ಚಿತ್ರದುರ್ಗ(ವಿಶ್ವಕನ್ನಡಿಗ ನ್ಯೂಸ್): ನಗರದ ದಾರುಲ್ ಇಹ್ಸಾನ್ ಮದ್ರಸದಲ್ಲಿ ಎಲ್ಲಾ ವರ್ಷ ನಡೆಸಿಕೊಂಡು ಬರುವ ಮಕ್ಕಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಮಹಬ್ಬ-22 ಮತ್ತು ಜಶ್ನೇ-ಜೀಲಾನಿ ಗೌಸುಲ್ ವರಾ ಕಾನ್ಫರೆನ್ಸ್ ಭಾನುವಾರ (13/11) ಬೆಳಿಗ್ಗೆ ಹತ್ತು ಗಂಟೆಯಿಂದ ಮದ್ರಸ ಹಾಲ್ ನಲ್ಲಿ ನಡೆಯಿತು.
ನೂರರಷ್ಟು ಮಕ್ಕಳು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದರು. ನಾತ್, ವಿವಿಧ ಬಾಷೆಗಳಲ್ಲಿ ಬಯಾನ್, ಖಿರಾಅತ್, ಹಿಫ್ಝ್, ಹದೀಸ್, ಕಿತಾಬ್ ರೀಡಿಂಗ್, ಕ್ವಿಝ್ ಮುಂತಾದ ಕಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದರು.
ಮದ್ರಸ ಅಧ್ಯಾಪಕರಾದ ಎಮ್ಮೆಸ್ಸೆಂ ಜುನೈದ್ ಸಖಾಫಿ ಮತ್ತು ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮವನ್ನು ಮುನ್ನಡೆಸಿದರು. ಇಹ್ಸಾನ್ ಕರ್ನಾಟಕ ಇಒ ಅನ್ವರ್ ಅಸದಿ ಮಕ್ಕಳಿಗೆ ಮೋಟಿವೇಶನ್ ತರಗತಿ ನೀಡಿದರು. ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ರಝ್ವಿ, ಎಸ್ಸೆಸ್ಸೆಫ್ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಫತಹ್ ಝುಲ್ಕರ್ನೇನ್, ಫಿನಾನ್ಸ್ ಕಾರ್ಯದರ್ಶಿ ಅಶ್ಫಾಕ್, ಸದಸ್ಯರಾದ ಹಾಶಿರ್ ಅಹ್ಮದ್, ಜುನೈದ್, ಸಾದಿಕ್, ಉಪಸ್ಥಿತರಿದ್ದರು.
ಎಂಟು ವರ್ಷದಿಂದ ಚಿತ್ರದುರ್ಗ ನಗರದಲ್ಲಿ ದಾರುಲ್ ಇಹ್ಸಾನ್ ಮದ್ರಸ ಕಾರ್ಯಾಚರಿಸುತ್ತಿದ್ದು, ಹಲವಾರು ವಿದ್ಯಾರ್ಥಿಗಳಿಗೆ ಈ ಮದ್ರಸ ಅರಿವಿನ ಅಕ್ಷರ ಔತಣವನ್ನು ನೀಡಿದೆ. ಶಿಕ್ಷಣ ಕ್ರಾಂತಿಯನ್ನು ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.