ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪ್ರಸಕ್ತ ಕೋವಿಡ್-19ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಪೋಷಕರಿಗೆ ಉಂಟಾಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನ ಅಡ್ಯಾರು ಸಮೀಪದ ಬರಕಾ ಇಂಟರ್ನ್ಯಾಷನಲ್ ಸಂಸ್ಥೆಯು ತಮ್ಮ ಮಕ್ಕಳ 2020-21ನೇ ಸಾಲಿನ ಶಾಲಾ ಶುಲ್ಕದಲ್ಲಿ 33% ಕಡಿತಗೊಳಿಸುವ ಮಹತ್ವದ ನಿರ್ಧಾರಕೈಗೊಂಡಿದೆ. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್, ಅಕಾಡೆಮಿಕ್ ಡೈರೆಕ್ಟರ್, ಪ್ರಿನ್ಸಿಪಲ್, ಮ್ಯಾನೇಜರ್, ಪಿ.ಆರ್.ಒ ಗಳೊಂದಿಗೆ ನಡೆಸಿರುವ ಸರಣಿ ಸಭೆಗಳ ನಂತರ ಮ್ಯಾನೇಜ್ ಮೆಂಟ್ ಈ ನಿರ್ಧಾರ ಕೈಗೊಂಡಿದೆ.
ಪ್ರಸಕ್ತ ಆರ್ಥಿಕ ಸಂಕಷ್ಟದ ಸನ್ನಿವೇಷದಲ್ಲಿ ಶಾಲೆ ಕೈಗೊಂಡಿರುವ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸದಾ ಬಧ್ಧವಾಗಿರುವ ಸಂಸ್ಥೆಯು ಶಿಕ್ಷಕರ ಸಂಬಳ, ಐಟಿ ಸಾಫ್ಟ್ ವೇರ್, ಸ್ಮಾರ್ಟ್ ಕ್ಲಾಸ್ ಮುಂತಾದ ಖರ್ಚುಗಳ ನಡುವೆ ಈ ನಿರ್ಧಾರವು ಸಂಸ್ಥೆಗೆ ದೊಡ್ಡ ಹೊರೆಯಾಗಿದ್ದರೂ ಸಹ, ಪೋಷಕರ ಪ್ರಸಕ್ತ ಪರಿಸ್ಥಿತಿಗೆ ಸ್ಪಂದಿಸುವ ಸಲುವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಮಹಮ್ಮದ್ ಅಶ್ರಫ್ ಅವರು ಇಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.