಮುಹದ್ದಿಸ್ ಇಸ್ಮಾಯಿಲ್ ದಹ್ಲವಿಯಂತವರು ಮುಂದುವರಿಸಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲಾ ರೀತಿಯ ಚರ್ಚೆಗಳು ಮದರಸಗಳಲ್ಲಿ ನಡೆಯುತ್ತಿದ್ದವು. ಯಾವುದೇ ಬೇಧ ಭಾವವಿಲ್ಲದೆ ಎಲ್ಲಾ ಚರ್ಚೆಗಳು ನಡೆಸಿ ಭಾರತದ ಸ್ವಾತಂತ್ರಕ್ಕಾಗಿ ಧ್ವನಿ ಎತ್ತಿದವರು ಮತ್ತು ಹೋರಾಡಿದವರಾಗಿದ್ದಾರೆ. ಭಾರತದ ಮುಸಲ್ಮಾನರೊಡನೆ ‘ಜಿಹಾದ್’ ನಡೆಸಬೇಕೆಂದು ಫತ್ವಾ ಕೊಟ್ಟದ್ದು ಇಮಾಮೆ ಹುರಿಯ್ಯಾ ಅಬ್ದುಲ್ ಅಝೀಝ್ ದಾಲವಿಯಾಗಿದ್ದಾರೆ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ 50 ಲಕ್ಷದಷ್ಟು ಮುಸ್ಲಿಂ ವಿದ್ವಾಂಸರನ್ನು ಗಲ್ಲಿಗೇರಿಸಿದ್ದಾರೆ. 1920 ರಲ್ಲಿ 500 ಮುಸ್ಲಿಂ ಉಲಮಾಗಳು ಬ್ರಿಟೀಷರ ಆಡಳಿತವು ನಿಷಿದ್ಧವಾಗಿದೆ ಎಂದು ಫತ್ವಾ ನೀಡಿದರು. ಇದೆಲ್ಲವೂ ಮದರಸಗಳಲ್ಲಿ ಚರ್ಚೆ ಮಾಡಿ ಹಾಗೂ ಮದರಸಗಳಲ್ಲಿ ಕಲಿತು ಬಂದಂತಹ ಎಲ್ಲಾ ಉಲಮಾಗಳಾಗಿದೆ. ಮದರಸವು ಒಂದು ತೆರೆದ ಪುಸ್ತಕವಾಗಿದೆ. ಯಾವುದೇ ವ್ಯಕ್ತಿಗೂ ಬಂದು ನೋಡಬಹುದಾಗಿದೆ. ಬೇರೆ ದೇವರನ್ನು ಆರಾಧಿಸುವವರನ್ನುಕೊಲ್ಲಬೇಕು ಎಂಬ ಹಲವಾರು ಆರೋಪಗಳು ಇದರ ಕುರಿತು ಕೇಳಿ ಬರುತ್ತಿದೆ. ಮದರಸಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಯಾವುದೇ ಭೋಧನೆಗಳಿಲ್ಲ ಎಂಬ ಆರೋಪಗಳು ಉದಯಿಸುತ್ತಿದೆ. ಮದರಸದ ಶಿಕ್ಷಣವನ್ನು ಅವಲೋಕಿಸುವುದಾದರೆ 3ನೇ ತರಗತಿಯ ಪುಟ್ಟ ಮಕ್ಕಳಿಗೆ ಭೋಧಿಸುವುದು حب الوطن من الإيمان ಎಂಬುದಾಗಿದೆ. (ರಾಜ್ಯವನ್ನು ಪ್ರೀತಿಸುವುದು ಈಮಾನಿನ ಭಾಗವಾಗಿದೆ.)ಇದೇ ರೀತಿ 7ನೇ ತರಗತಿಯಲ್ಲಿ استقلال الهندي ಎಂಬ ಗದ್ಯವು ಹೊಂದಿದೆ. ಇದರಲ್ಲಿ ನೆಹರು,ಗಾಂಧೀಜಿ,ಅಬುಲ್ ಕಲಾಮ್ ಆಝಾದ್ ಮತ್ತು ಭಗತ್ ಸಿಂಗ್’ರ ಕುರಿತು ಅವಲೋಕಿಸುತ್ತದೆ ಮತ್ತು ಮದರಸದಲ್ಲಿ ನಿನ್ನ ನೆರೆಹೊರೆಯವನು ಅಮುಸ್ಲಿಮನಾದರೂ ಗೌರವಿಸು ಎಂದಾಗಿದೆ ಭೋದಿಸುವುದು. ಉತ್ತರ ಪ್ರದೇಶದ ಪುಟ್ಟ ಮಕ್ಕಳು ಮದರಸ ಪ್ರಾರಂಭವಾಗುವ ಸಮಯದಲ್ಲಿ ಪ್ರಾರ್ಥಿಸುವ ಪ್ರಾರ್ಥನೆಯಾಗಿದೆ ಓ..ಖುದಾ ಮೇರಾ ಭಾರತ್ ಸಲಾಮತ್ ರಹೇ…ಇದರ ಅರ್ಥ ಓ ದೇವರೇ…ನನ್ನ ಭಾರತವನ್ನು ಸಂರಕ್ಷಿಸು ಎಂದಾಗಿದೆ. ಅದೇ ರೀತಿ ಎಲ್ಲಾ ಮದರಸಗಳಲ್ಲಿ ಮಸೀದಿ ಆವರಣದಲ್ಲಿ ಬಹಳ ಅದ್ಧೂರಿಯಾಗಿ ವಿಜ್ರಂಭಿತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಮದರಸವು ಭ್ರಷ್ಟಾಚಾರ, ಕೋಮುದ್ವೇಷವನ್ನು ಬೋಧಿಸುವುದಿಲ್ಲ,ಬದಲಾಗಿ ವ್ಯಕ್ತಿ ವಿಕಸನ, ಒಳ್ಳೆಯ ನಡವಳಿಕೆ, ದೇಶ ಪ್ರೇಮ, ಒಳ್ಳೆಯ ಗುಣ ನಡತೆಯನ್ನಾಗಿದೆ ಬೋಧಿಸುವುದು.
✍🏻 ಮುಹಮ್ಮದ್ ಆರಿಫ್ ಚಾರ್ಮಾಡಿ. _ವಿದ್ಯಾರ್ಥಿ ಜಾಮಿಯ ನೂರಿಯ ಅರೇಬಿಯ್ಯ ಫೈಝಾಬಾದ್_
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.