ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ಬದರ್ ಜುಮಾ ಮಸ್ಜಿದ್ ಅರಂಬೂರಿನಲ್ಲಿ ಎಸ್ ಕೆ ಎಸ್ ಎಫ್ ಸುಳ್ಯ ಕ್ಲಸ್ಟರ್ ವತಿಯಿಂದ ನಡೆದ ಮಾದಕ ವ್ಯಸನದ ವಿರುದ್ಧದ ಯುವ ಜನ ಸಂಚಲನ ಕಾರ್ಯಕ್ರಮ “ದಾರಿ ತಪ್ಪುತ್ತಿರುವ ಯುವ ಜನಾಂಗದ ಆರೋಗ್ಯ ಕರ್ನಾಟಕಕ್ಕೆ ಯುವ ಜನ ಜಾಗೃತಿ” ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 35 ಕ್ಲಸ್ಟರ್ ಗಳಲ್ಲಿ ಏಕ ಕಾಲಕ್ಕೆ ನಡೆಸಿದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರು ಮಾತನಾಡುತ್ತಿದ್ದರು.
ಈ ರೀತಿಯ ಕೆಲಸ ಸಮಾಜಕ್ಕೆ ಮಾದರಿಯಾಗಿದ್ದು, ಇಂತಹಾ ಕಾರ್ಯಕ್ರಮ ಪ್ರತೀ ವಲಯ, ಗ್ರಾಮ ಮಟ್ಟದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಜನವರಿ 26ರ ಗಣರಾಜ್ಯೋತ್ಸವದಂದು ನಡೆಸುವ ಮಾನವಸರಪಳಿ, ಆಗಸ್ಟ್ 15ರ ಸ್ವಾತಂತ್ಯ ದಿನದಂದು ನಡೆಸುವ ಫ್ರೀಡಂ ಸ್ಕ್ವೇರ್, ತುರ್ತು ಸಂದರ್ಭದಲ್ಲಿ ಸ್ಪಂದಿಸುವ ವಿಖಾಯ, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಎಸ್ ಕೆ ಎಸ್ ಎಸ್ ಎಫ್ ನ ಕೆಲಸವನ್ನು ಶ್ಲಾಘನೀಯ ಎಂದು ಕೊಂಡಾಡಿದರು. ಪಾನಕ್ಕಾಡ್ ತಂಘಲ್ ನೇತೃತ್ವದ ಹಿರಿಯ ಸಾದತ್ ಗಳ ಮಾರ್ಗದರ್ಶನದಲ್ಲಿ ನಡೆಯುವಂತ ಕಾರ್ಯಕ್ರಮ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದಂದು ಹಮ್ಮಿ ದೇಶಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದ್ದಿರಿ ಎಂದು ಕಾರ್ಯಕ್ರಮ ವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಕ್ಲಸ್ಟರ್ ಎಸ್ ಕೆ ಎಸ್ ಎಸ್ ಎಫ್ ನ ಅಧ್ಯಕ್ಷರಾದ ಸಿದ್ದೀಕ್ ಜೀರ್ಮುಕ್ಕಿ ವಹಿಸಿದರೂ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ ದುವಾಶೀರ್ವಚನಗೈದರು. ಸ್ವಾದಿಕ್ ಕಲ್ಲೋಣಿ ಯವರು ಪ್ರಮೇಯ ಭಾಷಣದ ಮೂಲಕ ಇಂದಿನ ಯುವ ಪೀಳಿಗೆಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವಂತೆ ಮಾದಕ ದ್ರವ್ಯದ ಆಂದೋಲನವನ್ನು ಹಮ್ಮಿ ಕೊಂಡ ಸಂಘಟನೆಯ ಉದ್ದೇಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಬದರ್ ಜುಮಾ ಮಸೀದಿ ಅರಂಬೂರು ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್, ಸುನ್ನಿ ಮಹಲ್ ಫೆಡರೇಷನ್ ಅಧ್ಯಕ್ಷರಾದ ಹಮೀದ್ ಹಾಜಿ, ಪಂಚಾಯತ್ ಆಲೆಟ್ಟಿ ಅಭಿವೃದ್ಧಿ ಅಧಿಕಾರಿಯಾದ ಕೀರ್ತಿಪ್ರಸಾದ್ ಮಾತನಾಡಿ ಸಮಾಜದಲ್ಲಿ ಒಗ್ಗೂಡಿ ಬಾಳಬೇಕಾದ ನಾವು ಧರ್ಮದ ಹೆಸರಲ್ಲಿ ಕಚ್ಛಾಟ ಮಾಡದೇ ಸೌಹಾರ್ದತೆ ಯಲ್ಲಿ ಇರಲು ಆಹ್ವಾನ ನೀಡಿ ವಿದ್ಯಾರ್ಥಿಗಳು ಯುವಕರು ಮಾದಕ ವ್ಯಸನಕ್ಕೆ ಆಕರ್ಷಿತರಾಗುತ್ತಿದ್ದಾರೆ ಇದರ ಬಗ್ಗೆ ಜನ ಜಾಗೃತಿ ಮಾಡಿದ ಸಂಘಟನೆಯ ಸೇವೆಯನ್ನು ಶ್ಲಾಘಿಸಿದರು, ಕೇಂದ್ರ ಜುಮಾ ಮಸೀದಿ ಸುಳ್ಯ ಇದರ ಅಧ್ಯಕ್ಷರಾದ ಹಾಜಿ ಕೆ ಎಂ ಮುಸ್ತಫ ಮಾತನಾಡಿ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯ ಅನಿವಾರ್ಯವಾಗಿದೆ ಇದು ಸಂಘಟನೆಯಿಂದ ಮಾತ್ರ ಸಾದ್ಯವಾಗುದಿಲ್ಲ ಮಾದಕ ವ್ಯಸದ ನಿರ್ಮೂಲನಕ್ಕೆ ಸರ್ವರೂ ಒಗ್ಗೂಡಿದರೆ ಯಶಸ್ವಿಯಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ಬಾಪು ಸಾಹೇಬ್ ಮಾತನಾಡಿ ಅರಂಬೂರ್ ಅಲೆಟ್ಟಿಗ್ರಾಮದ ಸಮುದಾಯದ ಯುವಕರ ಸೇವೆ ದೇಶಕ್ಕೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಆರಂಬೂರು ಬದರ್ ಜುಮ ಮಸೀದಿಯ ಅಧ್ಯಕ್ಷರಾದ ಹಾಜಿ ಬಾಷಾ ಸಾಹೇಬ್, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷರಾದ ಹಮೀದ್ ಹಾಜಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ಸಂಶುದ್ದೀನ್, ಸುಳ್ಯ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಎಂ ಜೆ ಎಂ ಪೆರಡ್ಕ ಇದರ ಅಧ್ಯಕ್ಷರಾದ ಎಸ್ ಆಲಿ ಹಾಜಿ ಕಲ್ಲುಗುಂಡಿ, ಶಾಫಿ ಕುತ್ತಮೊಟ್ಟೆ, ಅರಂಬೂರು ಮಸೀದಿ ಪ್ರಾಧ್ಯಾಪಕರಾದ ಬಶೀರ್ ಮುಸ್ಲಿಯಾರ್, ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ, ಕೋಶಾಧಿಕಾರಿ ಅಬ್ದುಲ್ ರಝಾಕ್ ಕರಾವಳಿ, ಸುಳ್ಯ ವಲಯ ಕಾರ್ಯದರ್ಶಿ ಆಶಿಕ್ ಸುಳ್ಯ , ಎಂ ಜೆ ಎಂ ಪೇರಡ್ಕದ ಕಾರ್ಯದರ್ಶಿ ಟಿ ಎಂ ರಝಾಕ್ ಹಾಜಿ, ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಾಸಿರ್ ಅರಂಬೂರು ಮಾದಕ ದ್ರವ್ಯದ ವ್ಯಸನದ ವಿರುದ್ದ ಪ್ರತಿಜ್ಞಾ ವಿಧಿ ಬೋಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.