ಮುಂಬೈ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಮಹಾ ಸಮ್ಮೇಳನ ಇಂದು ಮುಂಬೈ ಮಹಾನಗರದ ಗೋವಂಡಿ ಡಿಯೋನರ್ ಮೈದಾನದಲ್ಲಿ ಉದ್ಘಾಟನೆ ಗೊಳ್ಳಲಿದೆ.
ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಡಾ ಮುಹಮ್ಮದ್ ಫಾರೂಖ್ ನಈಮಿ ಅಧ್ಯಕ್ಷತೆ ವಹಿಸಲಿದ್ದು ಅರಬ್ ಲೀಗ್ ಅಂಬಾಸಿಡರ್ ಯೂಸುಫ್ ಮುಹಮ್ಮದ್ ಅಬ್ದುಲ್ಲಾ ಜಮೀಲ್ ಉದ್ಘಾಟನೆ ಮಾಡಲಿದ್ದು ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷ ಯುಟಿ ಅಬ್ದುಲ್ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಕಾಲ ವಿವಿಧ ಸೆಮಿನಾರ್ಗಳು ನಡೆಯಲಿದ್ದು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಮುಖರು ಭಾಗವಹಿಸಲಿದ್ದಾರೆ. ನವೆಂಬರ್ 26 ರವಿವಾರ ಸಂಜೆ ನಡೆಯಲಿರುವ ಸಮಾರೋಪ ಮಹಾ ಸಮ್ಮೇಳನವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಉದ್ಘಾಟನೆ ಮಾಡಲಿದ್ದು ಸಯ್ಯಿದ್ ಆದಿಲ್ ಜಿಫ್ರೀ ಮದೀನಾ ಮುನವ್ವರ, ಅಲ್ಲಾಮಾ ಶೈಖ್ ಯಹ್ಯಾ ರಾಡೋಸ್ ಅಮೆರಿಕಾ, ಸಯ್ಯಿದ್ ಅಫೀಫುದ್ದೀನ್ ಜೀಲಾನಿ ಬಾಗ್ದಾದ್, ಸಯ್ಯಿದ್ ಸ್ವಬಾಹುದ್ದೀನ್ ರಿಫಾಯೀ, ಅಲ್ಲಾಮಾ ಶೈಖ್ ಅಲಿಯ್ಯುಲ್ ಹಾಶಿಮೀ ದುಬೈ, ಸಯ್ಯಿದ್ ಮೆಹ್ದಿ ಮಿಯಾ ಸಾಹೇಬ್ ಅಜ್ಮೀರ್ ಷರೀಫ್ , ಸಯ್ಯಿದ್ ಅಫ್ಝಲುದ್ದೀನ್ ಜುನೈದಿ ಗುಲ್ಬರ್ಗಾ, ಅಬೂಸುಫ್ಯಾನ್ ಮದನಿ ಕರ್ನಾಟಕ, ಶಾಫಿ ಸಅದಿ ಬೆಂಗಳೂರು ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.