ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಲೀಲ್ ಹತ್ಯೆ ಖಂಡಿಸಿ ಹಾಗೂ ಈ ಹತ್ತಿರದ ದಿನಗಳಲ್ಲಿ ಕರಾವಳಿಯಲ್ಲಿ ನಡೆದ ಕೊಲೆಗಳು, ಪೋಲಿಸ್ ಗಿರಿ ಮಂದೀದವುಗಳನ್ನು ಮುಂದಿಟ್ಟು ಮಂಗಳೂರಿನ ಕ್ಲಾಕ್ ಟವರ್ ಬಳಿ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ ಫೆಡರೇಶನ್(KMJ, SYS,SS) ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು ಸಾವಿರಾರು ಜನರು ಜಮಾಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಸ್ಲಿಂ ಜಮಾಅತ್ತಿನ ರಾಜ್ಯ ನಾಯಕರುಗಳು, SYS ಹಾಗೂ SSF ನ ರಾಜ್ಯ ನಾಯಕರುಗಳು, ಹಾಗೂ ಕೆಲವು ರಾಜಕೀಯ ನೇತಾರರು ಪಾಲ್ಗೊಂಡಿದ್ದಾರೆ.
View this post on Instagram A post shared by VK News (@vknews_media)
A post shared by VK News (@vknews_media)
ಸಭೆಗೆ ಜಿಲ್ಲಾ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಬಂದಿದ್ದು ಮನವಿಯನ್ನು ಸ್ವೀಕರಿಸಿದ್ದಾರೆ. ಅದಲ್ಲದೆ ಜಿಲ್ಲೆಯಲ್ಲಿ ಇನ್ನು ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಸುರಕ್ಷತೆ ವಹಿಸುತ್ತೇವೆ. ಹಾಗೂ ಜಲೀಲ್ ಹತ್ಯೆಯ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.