ಕುವೈಟ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 9/12/2022 ರ ಶುಕ್ರವಾರ ಜುಮಾ ನಮಾಝಿನ ಬಳಿಕ ಅಲ್ ವಝನ್ ಹಾಲ್ ನಲ್ಲಿ 2023 ರ ಫೆಬ್ರವರಿ ತಿಂಗಳಲ್ಲಿ ನಡೆಸುವಂತಹ ಕೆಸಿಎಫ್ ಫೌಂಡೇಶನ್ ಡೇ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಡ್ ಉಸ್ತಾದರ ಅಧ್ಯಕ್ಷತೆ ಯಲ್ಲಿ ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರು ಸೌತ್ ಝೋನ್ ಮತ್ತು ನಾರ್ತ್ ಝೋನ್, ಮತ್ತು ಝೋನ್ ಗೆ ಒಳಪಟ್ಟ, ಫಾಹೀಲ್, ಮಹಬುಲ, ಫರ್ವನಿಯ, ಸಾಲ್ಮಿಯ, ಸಿಟಿ ಮತ್ತು ಜಹರ ಈ 6 ಸೆಕ್ಟರ್’ಗಳನ್ನೊಳಗೊಂಡ ಸದಸ್ಯರ ಸಮ್ಮುಖದಲ್ಲಿ, ಮತ್ತು ತಮ್ಮ ಸೂಚನೆ ಅನುಮೋದನೆ ಯೊಂದಿಗೆ 2023ಫೆಬ್ರವರಿ ತಿಂಗಳಲ್ಲಿ ನಡೆಯುವ kcf ಫೌಂಡೇಶನ್ ಡೇ ಕಾರ್ಯಕ್ರಮದ ಸ್ವಾಗತ ಸಮಿತಿಯ ಈ ಕೆಳಗಿನ ನಾಯಕರನ್ನು ಆಯ್ಕೆ ಮಾಡಲಾಯಿತು.
ಛೇರ್ಮನ್ ಆಗಿ ಬಹು ಉಮರ್ ಝುಹುರಿ, ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ, ಫೈನಾನ್ಸ್ ಕಂಟ್ರೋಲರ್ ಆಗಿ ಜನಾಬ್ ಇಬ್ರಾಹಿಂ ವೇಣೂರು, ಇವರನ್ನು ಆಯ್ಕೆ ಮಾಡಲಾಗಿದೆ ಮತ್ತು KCF dayಯ ಕಾರ್ಯಕ್ರಮದ ಯಶಸ್ವಿ ಗಾಗಿ I TEAM ಸದಸ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು ಕೊಡಲಾಗಿದೆ, ಪೋಸ್ಟರ್ ನ ಜವಾಬ್ದಾರಿಯನ್ನು ಪ್ರಕಾಶನ ಮತ್ತು ಪ್ರಚಾರ ವಿಭಾಗ ನಡೆಸುವುದು ಎಂಬಿತ್ಯಾದಿ ಜವಾಬ್ಧಾರಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ 2023 ರ ಕ್ಯಾಲಂಡರನ್ನು ಜನಾಬ್ ಮೂಸ ಇಬ್ರಾಹಿಂ, ಉಮರ್ ಝುಹುರಿ ಸಾಹುಲ್ ಹಮೀದ್ ಸಹದಿ ಝುಹುರಿ ಅಬ್ದುಲ್ ಮಲಿಕ್,ಅಬ್ದುಲ್ ಲತೀಫ್ ಬಂಟ್ವಾಳ, ತೌಫೀಕ್ ಕಾರ್ಕಳ, ಸಮೀರ್ ಇಂಜಿನಿಯರ್ ಮುಸ್ತಫಾ ಉಳ್ಳಾಲ,ಅಝೀಝ್ ತಿಂಗಳಾಡಿ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ನಾಯಕರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು,ಮತ್ತು ಕೆಸಿಎಫ್ ಡೇ ಪ್ರತಿಭೋತ್ಸವ ಕಾರ್ಯ ನಿರ್ವಾಹಕರಾಗಿ ಶಿಕ್ಷಣ ಅಧ್ಯಕ್ಷರು ಬಹುಮಾನ್ಯ ಬಾದುಷಾ ಸಖಾಫಿ ಉಸ್ತಾದರನ್ನು ಆಯ್ಕೆ ಮಾಡಲಾಯಿತು.
ವರದಿ ಇಬ್ರಾಹಿಂ ವೇಣೂರು ಪ್ರಕಾಶನ ಮತ್ತು ಪ್ರಚಾರ ವಿಭಾಗ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.