ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರಿ. ಎಲಿಮಲೆ ಇದರ ರೂಬಿ ಜ್ಯುಬಿಲಿ ಪ್ರಯುಕ್ತ ಎಲಿಮಲೆ ಹಾಗೂ ತಳೂರು ಅಂಗನವಾಡಿಗಳಿಗೆ ಕೊಡುಗೆ ನೀಡಲಾಯಿತು.
ಎಲಿಮಲೆ ಅಂಗನವಾಡಿಗೆ 2 ಫ್ಯಾನ್ ಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲುರವರಿಗೆ ಸಮಿತಿಯ ಉಪಾಧ್ಯಕ್ಷ ಜಿ.ಎಸ್ ಅಬ್ದುಲ್ಲ ರವರು ಹಸ್ತಾಂತರಿಸಿದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಶೈಲೇಶ್ ಅಂಬೆಕಲ್ಲುರವರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ತಳೂರು ಅಂಗನವಾಡಿಗೆ ಮಿಕ್ಸಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ದುರ್ಗಾದಾಸ್ ಮೆತ್ತಡ್ಕ ಇವರಿಗೆ ಸಂಸ್ಥೆಯ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಕಾದರ್ ಪಾಣಾಜೆ, ಹಾರಿಸ್ ಪಳ್ಳಿಕಲ್, ಶಿಹಾಬ್ ಎಲಿಮಲೆ, ಅಬ್ದುಲ್ ಕಾದರ್ ಅತ್ತಿಮಾರಡ್ಕ , ಅಂಗನವಾಡಿ ಸಹಾಯಕಿಯರು , ಪುಟಾಣಿ ಮಕ್ಕಳು ಉಪಸ್ಥಿತರಿದ್ದರು . ಸಮಿತಿ ಕಾರ್ಯದರ್ಶಿ ಸೂಫಿ ಎಲಿಮಲೆ ನುಸ್ರತ್ ರೂಬಿ ಜ್ಯುಬಿಲಿ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ ಹಾಗೂ ರೋಹಿಣಿ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.