ದುಬೈ(ವಿಶ್ವಕನ್ನಡಿಗ ನ್ಯೂಸ್): ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಇಷ್ಕ್ ಇ ಮಿಲಾದ್ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ 21-10-2022 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಬೈ ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಜನಾಬ್ ಶೆರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯದರ್ಶಿ ಅಝೀಝ್ ಸೋಂಪಾಡಿ ಅವರು ನೆರೆದವರನ್ನು ಸ್ವಾಗತಿಸಿದರು.
ಸಮಿತಿಯ ಗೌರವಾಧ್ಯಕ್ಷರಾದ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಅವರ ನೇತೃತ್ವದಲ್ಲಿ ನಡೆದ ಮೌಲಿದ್ ಮಜ್ಲಿಸ್ ಬಳಿಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಮೀದ್ ಮುಸ್ಲಿಯಾರ್ ನೀರ್ಕಜೆ ಅವರು ಪ್ರವಾದಿ ಸಂದೇಶ ಭಾಷಣವನ್ನು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಗೋಲ್ಡನ್ ವಿಸಾ ಪಡೆದ ಯುವ ಉದ್ಯಮಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಉಪಾಧ್ಯಕ್ಷರು ಮತ್ತು ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ ಚೀಫ್ ಪೇಟ್ರೊನ್ ಜನಾಬ್ ಯೂಸುಫ್ ಈಶ್ವರಮಂಗಲ ಅವರ ಸಾಮಾಜಿಕ ಕಳಕಳಿಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 2016 ರಿಂದ ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ಇದೀಗ ಓಮಾನ್ ಸಲಾಲಾಗೆ ಕಂಪೆನಿಯ ಪದೋನ್ನತಿ ವರ್ಗಾವಣೆಯಾಗುವ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರನ್ನು ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಮತ್ತು ದೀರ್ಘ ಕಾಲದ ನಿಶ್ಕಲಂಕ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶೆರೀಫ್ ಕಾವು, ಉದ್ಯಮಿ ಅಶ್ರಫ್ ಶಾ ಮಾಂತೂರು, ದುಬೈ ಸಮಿತಿಯ ಅಧ್ಯಕ್ಷರಾದ ಅನ್ವರ್ ಮಾಣಿಲ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಂಗಳಾಡಿ, ಅಬ್ದುಲ್ ರಝಾಕ್ ಸೋಂಪಾಡಿ, ಅಝರ್ ಹಂಡೆಲ್ ಅವರು ಸಂಧರ್ಭೂಚಿತವಾಗಿ ಮಾತನಾಡಿ ಯೂಸುಫ್ ಈಶ್ವರಮಂಗಲ ಮತ್ತು ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಮಣಿಲ, ಅಬ್ಬಾಸ್ ಕೇಕುಡೆ, ಹೈದರ್ ಅಲಿ ಈಶ್ವರಮಂಗಲ, ಅಶ್ರಫ್ ಆರ್ತಿಕೆರೆ, ನವಾಝ್ ಬಿಸಿ ರೋಡ್, ಮೂಸ ಕುಂಞಿ ಕಾವು, ಶೆರೀಫ್ ಕೊಡಿನೀರು, ನಿಝಾಮ್ ತೋಡಾರ್, ಆಸಿಫ್ ಮರೀಲು, ಜಾಬಿರ್ ಬಪ್ಪಲಿಗೆ, ಶಬೀರ್ ಫರಂಗಿಪೇಟೆ, ತಾಹಿರ್ ಹೆಂತಾರ್, ಸಾಬಿತ್ ಆತೂರು, ಉಮ್ಮರ್ ಇಂದುಮೂಲೆ ಮೊದಲಾದವರು ಉಪಸ್ಥಿತರಿದ್ದರು
ಅಬ್ದುಲ್ಲಾ ನಯೀಮಿ ಉಸ್ತಾದ್ ಅವರು ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.