ದೋಹಾ(ವಿಶ್ವಕನ್ನಡಿಗ ನ್ಯೂಸ್): ಖತ್ತರ್ ಪ್ರವಾಸದಲ್ಲಿರುವ ಸಾಮಾಜಿಕ ಕಾರ್ಯಕರ್ತ, ಮಕ್ಕಳ ಹಕ್ಕುಗಳ ಹೋರಾಟಗಾರ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ ವಿಜೇತ, ಹಾಫಿಝ್ ಮೊಹಮ್ಮದ್ ಆಸಿಮ್ ವೆಲಿಮನ್ನ (ಕೇರಳ) ರವರನ್ನು ಕೆಸಿಎಫ್ ಖತ್ತರ್ ರಾಷ್ಟ್ರೀಯ ನಾಯಕರು ದಿನಾಂಕ 07-12-2022 ರಂದು ದೋಹಾದಲ್ಲಿ ಭೇಟಿ ನೀಡಿದರು.
ಹುಟ್ಟಿನಿಂದಲೇ 90% ಶೇಕಡಾವಾರು ದೈಹಿಕ ಅಸಮರ್ಥತೆಯಿಂದ ಬಳಲುತ್ತಿದ್ದರೂ, ಆತ್ಮವಿಶ್ವಾಸದೊಂದಿಗೆ ಖುರ್’ಆನ್ ಕಂಠಪಾಠಗೊಳಿಸಿ ಹಾಫಿಝ್ ಪದವಿ ಅಲಂಕರಿಸುವುದರ ಜೊತೆಗೆ ಹಲವಾರು ಸಾಧನೆಗಳನ್ನು ತೋರಿಸಿದಕ್ಕಾಗಿ ಗೌರವಸೂಚಕವಾಗಿ ಖತ್ತರ್ ಕೆಸಿಎಫ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಖತ್ತರ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ, ಕೋಶಾಧಿಕಾರಿ ಮುನೀರ್ ಮಾಗುಂಡಿ, ಸಂಘಟನಾ ಅಧ್ಯಕ್ಷ ಮಿರ್ಶಾದ್ ಕನ್ಯಾನ, ಸಂಘಟನಾ ಕಾರ್ಯದರ್ಶಿ ರಿಶಾದ್ ಮದುವನ, ನಾಯಕರಾದ ಇಮ್ರಾನ್ ಕೂಳೂರು, ಆಶಿಕ್ ಬೈರಿಕಟ್ಟೆ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.